ಹಳೆ ತಹಶೀಲ್ದಾರ್ ಕಚೇರಿ ಮೇಲ್ಚಾವಣಿ ಶಿಥಿಲ: ಅಧಿಕಾರಿಗಳ ನಿರ್ಲಕ್ಷ್ಯ
The roof of the old Tahsildar's office is dilapidated: Negligence of the officials
ಜಮಖಂಡಿ : ನಗರದ ಹಳೆ ತಹಶೀಲ್ದಾರ್ ಕಚೇರಿಯು ಶಿಥಿಲಗೊಂಡಿದ್ದು, ಕುಸಿಯುವ ಹಂತದಲಿದೆ. ದಿನದಿಂದ ದಿನಕ್ಕೆ ಮೇಲ್ಚಾವಣಿ ಸಿಮೆಂಟ್ ಉದುರುತ್ತಿದ್ದರು ಅಧಿಕಾರಿಗಳ ನಿರ್ಲಕ್ಷದಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಪ್ರತಿ ದಿನ ನೂರಾರು ಜನರು ತಮ್ಮ ಕೆಲಸ, ಕಾರ್ಯಗಳ ಬಗ್ಗೆ ಕಚೇರಿಗೆ ಬರುವ ಜನರು ಜೀವ ಭಯದಲ್ಲಿಯೆ ಬರುತಿದ್ದಾರೆ. ಈ ಕಟ್ಟಡದಲ್ಲಿ ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ನಗರ ಯೋಜನಾ ಪ್ರಾಧಿಕಾರ, ಅಲ್ಪಸಂಖ್ಯಾತರ ಇಲಾಖೆ, ಭೂಮಾಪನ ಇಲಾಖೆ, ಹಿಂದುಳಿದ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆಗಳು ಹೀಗೆ ಹಲವಾರು ಇಲಾಖೆಗಳು ಕಾರ್ಯನಿರ್ಸುತ್ತೇವೆ. ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಆತಂಕದಲ್ಲಿಯೇ ಬರುವ ಸ್ಥಿತಿ ಉಂಟಾಗಿದೆ.
ಪ್ರವೇಶ ದ್ವಾರದ ಮೇಲ್ಛಾವಣಿ ಸಂಪೂರ್ಣವಾಗಿ ಶಿಥಿಲಗೊಂಡು, ಕಬ್ಬಿಣದ ಸಲಾಕೆಗಳು ಜೋತು ಬಿದ್ದಿವೆ. ಅವುಗಳು ತುಂಡಾಗಿ ಸಾರ್ವಜನಿಕರ ಮೇಲೆ ಯಾವಾಗ ಬೇಕಾದರೂ ಬೀಳಬಹುದು, ಕಟ್ಟಡಕ್ಕೆ ಆಧಾರ ಸ್ತಂಭವಾಗಿರುವ ಪಿಲ್ಲರ್‌ಗಳು ಯಾವಾಗ ಬೇಕಾದರು ಕುಸಿದು ಬೀಳಬಹುದು. ಪಿಲ್ಲರದಲ್ಲಿನ ಕಾಂಕ್ರೀಟ್ ಉದುರಿ ಬಿದ್ದು ಕಬ್ಬಿಣದ ಸಲಾಕೆಗಳು ಹೊರಬಂದಿವೆ. ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಜೀವ ಭಯದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕುಸಿಯುತ್ತಿರುವ ಮೇಲ್ಚಾವಣಿಗೆ ಹೆದರಿ ಕಚೇರಿಗೆ ಬರುವ ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 