ಗದಗ 26: ನಿಭರ್ೀತ ಮತ್ತು ನಿಷ್ಪಕ್ಷಪಾತ ಚುನಾವಣೆಗೆ ದೋಷರಹಿತ ಮತದಾರ ಪಟ್ಟಿಗಳು ಮುಖ್ಯ. ಯಾವ ಒಬ್ಬ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗೆ ಇರದಂತೆ ಸರ್ವ ಪ್ರಯತ್ನಗಳನ್ನು ಮಾಡಬೇಕೆಂಬುದೇ ಚುನಾವಣಾ ಆಯೋಗದ ಆಶಯ. ಅದನ್ನು ನಿರ್ವಹಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ರಾಜ್ಯ ಕೈಗಾರಿಕಾ ಇಲಾಖೆ ಆಯುಕ್ತ ಹಾಗೂ ಗದಗ ಜಿಲ್ಲಾ ಮತದಾರ ಪಟ್ಟಿ ಪರಿಷ್ಕರಣೆ ವೀಕ್ಷಕರಾದ ದರ್ಪಣ ಜೈನ್ ನುಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಹೆಸರು ಸೇರ್ಪಡೆ , ದೋಷ ತಿದ್ದುಪಡಿ ಇತ್ಯಾದಿಗಳಿಗೆ ಆಕ್ಷೇಪಣೆ ಅಜರ್ಿ ಸ್ವೀಕರಿಸಿ ವಿಲೇವಾರಿ ಮಾಡುವಾಗ ತಿರಸ್ಕರಿಸಿದಲ್ಲಿ ಅದಕ್ಕೆ ಕಾರಣ ನೀಡಿ ಸಂಬಂಧಿತರಿಗೆ ಮಾಹಿತಿ ಒದಗಿಸಬೇಕು. ಕರಡು ಮತದಾರ ಪ್ರತಿಯನ್ನು ಬೂತ ಲೆವಲ್ ಮತಗಟ್ಟೆ ಅಧಿಕಾರಿಗಳು ಪರಿಶೀಲಿಸಿ ಭಾವಚಿತ್ರ, ಸರಿಯಾಗಿ ಇಲ್ಲದಿದ್ದಲ್ಲಿ ಅದನ್ನು ಸರಿಪಡಿಸಿ ಮತದಾರರ ಇತ್ತೀಚಿನ ಭಾವಚಿತ್ರ ಅಳವಡಿಕೆಗೆ ಹಾಗೂ ಕರಡು ಮತದಾರ ಪಟ್ಟಿ ಪರಿಷ್ಕರಣೆ ನಂತರ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಬದಲಾದಲ್ಲಿ ಹಳೆಯದರ ಬದಲಾಗಿ ಹೊಸ ಸಂಖ್ಯೆ ಚುನಾವಣಾ ಗುರುತಿನ ಚೀಟಿ ನೀಡಲು ಕ್ರಮ ಜರುಗಿಸಬೇಕು ಎಂದು ದರ್ಪಣ ಜೈನ್ ನುಡಿದರು.
ಜಿಲ್ಲೆಯಲ್ಲಿ ಕಾಲೇಜಿಗೆ ಹೋಗುವ ಯುವ ಮತದಾರರಲ್ಲದೇ ಕಾಲೇಜುಗಳಿಂದ ಹೊರಗಿರುವ ಯುವ ಮತದಾರರು ಸೇರ್ಪಡೆಗೆ ಇನ್ನು ಹೆಚ್ಚಿನ ಕ್ರಮಗಳ ಅಗತ್ಯವಿದೆ. ಇದಕ್ಕಾಗಿ ವಿವಿಧ ಸೌಲಭ್ಯಗಳನ್ನು ನೀಡುವ ಕೃಷಿ, ತೋಟಗಾರಿಕೆ, ವಿದ್ಯಾವೇತನ ನೀಡುವ ಸಮಾಜ ಕಲ್ಯಾಣ, ಹಿಂದುಳಿದ , ಅಲ್ಪಸಂಖ್ಯಾತರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿಯಡಿ ನೊಂದಾಯಿತ ಮತ್ತು ಪಡಿತರ ಚೀಟಿಯಲ್ಲಿ ದಾಖಲೆಗಳನ್ನು ಆಧರಿಸಿ ಯುವ ಮತದಾರರು ಅಥವಾ ಹೆಸರು, ಬಿಟ್ಟು ಹೋದ ಮತದಾರರ ನೊಂದಣಿಗೆ ಕನಿಷ್ಟ ಮುಂದಿನ ಪರಿಷ್ಕರಣೆಯಲ್ಲಾದರೂ ಆಗುವಂತೆ ಪ್ರತಿ ಮತಗಟ್ಟೆ ಅಧಿಕಾರಿಗಳು ಪ್ರಯತ್ನಿಸಬೇಕು. ಈ ಕಾರ್ಯಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು ಎಂದು ದರ್ಪಣ್ ಜೈನ್ ಸಲಹೆ ಮಾಡಿದರು.
ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಸ್ವೀಕರಿಸಿದ ಅಜರ್ಿಗಳ ವಿಲೇವಾರಿಗೆ ಇದೇ ದಿ. 31 ಕೊನೆಯ ದಿನವಾಗಿದೆ. ಜನೇವರಿಯಲ್ಲಿ ಪ್ರಕಟಗೊಳ್ಳುವ ಆಂತಿಮ ಮತದಾರ ಪಟ್ಟಿ ದೋಷ ರಹಿತ , ಎಲ್ಲ ಅರ್ಹ ಮತದಾರರು ಒಳಗೊಂಡ ಮಾದರಿ ಮತದಾರ ಪಟ್ಟಿ ತಯಾರಿಸಲು ಸಂಬಂಧಿತ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪರಿಷ್ಕರಣೆ ಸಂದರ್ಭದಲ್ಲಿ ಇಲ್ಲಿ ಅತೀ ಹೆಚ್ಚು ಅಥವಾ ಅತೀ ಕಡಿಮೆ ಹೆಸರುಗಳ ಸೇರ್ಪಡೆ, ತೆಗೆದುಹಾಕುವಿಕೆ ಆಗಿದೆ ಆಯಾ ಭಾಗಗಳನ್ನು ಪುನರ್ ಪರಿಶೀಲಿಸಿ ದೋಷರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮತದಾರರ ಅನುಕೂಲಕ್ಕಾಗಿ ಸಹಾಯವಾಣಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಬೇಕು. ಪರಿಷ್ಕರಣೆ ಅಂತಿಮ ದಿನ ಪೂರ್ವದಲ್ಲಿ ಮತಗಟ್ಟೆ ಹಾಗೂ ತಾಲೂಕಾ ಮಟ್ಟದಲ್ಲಿ ಮತಗಟ್ಟೆ ಅಧಿಕಾರಿಗಳು, ತಹಶೀಲ್ದಾರರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ ತಿದ್ದುಪಡಿ ಸೇರ್ಪಡೆ ಕುರಿತು ಮಾಹಿತಿ ನೀಡಬೇಕು. ಮತದಾರ ಪಟ್ಟಿಯಲ್ಲಿರುವ ಎಪಿಕ್ ಸಂಖ್ಯೆ ಚೀಟಿ ಮತದಾರರಲ್ಲೂ ಇರುವಂತೆ ಕ್ರಮ ಜರುಗಿಸಬೇಕು ಎಂದು ನುಡಿದ ದರ್ಪಣ್ ಜೈನ್ ತದನಂತರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಜರುಗಿಸಿ ಮತಗಟ್ಟೆ ಪರಿಷ್ಕರಣೆ ದೂರು ಸಮಸ್ಯೆಗಳ ಕುರಿತು ಚಚರ್ೆ ನಡೆಸಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದಶರ್ಿ ಟಿ. ದಿನೇಶ, ತಹಶೀಲ್ದಾರರುಗಳಾದ ಹೊಳೆಪ್ಪಗೋಳ, ಶ್ರೀನಿವಾಸ ಮೂತರ್ಿ, ಅಮರಾವದಗಿ, , ಕೋರಿಶೆಟ್ಟರ್, ಶಕುಂತಲಾ ಚೌಗಲೆ, ಭಮರಾಂಬ ಗುಬ್ಬಿಶೆಟ್ಟರ್ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.