ನೇಸರಗಿ: ವಿದ್ಯಾಥರ್ಿಗಳು ಸತತ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಬಹುದೆಂದು ಗದಗ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಹೇಳಿದರು.
ಗ್ರಾಮದ ಕುವೆಂಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸನ್ಮಾನ ಸ್ಮೀಕರಿಸಿ ಮಾತನಾಡಿ, ವಿದ್ಯಾಥರ್ಿದಿಸೆಯಲ್ಲಿದ್ದಾಗ ಕಲಿಕೆಯತ್ತ ಹೆಚ್ಚಿನ ಗಮನಹರಿಸಬೇಕು. ಯಾವುದೇ ದುಶ್ಚಟಗಳಿಂದ ದೂರವಿದ್ದು, ಕಲಿತ ಶಾಲೆಗೆ ,ಪಾಲಕರ,ಪೋಷಕರ ಹೆಸರು ತರಲು ಕಾರಣರಾಗಬೇಕೆಂದು ಕರೆ ನೀಡಿದರು.
ಕುವೆಂಪು ಮಾದರಿ ಶಾಲೆಗಳು ಜಿಲ್ಲೆಯಲ್ಲಿ ಎರಡು ಮಾತ್ರ ಇವೆ. ಇವು ಕುವೆಂಪು ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವದರಿಂದ ಕುವೆಂಪು ಶಾಲೆಯ ಕಂಪು ಎಲ್ಲೆಡೆ ಹರಡುವಂತಾಗಲು ಶಾಲೆಯ ಅಭಿವೃದ್ಧಿಗೆ ತಾವೂ ಪ್ರಾಮಾಣಿಕ ಪ್ರಯತ್ನದಿಂದ ಕಾರ್ಯ ನಡೆಸಲಾಗುವುದು ಎಂದರು.
ಮುಖ್ಯೋಫಾಧ್ಯಾಯ ಬಿ.ವಾಯ್.ಬಾಗಲೆ, ಪಾಶ್ಚಾಪೂರ ಸರಕಾರಿ ಪ್ರಥಮ ದಜರ್ೆ ಮಹಾವಿದ್ಯಾಲಯದ ಉಪನ್ಯಾಸಕ ಮರಿಗೌಡ ಚೋಬಾರಿ ಮಾತನಾಡಿ, ಗದಗ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಇವರು ನೇಸರಗಿ ಗ್ರಾಮದಲ್ಲಿ ಹುಟ್ಟಿ ಸರಕಾರಿ ಕುವೆಂಪು ಮಾದರಿ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರ ಸರಳ ನಡೆನುಡಿಯಿಂದ ಉತ್ತಮ ಅಧಿಕಾರಿಯಾಗಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಅವರು ಹೆಚ್ಚಿನ ಅಧಿಕಾರಿ ದೊರಕಿ ಉತ್ತಮ ಹೆಸರು ಗಳಿಸಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗದಗ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಎಸ್ಡಿಎಂಸಿ ಉಪಾಧ್ಯಕ್ಷ ಮಹಾಂತೇಶ ರಾಯಪ್ಪಗೋಳ, ಬಸವಂತ ಸೋಮನ್ನವರ,ಸುರೇಶ ಇಂಚಲ, ವಿ.ಆರ್.ಹುಣಶಿಕಟ್ಟಿ, ಶಿಕ್ಷಕ ಸಂತೋಷ ಪಾಟೀಲ, ದೈಹಿಕ ಶಿಕ್ಷಕ ಪಿ.ಎಸ್.ಪಾಟೀಲ, ಎಸ್.ಎಸ್.ಭಟ್, ಶಿಕ್ಷಕರು ಪಾಲ್ಗೊಂಡಿದ್ದರು.ಆರ್.ಎನ್.ರುದ್ರನಾಯ್ಕರ ನಿರೂಪಿಸಿದರು. ಬಿ.ಆರ್.ಹಿರೇಮಠ ವಂದಿಸಿದರು.