ಮಹಿಳಾ ದಿನಾಚಾರಣೆ: ಸರ್ಕಾರ ಕಲಾವಿದರ ನೆರವಿಗೆ ಬರಬೇಕು

Women's Day: Government should come to the aid of artists

ಮಹಿಳಾ ದಿನಾಚಾರಣೆ: ಸರ್ಕಾರ ಕಲಾವಿದರ ನೆರವಿಗೆ ಬರಬೇಕು 

ಹಾವೇರಿ 08: ಗೆಳೆಯರ ಬಳಗ ಜೆ.ಎಚ್‌.ಪಟೇಲ ಸರ್ಕಲ್ ಹಾವೇರಿಯಲ್ಲಿ ಜಿಲ್ಲಾ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾವೇರಿ ಇಲ್ಲಿ ಜಿಲ್ಲಾ ಕಲಾವಿದರ 8ನೇ ವಾರ್ಷಿಕೋತ್ಸವ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆ ಉದ್ಘಾಟಿಸಿ ಡಾ. ಗುಹೇಶ್ವರ ಪಾಟೀಲ, ಆಯುರ್ವೇಧ, ಮಧುಮೇಹತಜ್ಞರು ಮಾತನಾಡುತ್ತಾ ನಮ್ಮ ಜಿಲ್ಲೆಯಾಧ್ಯಾಂತ ಅನೇಕ ಬಡ ಕಲಾವಿದರಿದ್ದು, ಅವರ ಯೋಗಕ್ಷೇಮದ ವಿಚಾರವನ್ನು ಯಾವವೊಬ್ಬ ಜನಪ್ರತಿ ನಿಧಿಯೂ ಮಾಡುತ್ತಿಲ್ಲ, ಅನೇಕ ಕಲಾವಿಧರ ಬದುಕು ತೊಂದರೆಯಲ್ಲಿ ಜೀವನ ಸಾಗಿಸುತ್ತಿರುತ್ತಾರೆ, ಸರ್ಕಾರ ಅಂತಹವರ ನೆರವಿಗೆ ಧಾವಿಸಬೇಕೆಂದು ಅಭಿಪ್ರಾಯಪಟ್ಟರು. 

ಕಲಾವಿದರಾದ ವೀರಭದ್ರಗೌಡ ಹೊಮ್ಮರಡಿಯವರು ತಿಂಗಳು ಅಲ್ಪ ಮಾಶಾಸನ ಸಕಾಲಕ್ಕೆ ಕಲಾವಿದರಿಗೆ ದೊರೆಯುವ ವ್ಯವಸ್ಥೆಯಾಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಅಧ್ಯಕ್ಷತೆಯನ್ನು ಡಾ. ತಿಪ್ಪೇಸ್ವಾಮಿ ಹೊಸಮನಿ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಬಡಿವೆಪ್ಪ ಆನವಟ್ಟಿ, ವಿರೇಶ ಶಂಕಿನಮಠ, ಬಸವರಾಜ ಸಾವಕ್ಕಳವರ, ಚೌಡಪ್ಪ ಮಾದರ, ಇನ್ನೂ ಮುಂತಾದವರು ಇದ್ದರು. ಸ್ವಾಗತವನ್ನುಡಾ. ಕರಬಸಪ್ಪ ಪೂಜಾರ, ವಂದನಾರೆ​‍್ಣಯನ್ನು ಬಸವರಾಜ ಹರಿಹರ ನಡೆಸಿಕೊಟ್ಟರು. ಅನೇಕ ಕಲಾವಿದರು ಭಾಗವಹಿಸಿದರು. ನಂತರ ಜಾನಪದ ಸಂಗೀತವನ್ನು ಶಿವಾಜಿ ಬಾರ್ಕಿತಂಡದವರು ಹಾಗೂ ಗೌಡ್ರಗದ್ದಲ ನಾಟಕವನ್ನು ಚನ್ನಬಸಪ್ಪ ಯಲದಳ್ಳಿ ಸಾ. ಬೆನಕನ ಕೊಂಡ ತಂಡದವರು ಮನೋಜ್ಞವಾಗಿ ಅಭಿನಯಿಸಿದರು.