ಲೋಕದರ್ಶನ ವರದಿ
ಬೆಳಗಾವಿ 25, ಇಲ್ಲಿನ ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ 24ರಂದು "ಕಥಾ ಕಮ್ಮಟ" ಒಂದು ದಿನದ ಕಾಯರ್ಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾಯರ್ಾಗಾರವನ್ನು ಖ್ಯಾತ ಲೇಖಕರು ಮತ್ತು ಕಥೆಗಾರರಾದ ಪ್ರೊ. ಪ್ರೇಮ ಶೆಖರ ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ಕನ್ನಡ ಕಥೆಗಳ ಗುಟ್ಟುಗಾರಿಗೆ ಮತ್ತು ಯಶಸ್ವಿ ಕಥೆಗಳನ್ನು ಬರೆಯುವ ಮೂಲಾಂಶಗಳು ಕಥೆಯ ರಚನೆ, ಪ್ರಕಟಣೆ ಮುಂತಾದವುಗಳ ಬಗ್ಗೆ ತಿಳಿಸಿದರು.
ಕಾಯರ್ಾಗಾರದ ಮುಖ್ಯ ಅಥಿತಿಗಳಾದ ಶ್ರೀಮತಿ ಪಾರ್ವತಿ ಪಿಟಗಿ ಪ್ರಶಿಕ್ಷಣಾಥರ್ಿಗಳನ್ನು ಉದ್ದೇಶಿಸಿ ತಮ್ಮ ಜೀವನದ ಅನುಭವಗಳ ಕುರಿತು ಮತ್ತು ಅವರಲ್ಲಿ ಕಥೆ ಹುಟ್ಟಿದ ಬಗೆಯನ್ನು ಹಂಚಿಕೊಂಡರು.
ಕಾಯರ್ಾಗಾರದ ಅಧ್ಯಕ್ಷರಾದ ಡಾ.ಎನ್.ಜಿ. ಬಟ್ಟಲ ಶಿಕ್ಷಕರಾಗುವವರಲ್ಲಿ ಸಾಹಿತ್ಯಿಕ ಒಲವು ಬೆಳೆದು ಶೈಕ್ಷಣಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಕಥಾರೂಪದಲ್ಲಿ ಓದುಗರ ಮುಂದಿಡುವ ಸಾಮಥ್ರ್ಯ ಬೆಳೆದಾಗ ಕಥಾ ಕಮ್ಮಟದ ಉದ್ದೇಶ ಈಡೇರುವುದು. ಅಂತಹ ಒಂದು ಪ್ರೇರಣೆಯನ್ನು ಇಂದಿನ ಕಥಾಕಮ್ಮಟ ವಿದ್ಯಾಥರ್ಿಗಳಲ್ಲಿ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ ಎಂದರು.
ಈ ಕಾಯರ್ಾಗಾರದಲ್ಲಿ ಎಲ್ಲ ಪ್ರಶಿಕ್ಷಣಾಥರ್ಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಶಿಕ್ಷಣಾಥರ್ಿಗಳುತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ವಾಗತವನ್ನು ಕು.ಎಸ್.ಜಿ. ಚಿನಿವಾಲ, ನಿರೂಪಣೆ ಕು.ಆರ್.ವಿ. ಅಕ್ಕಿ ಮತ್ತು ವಂದನಾರ್ಪಣೆಯನ್ನು ಶ್ರೀ.ಎಸ್.ವಿ. ವಾಲಿಶೆಟ್ಟಿ ನೆರವೇರಿಸಿದರು.