ಹೆಚ್ ಎಸ್ ಕೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ10 ತರಗತಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ಬಳ್ಳಾರಿ 30: ನಗರದಲ್ಲಿ ವೀ ವಿ ಸಂಘದ ಹಾನಗಲ್ಲು ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ನಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಿಗೆ "ಟ್ಯಾಲೆಂಟ್ ಹಂಟ್" ಕಾರ್ಯಕ್ರಮ ಇಂದು ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಲ್ಲೇದ ಪ್ರಭುಲಿಂಗ ಉದ್ಘಾಟನೆ ಮಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಲು ಇದನ್ನು ಆಯೋಜಿಸಿದೆ. ಪಠ್ಯದ ಜೊತೆ ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು.ಪ್ರಂಬಂಧ, ಚಿತ್ರಕಲೆ, ತಾಂತ್ರಿಕ, ರಸ ಪ್ರಶ್ನೆ, ಟೈಪಿಂಗ್ ಮತ್ತು ತ್ಯಾಜ್ಯ ವಸ್ತುವಿನಿಂದ ಉಪಯೋಗಿಕ ವಸ್ತುಗಳನ್ನಾಗಿ ಮಾಡುವುದು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.ಸ್ಪರ್ಧೆಯಲ್ಲಿ ಬಳ್ಳಾರಿಯ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ತೀಪುಗಾರರಾಗಿ ಅಭಿನಯ, ಆರತಿ ಶಿವಪ್ರಸಾದ್ ಮತ್ತು ಎ.ಎಂ.ಪಿ.ವೀರೇಶಸ್ವಾಮಿ ಆಗಮಿದ್ದರು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು.ಪ್ರಾಂಶುಪಾಲ ಬಿ. ಶ್ರೀಶೈಲಗೌಡ ಉಪಸ್ಥಿತರಿದ್ದರು.ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಉಪನ್ಯಾಸಕ ರವೀಂದ್ರ ಹಿರೇಮಠ ಮಾಡಿದರೆ, ಕುಲ್ಲಯ್ಯ ಸ್ವಾಮಿಯವರು ವಂದನಾರೆ್ಣಯನ್ನು ನಡೆಸಿಕೊಟ್ಟರು.