ಗದಗ 1: ಇಂಡಿಯನ್ ರೈಲ್ವೇ ಅತಿ ಕಡಿಮೆ ವೆಚ್ಚದಲ್ಲಿ ಸಾರ್ವಜನಿಕರ ಒಳಿತಿಗಾಗಿ ಕೆಲಸ ಮಾಡುತ್ತಿದೆ, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದರಾದ ಶಿವಕುಮಾರ ಉದಾಸಿ ತಿಳಿಸಿದರು.
ಗದಗ ನಗರದ ರೈಲ್ವೇ ನಿಲ್ದಾಣದಲ್ಲಿ ನಡೆದ ರೈಲು ನಿಲ್ದಾಣದ ಹೊಸ ಪಾದಚಾರಿ ಮೇಲ್ಸೇತುವೆಗೆ ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಲೋಕಸಭಾ ವ್ಯಾಪ್ತಿಯಲ್ಲಿ ಗದಗ ಹುಟಗಿ 284 ಕಿಮೀ 1680 ಕೋಟಿ ರೂ ಯಲ್ಲಿ ಕಾಮಗಾರಿ ಪ್ರಾರಂಭವಾಗಿದೆ, ಅದು 2020 ಕಾಮಗಾರಿ ಪೂರ್ಣಗೊಳ್ಳಲಿದೆ. ವಿಶೇಷವಾಗಿ ಪ್ರಮಾಣಿಕರಿಗೆ ಪ್ರತಿದಿನಕ್ಕೆ ಅಂದಾಜು 2 ಕೋಟಿ 20 ಲಕ್ಷ ಜನ ಇಂಡಿಯನ್ ರೈಲ್ವೆಯಲ್ಲಿ ಪ್ರಯಾಣ ಮಾಡುತ್ತಾರೆ. ಗದಗ ನಗರದಲ್ಲಿ 23 ಕೋಟಿಯಲ್ಲಿ ಒವರ್ ಬ್ರೀಡ್ಜ್ ಗಾಗಿ ಮಂಜೂರಾತಿ ಮಾಡಲಾಗಿದೆ. ಮುಂದಿನ ದಿನಮಾನಗಳಲ್ಲಿ ಗದಗ ನರದಲ್ಲಿ ಡಬ್ಲೀಂಗ್ ವ್ಯವಸ್ಥೆ ಆಗಿದ್ದು ಸಂತೋಷದ ವಿಷಯ. ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ರೈಲ್ವೆ ನಿಲ್ದಾಣದ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗಿದೆ. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಪರ ಕೆಲಸಗಳನ್ನು ಮಾಡುವಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಗದಗ ಜಿ.ಪಂ ಅಧ್ಯಕ್ಷರಾದ ಎಸ್.ಪಿ ಬಳಿಗಾರ ಮಾತನಾಡಿದ ದೇಶ ಪ್ರಗತಿಪಥದಲ್ಲಿ ಸಾಗಿದೆ ಎನ್ನುವುದಕ್ಕೆ ಇಂತಹ ಕಾರ್ಯಕ್ರಮಗಳೇ ಸಾಕ್ಷಿ. ಗ್ರಾಮಾಂತರ ಪ್ರದೇಶದ ರೈಲ್ವೇ ನಿಲ್ದಾಣಗಳಲ್ಲಿ ಪ್ರತಿಯೊಂದು ಫ್ಲಾಟ್ಫಾರ್ಮ ಉನ್ನತಿಕರಣಗೊಳಿಸಬೇಕು. ಪ್ರತಿಯೊಂದು ರೈಲ್ವೇ ನಿಲ್ದಾಣಗಳಲ್ಲಿ ಮೇಲ್ದಜರ್ೆಯ ಮೇಲ್ಸೇತುವೆ ಇರಬೇಕು. ಜನರ ಅನುಕೂಲತೆಗಳನ್ನು ಕಾರ್ಯರೂಪಕ್ಕೆ ತರಬೇಕು. ದೇಶ ಸಂಧಿಗ್ದ ಪರಿಸ್ಥಿತಿಯಲ್ಲಿದ್ದರು ಆಂತರಿಕ ದೇಶದ ಹೊರಗಿನ ವೃರಿಗಳ ಜೊತೆ ಸೆಣಸಾಡುವುದರ ಜೊತಗೆ ದೇಶದ ಅಭಿವೃದ್ದಿ ಕಡೆಗೆ ಗಮನ ಹರಿಸಬೇಕು ಹೇಳಿದರು. ಗದಗ ತಾ.ಪಂ ಅಧ್ಯಕ್ಷ ಮೋಹನ ದುರ್ಗಣ್ಣವರ, ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಜಿ.ಕೆ.ಆದಪ್ಪಗೌಡರ, ರಾಜೇಶ ಮೋಹನ, ಎಸ್.ಜಿ.ಉಡುಪಿ, ಎಸ್.ಜೆ ಮುಳಗುಂದ ಇತರರು ಉಪಸ್ಥಿತರಿದ್ದರು. ಸುಧಾ ನಿರೂಪಿಸಿದರು.