ಹೂಳು ತೆಗೆದು ಜನಪ್ರತಿನಿಧಿಗಳಿಗೆ ಪಾಠ ಕಲಿಸಿದ ಗ್ರಾಮಸ್ಥರು

ಲೋಕದರ್ಶನ ವರದಿ

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಕಾರಕುಂಕಿ ಬಳಿ ಇರುವ ಪುರಾತನ ಬ್ರಹ್ಮೇತಿ ಕೆರೆಯಲ್ಲಿ ತುಂಬಿದ್ದ ಹೂಳನ್ನು ಗ್ರಾಮಸ್ಥರೇ ತೆಗೆಯುವ ಮೂಲಕ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ  ಪಾಠ ಕಲಿಸಿದ್ದಾರೆ.

   ತಾಲೂಕಿನ ನಂದೊಳ್ಳಿ ಗ್ರಾಮದ ಫಾರೆಸ್ಟ್ ಸ.ನಂ 108 ರಲ್ಲಿರುವ ಬ್ರಹ್ಮೇತಿ ಕೆರೆ ಶತಮಾನಗಳಷ್ಟು ಹಳೆಯದಾಗಿದ್ದು, 16 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದೆ. 25 ವರ್ಷಗಳ ಹಿಂದೆ ಜಿಲ್ಲಾ ಪರಿಷತ್ನಿಂದ ಕೆರೆಗೆ ಒಡ್ಡು ನಿಮರ್ಿಸಿದ್ದು ಬಿಟ್ಟರೆ ನಂತರ ಸಕರ್ಾರದಿಂದ ಅಥವಾ ಅರಣ್ಯ ಇಲಾಖೆಯಿಂದಾಗಲೀ ಯಾವುದೇ ನಿರ್ವಹಣೆ ಕೈಗೊಂಡಿಲ್ಲ. ಕಾರಣ ಕೆರೆಯಲ್ಲಿ ಹೂಳು ತುಂಬಿ ಕೆರೆ ಮುಚ್ಚಿ ಹೋಗುವ ಸ್ಥಿತಿಯಲ್ಲಿತ್ತು.ಕಳೆದ ವರ್ಷ ಕೆರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕೆರೆಯ ಹೂಳು ತೆಗೆಯಲು ಅನುದಾನ ನೀಡುವಂತೆ ಜನಪ್ರತಿನಿಧಿಗಳಲ್ಲಿ ಕಾರಕುಂಕಿ ಗ್ರಾಮಸ್ಥರು ವಿನಂತಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಶಾಸಕರು, ಸಂಸದರು ಹಾಗೂ ಸಚಿವರವರೆಗೂ ಎಲ್ಲ ಸ್ಥರದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಭರವಸೆಯ ಹೊರತಾಗಿ ಮತ್ತಾವುದೇ ಸ್ಪಂದನೆ ದೊರೆಯಲಿಲ್ಲ,

   ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಬೇಸತ್ತ ಗ್ರಾಮಸ್ಥರು ಕೊನೆಗೆ ಕಳೆದ 3,4 ವರ್ಷಗಳಿಂದ ತಾವೇ ಕೆರೆಯ ಹೂಳೆತ್ತುವ ತೀಮರ್ಾನಕ್ಕೆ ಬಂದಿದ್ದು, ಈಗಾಗಲೇ ಲಕ್ಷಾಂತರ ರೂಪಾಯಿ ಖಚರ್ಾಗಿದ್ದು, ಎಲ್ಲ ವೆಚ್ಚವನ್ನು ಸ್ವತಃ ಗ್ರಾಮಸ್ಥರೇ ಭರಿಸಿದ್ದರು. ಈ ಬಾರಿಯೂ ಕಳೆದ 1 ವಾರದಿಂದ ಕೆರೆಯ ಹೂಳೆತ್ತುತ್ತಿದ್ದು ಲಕ್ಷಾಂತರ ರೂ ಗಳನ್ನು ಇದಕ್ಕಾಗಿ ವ್ಯಯಿಸಿದ್ದಾರೆ. ಇಡೀ ಕೆರೆಯ ಹೂಳೆತ್ತಲು ಮತ್ತಷ್ಟು ಹಣದ ಅಗತ್ಯವಿದ್ದು, ಬಡ, ಮಧ್ಯಮ ವರ್ಗದ ಕೃಷಿಕರಾದ ಗ್ರಾಮಸ್ಥರಿಗೆ ಅದನ್ನು ಭರಿಸುವ ಶಕ್ತಿಯಿಲ್ಲ. ಅದಕ್ಕಾಗಿ ಗ್ರಾಮಸ್ಥರು ಸಕರ್ಾರದ ನೆರವು ಯಾಚಿಸಿದ್ದಾರೆ. ಹಿಂದಿನವರ್ಷ ಕೆರೆ ಸಂಜೀವಿನಿ ಯೋಜನೆಯಡಿ ಶಾಸಕ ಶಿವರಾಮ ಹೆಬ್ಬಾರ 1ಲಕ್ಷ ರೂ ನೀಡಿದ್ದರು.ಈಗ ಮತ್ತೆ ಅವರೇ ಶಾಸಕರಾಗಿ ಆಯ್ಕೆಯಾಗಿರುವದು ಗ್ರಾಮಸ್ಥರ ನಿರೀಕ್ಷೆ ಹೆಚ್ಚಿಸಿದೆ

