ಒಳಚರಂಡಿ ಕಾಮಗಾರಿ ಸಂಪೂರ್ಣ ಕಳಪೆ

ಲೋಕದರ್ಶನ ವರದಿ

ಗದಗ 25: ನಗರದಲ್ಲಿ ಚಾಲ್ತಿಯಲ್ಲಿರುವ ಒಳಚರಂಡಿ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿರುವುದಕ್ಕೆ ತಾಜಾ ಉದಾಹರಣೆ ಡಂಬಳ ನಾಕಾ ನಂದಿವೇರಿ ಮಠದ ಮುಂದಿರುವ ಮುಖ್ಯ ರಸ್ತೆಯಲ್ಲಿರುವ ಚರಂಡಿಯೆ ಸಾಕ್ಷಿ. ಚೇಂಬರ್ ಹೊಸದಾಗಿ ನಿಮರ್ಿಸಿದ್ದು ಅದರಿಂದ ಚರಂಡಿ ನೀರು ರಸ್ತೆಗೆ ಬಂದು ಸಂಪೂರ್ಣವಾಗಿ ರಸ್ತೆ ದುವರ್ಾಸನೆಯಿಂದ ಕೂಡಿದೆ. ರಸ್ತೆ ಸಂಚಾರದ ಮಧ್ಯಭಾಗದಲ್ಲಿಯೆ ಈ ರೀತಿಯಾಗಿರುವುದರಿಂದ ಟ್ರಕ್ನ ಚಕ್ರವು ಗುಂಡಿಯಲ್ಲಿ ಸಿಲುಕಿ ಜನರು ಸಂಚರಿಸಲು ಅಸ್ತ ವ್ಯಸ್ತವಾದ ಘಟನೆ ಡಂಬಳ ನಾಕಾದಲ್ಲಿ ರಸ್ತೆಯಲ್ಲಿ ಸಂಚರಿಸುವ ಜನರ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ. ಕಾಮಗಾರಿಗಳು ನಡೆಯುವ ಸ್ಥಳಕ್ಕೆ ಸಂಬಂಧಪಟ್ಟ ಒಳಚರಂಡಿ ಇಲಾಖೆ ಅಧಿಕಾರಿಗಳು ಗಮನ ಹರಿಸದೆ ಇರುವುದು ಇದಕ್ಕೆ ಕಾರಣ. ಅಗೆದ ಸ್ಥಳದಲ್ಲಿ ಒಳಚರಂಡಿ ನಿಮರ್ಿಸಿ ಡಾಂಬರಿಕರಣ ಆಮೆಗತಿಯಲ್ಲಿ ನಡೆದಿರುವುದು ತಾಜಾ ಉದಾಹರಣೆ. ರಸ್ತೆಗಳು ಕುಸಿದು ಆ ರಸ್ತೆಯಲ್ಲಿ ಓಡಾಡುವ ವಾಹನಗಳು ಅಲ್ಲಿ ಸಿಲುಕಿ ನಂತರ ಅಲ್ಲಿ ಸಂಚರಿಸುವ ಜನರಿಗೆ ತೊಂದರೆಯನ್ನು ಉಂಟುಮಾಡಿ ಚರಂಡಿ ನಿಮರ್ಿಸುತ್ತಿರುವ ಗುತ್ತಿಗೆದಾರರು. ಕಳಪೆ ಕಾಮಗಾರಿಯನ್ನು ನಡೆಸುತ್ತಿದ್ದಾರೆ ಅವರ ಕಾಮಗಾರಿಯನ್ನು ವೀಕ್ಷಿಸದ ಒಳಚರಂಡಿ ಇಲಾಖೆಯ ಅಧಿಕಾರಿಗಳು ಇನ್ನು ಮುಂದೆಯಾದರು ಕಳಪೆ ಕಾಮಗಾರಿಗಳನ್ನು ಮಾಡುವ ಕಡೆ ಗಮನ ಹರಿಸಬೇಕು.