ಲೋಕದರ್ಶನ ವರದಿ
ಇಂದು ವಿಶ್ವದಾದ್ಯಂತ ಅಸ್ತಮಾ ದಿನ ಆಚರಣೆ
ಕಾಗವಾಡ, 05 : "ಎಲ್ಲರಿಗೂ ಇನ್ಹೇಲ್ಡ್ ಚಿಕಿತ್ಸೆಗಳು ಲಭ್ಯವಾಗುವಂತೆ ಮಾಡಿ" ಎಂಬ ಘೋಷವಾಕ್ಯದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮೇ ತಿಂಗಳ ಮೊದಲ ಮಂಗಳವಾರ ದಿ. 6 ರಂದು ವಿಶ್ವದಾದ್ಯಂತ ವಿಶ್ವ ಅಸ್ತಮಾ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ನಿಮಿತ್ಯವಾಗಿ ಸಾಂಗಲಿ ನಗರದ ಸ್ವಾಸ್ ಲೈಫ್ ಲೈನ್ ಸೆಂಟರ್‌ನ ಖ್ಯಾತ ಎದರೋಗ ವಿಶೇಷ ತಜ್ಞ ಡಾ. ಅನಿಲ ಮಡಕೆ ಅಸ್ತಮಾ ಕಾಯಿಲೆಯ ನಿಯಂತ್ರಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಅಸ್ತಮಾ ಕಾಯಿಲೆಯು ವಾಯು ಮಾರ್ಗಗಳ ಆವರಿಸುವ ದೀರ್ಘ ಕಾಲದ ಅಸ್ವಸ್ಥತೆಯಾಗಿದೆ. ವಿಶ್ವಾದ್ಯಂತ 260 ಮಿಲಿಯನ್ ಜನರು ಆಸ್ತಮಾದಿಂದ ಬಳಲುತ್ತಿದ್ದಾರೆ. ಈ ಅಸ್ವಸ್ಥತೆಯಲ್ಲಿ, ರೋಗಿಗಳು ಶ್ವಾಸನಾಳದ ಉರಿಯೂತ, ಅತೀ ಸೂಕ್ಷ್ಮತೆ ಮತ್ತು ಶ್ವಾಸನಾಳದ ಅಡಚಣೆಯಿಂದಾಗಿ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ.
ಅಸ್ತಮಾ ನಿಯಂತ್ರಣ ಮತ್ತು ರೋಗ ಲಕ್ಷಣದ ಪರಿಹಾರಕ್ಕೆ ಪ್ರಸ್ತುತ ಇನ್ಹೇಲ್ ಓಷಧಿಗಳು ಮುಖ್ಯ ಆಧಾರವಾಗಿವೆ. ಈ ಓಷಧಿಗಳು ನೇರವಾಗಿ ವಾಯು ಮಾರ್ಗಗಳನ್ನು ತಲುಪುತ್ತವೆ ಮತ್ತು ತಕ್ಷಣದ ಪರಿಣಾಮವನ್ನು ಬೀರುತ್ತವೆ. ಈ ಓಷಧಿಗಳ ಡೊಸೆಜ್ ಕಡಿಮೆ ಇರುವುದರಿಂದ, ಅಡ್ಡ ಪರಿಣಾಮಗಳು ಕಡಿಮೆಯಾಗುತ್ತವೆ. ಮತ್ತು ಇದರಿಮದ ಅಸ್ತಮಾದ ದೀರ್ಘಕಾಲಿನ ನಿಯಂತ್ರಣ ಸಾಧ್ಯವಾಗುತ್ತದೆ.
ಪರಿಸರದಲ್ಲಿನ ಧೂಳು, ಮೋಡ ಕವಿದ ವಾತಾವರಣ, ಬಲವಾದ ವಾಸನೆ, ತಂಪಾದ ಗಾಳಿ, ಸೂಕ್ಷ್ಮ ಜೀವಿಗಳು ಇತ್ಯಾದಿ ಅಂಶಗಳಿಂದ ಅಸ್ತಮಾ ಉಂಟಾಗುತ್ತದೆ. ಉಸಿರಾಟದ ತೊಂದರೆ, ಉಬ್ಬಸ, ಎದೆಯ ಬಿಗಿತ ಮತ್ತು ನಿರಂತರ ಕೆಮ್ಮು ಅಸ್ತಮಾದ ಲಕ್ಷಣಗಳಾಗಿವೆ.
ಅಸ್ತಮಾದ ಪ್ರತಿಯೊಂದು ಹಂತದಲ್ಲೂ ಇನ್ಹೇಲ್ ಓಷಧಿಗಳು ಪರಿಣಾಮಕಾರಿಯಾಗಿರುತ್ತವೆ. ಈ ಓಷಧಿಗಳಲ್ಲಿ ಎರಡು ವಿಧಗಳಿವೆ. ಒಂದು ತಕ್ಷಣದ ಪರಿಹಾರ ನೀಡುವ ಓಷಧಗಳು ಮತ್ತು ಇನ್ನೊಂದು ಸಂಪೂರ್ಣ ನಿಯಂತ್ರಣ ಮಾಡುವ ಓಷಧಗಳು. ಈ ಓಷಧಿಗಳನ್ನು ವಿವಿಧ ವಿಧಾನಗಳಲ್ಲಿ ನೀಡಲಾಗುತ್ತದೆ. ಅವುಗಳಲ್ಲಿ ಪ್ರೆಶರೈಸ್ಡ್ ಮೀಟರ್ಡ್ ಡೋಸ್ ಇನ್ಹೇಲರ್‌ಗಳು (ಪಿಎಂಡಿಐ) ಡ್ರೈ ಪೌಡರ್ ಇನ್ಹೇಲರ್‌ಗಳು, (ಡಿಪಿಐ) ಸಾಫ್ಟ್ ಮಿಸ್ಟ್ ಇನ್ಹೇಲರ್‌ಗಳು (ಎಸ್‌ಎಂಐ) ಮತ್ತು ನೆಬ್ಯುಲೈಜರ್‌ಗಳು ಸೇರಿವೆ. ಇನ್ಹೇಲ್ ಮೂಲಕ ತೆಗೆದು ಕೊಳ್ಳುವ ಓಷಧಿಗಳು ಸರಿಯಾಗಿ ಬಳಸಿದರೇ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ಇಲ್ಲದಿದ್ದರೆ ಅವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿರುವುದಿಲ್ಲ.
ಇನ್ಹೇಲ್ ಮೂಲಕ ತೆಗೆದುಕೊಳ್ಳುವ ಓಷಧಿಗಳು ಸಹ ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿವೆ. ಆದರೆ ಅವು ಉಪಯುಕ್ತತೆಗಿಂತ ಕಡಿಮೆ ತೊಂದರೆ ನೀಡುತ್ತವೆ.
ಅಸ್ತಮಾ ಯಾರಿಗಾದರೂ ಮತ್ತು ಯಾವುದೇ ವಯಸ್ಸಿನಲ್ಲಿ ಕಂಡು ಬಂದರೇ ಅವುಗಳನ್ನು ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ರೋಗನಿರ್ಣಯ ಮಾಡಿ ಮತ್ತು ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಿ, ಅಸ್ತಮಾವನ್ನು ಸಂಪೂರ್ಣವಾಗಿ ನಿವಾರಿಸಬಹುದಾಗಿದೆ.