ನೀರಿನ ಸಮಸ್ಯೆ, ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟಕ್ಕೆ ಸಿದ್ಧ: ನಾಡಕುರ್ಣಿ

ಲೋಕದರ್ಶನ ವರದಿ 

ಅಂಕೋಲಾ 16: ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ತೀವ್ರಗೊಂಡಿರುವ ನೀರಿನ ಸಮಸ್ಯೆಯನ್ನು ಮೇ.20ರೊಳಗೆ ಸಮರ್ಪಕವಾಗಿ ನಿಭಾಯಿಸಿ ಜನರ ನೀರಿನ ಬವಣೆಯನ್ನು ನೀಗಿಸಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಅಂಕೋಲಾ ಘಟಕ ಮತ್ತು ಪುರಸಭಾ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗಳಿಗೆ ಬುಧವಾರ ಮನವಿ ಅಪರ್ಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಅರುಣ ನಾಡಕಣರ್ಿ ಪುರಸಭೆ ವ್ಯಾಪ್ತಿಯಲ್ಲಿ 90 ಸರಕಾರಿ ಬಾವಿಗಳಿದ್ದು ಸುಮಾರು 80ರಷ್ಟು ಬಾವಿಗಳಲ್ಲಿ ನೀರು ಸಿಗುತ್ತದೆ. ಅದರಲ್ಲಿನ ಕೆಲವು ಬಾವಿಗಳ ಹೂಳೆತ್ತಿದರೆ ಇನ್ನಷ್ಟು ನೀರು ದೊರಕಬಹುದು. ಅನೇಕ ಬಾವಿಗಳಿಗೆ ಪಂಪಸೆಟ್ ಅಳವಡಿಸಿ ನೀರನ್ನು ತೆಗೆ ಯಲಾಗುತ್ತಿದ್ದು ಅಂತಹ ಕಡೆ ಸಾರ್ವಜನಿಕರಿಗೆ ನೀರು ಪಡೆಯಲು ಬೆದರಿಕೆಗಳು ಬರುತ್ತಿವೆ. ಇದರ ಕುರಿತು ತನಿಖೆ ನಡೆಸಿ ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕು.

ತಾಲೂಕಿನ ಜಲ ಮೂಲವಾದ ಗಂಗಾವಳಿ ನದಿ ನೀರು ಇಂದು ಸಂಪೂರ್ಣವಾಗಿ ಬತ್ತುತ್ತಿದೆ. ಗಂಗಾವಳಿ ನದಿಯ ನೀರಿನ ಜರಿಮೂಲ ಅರಬೈಲ್ ಮತ್ತು ಗುಳ್ಳಾಪುರ ಭಾಗದಲ್ಲಿ 20 ರಿಂದ 50 ಎಚ್ಪಿಗೂ ಅಧಿಕ ಪಂಪಸೆಟ್ ಅಳವಡಿಸಿ ನೀರನ್ನು ತೆಗೆಯುತ್ತಿದ್ದಾರೆ. ಮೊದಲು ಪಂಪಸೆಟ್ ಅಳವಡಿಸಿದನ್ನು ತೆಗೆದು ಬತ್ತು ತ್ತಿರುವ ನೀರನ್ನು ಉಳಿಸಿಕೊಂಡರೆ ಮುಂದಿನ ದಿನದಲ್ಲಿ ತಾಲೂಕಿನ ಜನರಿಗೆ ನೀರಿನ ಅಭಾವವನ್ನು ಕಡಿಮೆ ಮಾಡಬಹುದು. ಜಿಲ್ಲಾಧಿಕಾರಿಗಳು ಪಂಪಸೆಟ್ ಅಳವಡಿಸಿ ನೀರನ್ನು ತೆಗೆಯುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ ಪುರಸಭೆ ವ್ಯಾಪ್ತಿಯಲ್ಲಿ ಹಿಂದೆಂದು ಕಂಡರಿಯದ ನೀರಿನ ಸಮಸ್ಯೆ ಇಂದು ಬಂದೊದಗಿದೆ. ಈ ಸಮಸ್ಯೆಗೆ ವಾರ್ಡವಾರು ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ಮತ್ತು ಸಿಂಟ್ಯಾಕ್ಸ್ ಮೂಲಕ ಸರಬರಾಜು ಮಾಡುವ ನೀರು ಟ್ಯಾಂಕರ ಭತರ್ಿ ಮಾಡದೆ ಅರ್ಧ ಟ್ಯಾಂಕ್ ತುಂಬಿಕೊಂಡು ಹೋಗುತ್ತಿದ್ದಾರೆ ಎನ್ನುವ ಮಾತಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಓರ್ವ ಸಿಬ್ಬಂದಿಯನ್ನು ನೇಮಿಸಿ ಪರಿಶೀಲಿಸಿ ನೀರನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಬಾಸ್ಕರ ನಾವರ್ೇಕರ ಮಾತನಾಡಿ ಎಪ್ರಿಲ್ ಮೇ ತಿಂಗಳಲ್ಲಿ ಮದುವೆ, ಮುಂಜಿ ಹಾಗೂ ಧಾಮರ್ಿಕ ಕಾರ್ಯಕ್ರಮಗಳು ಮತ್ತು ಬಂಡಿಹಬ್ಬಗಳಿಗೆ ಅನೇಕ ಸಂಖ್ಯೆಯಲ್ಲಿ ಬಂಧುಮಿತ್ರರು ತಾಲೂ ಕಿಗೆ ಆಗಮಿಸುವುದರಿಂದ ನೀರಿನ ಬೇಡಿಕೆ ಹೆಚ್ಚಾಗುತ್ತದೆ. ಇದನ್ನು ಅಥರ್ೈಸಿಕೊಂಡು ಸೂಕ್ತ ಕ್ರಮಕೈಗೊಳ್ಳಿ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜಯಾ ನಾಯ್ಕ ಶಾಂತಲಾ ನಾಡಕಣರ್ಿ, ಹೇಮಾ ಆಗೇರ, ನಾಗರಾಜ ಐಗಳ, ಸೂರಜ ನಾಯ್ಕ, ರೇಖಾ ಗಾಂವಕರ, ತಾರಾ ನಾಯ್ಕ, ತಾರಾ ಗಾಂವಕರ, ಮೊಹ್ಮದ್ ಇಕ್ಬಾಲ್, ರಾಮಾ ನಾಯಕ, ರಾಮಚಂದ್ರ ಹೆಗಡೆ, ಸಂಜಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.