  ಅತಿಕ್ರಮಣಕ್ಕೆ ತುತ್ತಾಗುತ್ತಿರುವ  ಕೆರೆ :ಬ್ರಹ್ಮೇತಿ ಕೆರೆ ಪುರಾತನ ಕೆರೆಯಾಗಿದ್ದು 16 ಎಕರೆಗಿಂತ ಹೆಚ್ಚಿನ ವಿಸ್ತಿರ್ಣ ಹೊಂದಿದೆ. ಅಂದು ಇದು ಇಡೀ ಗ್ರಾಮಕ್ಕೆ ನೀರುಣಿಸುತ್ತಿತ್ತು.ಇಂತಹ ಕೆರೆಯನ್ನು ಕೆಲವರು ಅತಿಕ್ರಮಿಸಿ ತೋಟ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕೆರೆಯ ಕೆಳಭಾಗದವರು ಬೇಸಿಗೆಯಲ್ಲಿ ನೀರಿಲ್ಲದೆ ಪರಿತಪಿಸುವಂತಾಗಿದೆ. ಕೆರೆ ನುಂಗಾಯಣವಾಗಿ  ಕೆರೆಯನ್ನು ಅತಿಕ್ರಮಿಸಿ ಕೋಟ್ಯಾಂತರ ರೂ ಬೆಳೆಬಾಳುವ ತೋಟಗಳು ತಲೆಎತ್ತಿವೆ.ವಿಸ್ತರವಾದ ಕೆರೆಯನ್ನು ದುರಸ್ಥಿಗೊಳಿಸುವದು ಸುಲಭದ ಕೆಲಸವಲ್ಲ. 25 -30 ವರ್ಷಗಳಿಂದ ಹೂಳು ತುಂಬಿ ತಗ್ಗು ದಿನ್ನೆಯಂತಾಗಿದೆ. ಮರಮುಟ್ಟುಗಳು ತುಂಬಿ ಹೋಗಿವೆ. ಕಳೆದ ಮೂರ್ನಾಲ್ಕು  ವರ್ಷದ ಬರಗಾಲದ ಪರಿಣಾಮ  ಕಾರಕುಂಕಿ ಜನತೆಗೆ ಈ ಕೆರೆ ಅಭಿವೃದ್ದಿ ಪಡಿಸಲೇ ಬೇಕಾದ ಅನಿವಾರ್ಯತೆ ಇದೆ.ಅತಿಕ್ರಮಣ ಸಮಸ್ಯೆ ತಡೆಯದ ಅರಣ್ಯ ಇಲಾಖೆ ,ಸರಕಾರ,ಜನಪ್ರತಿನಿಧಿಗಳು ಬಿಡಿಗಾಸು ಕೊಟ್ಟಿಲ್ಲ .ಆದರೆ ಈ ಕೆರೆಯನ್ನು ನಂಬಿದ ಗ್ರಾಮಸ್ಥರು ಸ್ವತಃ ಹೂಳೆತ್ತುವ  ಮೂಲಕ ಕಾಯಕಲ್ಪ ನೀಡಲು ಮುಂದಾಗಿದ್ದಾರೆ.

. ಹೂಳೆತ್ತಿದ್ದರೆ ಅಂತರ್ಜಲದ ಪ್ರಮಾಣ ಹೆಚ್ಚಲಿದೆ:

   ಪುರಾತನವಾದ ವಿಶಾಲ ಬ್ರಹ್ಮೇತಿ ಕೆರೆಯನ್ನು ಹೂಳೆತ್ತಿದರೆ ಸುತ್ತಮುತ್ತಲಿನ ಜಲಮೂಲಗಳಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಲಿದೆ. ಸಮೀಪದ ಹತ್ತಾರು ಎಕರೆ ಕೃಷಿ ಜಮೀನಿಗೆ ನೀರುಣಿಸಲು ನೆರವಾಗಲಿದೆ. ಕಾಡಿನ ಪ್ರದೇಶವಾಗಿರುವುದರಿಂದ ಪ್ರಾಣಿ, ಪಕ್ಷಿಗಳಿಗೂ ಕುಡಿಯುವ ನೀರು ಸಿಗಲಿದೆ. ಸಮೀಪದ ಊರುಗಳಿಗೆ ಕುಡಿಯುವ ನೀರಿನ ಸರಬರಾಜು ಸಹ ಈ ಕೆರೆಯಿಂದ ಮಾಡಲು ಅವಕಾಶವಿದೆ.