ಧಾರವಾಡ 09: ಶಹರದ ವಲಯದ ಸರಕಾರಿ ಪ್ರೌಢ ಶಾಲೆ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಹತ್ತಿರ ಧಾರವಾಡ ಇಲ್ಲಿಗೆ ಎಸ್ ಎಸ್ ಎಲ್ ಸಿ ಮಕ್ಕಳ ವಿಶೇಷ ತರಗತಿಗಳನ್ನು ವೀಕ್ಷಿಸಿ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿ "ಮಕ್ಕಳಲ್ಲಿ ಕಲಿಕಾ ಮಟ್ಟಉತ್ತಮ ಪಡಿಸಲು ಹಾಗೂ ಪರೀಕ್ಷಾ ಭಯ ನಿವಾರಿಸಲು ವಿಷಯವಾರು ಶಿಕ್ಷಕರು ಮುಗಿದ ಅಧ್ಯಾಯಗಳನ್ನು ವಿಶೇಷ ತರಗತಿಗಳ ಮೂಲಕ ಪುನರಾವರ್ತನೆ ಮಾಡುವುದು ಕಡ್ಡಾಯ ಎಂದು ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎ ಎ ಖಾಜಿಯವರು ಅಭಿಪ್ರಾಯ ಪಟ್ಟರು.
ಈ ನಿಟ್ಟಿನಲ್ಲಿ ಶಹರವಲಯದ ಎಲ್ಲಾ ಪ್ರೌಢ ಶಾಲೆಗಳನ್ನು ವಿಶೇಷ ತರಗತಿಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಡೆಸುವಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಇದನ್ನು ಪ್ರತಿನಿತ್ಯ ಮುಖ್ಯೋಪಾಧ್ಯಾಯರು ಮೇಲ್ವಿಚಾರಣೆ ಮಾಡುವ ಮೂಲಕ ಇಲಾಖೆಯ ಮಹತ್ವದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.
ಮುಖ್ಯೋಪಾಧ್ಯಾಯ ಶ್ರೀದೇವಿ ಲದ್ದಿಮಠ, ಶಿಕ್ಷಣ ಸಂಯೋಜಕರು ಕೆ ಎಫ್ ಜಾವೂರ ಹಾಗೂ ಸಮಾಜ ವಿಜ್ಞಾನ ಶಿಕ್ಷಕ ತಳವಾರ ಹಾಜರಿದ್ದರು.