ಲೋಕದರ್ಶನ ವರದಿ
ಕೊಪ್ಪಳ 19: ಮಹಾಯೋಗಿ ವೇಮನರ 607ನೇ ಜಯಂತಿಯನ್ನು ಶನಿವಾರ ಇಲ್ಲಿನ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸಂಘದ ಬ್ಯಾಂಕ್ ಆವರಣದಲ್ಲಿ ಜರುಗಿತು.
ಸಂಘ ಮತ್ತು ಬ್ಯಾಂಕಿನ ಅಧ್ಯಕ್ಷ ಚಂದ್ರಕಾಂತ್ ಸಿಂಗಟಾಲೂರರವರು ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಜಯಂತಿ ಆಚರಣೆಗೆ ಚಾಲನೆ ನೀಡಿದರು.
ನಂತರ ಬ್ಯಾಂಕಿನ ಸಭಾಭವನದಲ್ಲಿ ಎರ್ಪಡಿಸಿದ ಸರಳ ಸಾಂಖೇತಿಕ ಸಮಾರಂಭವನ್ನು ಉದ್ದೆಶಿಸಿ ಮತನಾಡಿ ವೇಮನರ ಆದರ್ಶ ಪ್ರತಿಯೊಬ್ಬರು ಪಾಲಿಸಬೇಕು, ಎಲ್ಲರು ಒಗ್ಗಟ್ಟಾಗಿ ಸಮಾಜದ ಸಂಘಟನೆ ಮುನ್ನೆಡಿಸಿಕೊಂಡು ಹೋಗಬೇಕು, ಮಹಾಯೋಗಿ ವೇಮನರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಸಂಘ ಮತ್ತು ಬ್ಯಾಂಕಿನ ಅಧ್ಯಕ್ಷ ಚಂದ್ರಕಾಂತ್ ಸಿಂಗಟಾಲೂರ ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿದರ್ೇಶಕ ಸದಸ್ಯರಾದ ಶಾರದಮ್ಮ ಕವಲೂರು, ಶರಣಗೌಡ ಪಾಟೀಲ್, ಸಿದ್ದನಗೌಡ ಹಿರೇಗೌಡ್ರ ಹಾಗೂ ಸಮಾಜದ ಮುಖಂಡ ಶಿವರೆಡ್ಡಿ ದೇವರೆಡ್ಡಿ ಅಲ್ಲದೇ ಬ್ಯಾಂಕಿನ ಸಿಬ್ಬಂಧಿ ವ್ಯವಸ್ಥಾಪಕ ಬಸವರಾಜ ರಾಮದುರ್ಗ ಮತ್ತು ಬಸವರಾಜ ಅಂಗಡಿ ಸೇರಿದಂತೆ ಅನೇಕರು ಪಾಲ್ಗೊಂಡ್ಡಿದ್ದರು.