ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ದುಷ್ಪರಿಣಾಮ

ಲೋಕದರ್ಶನ ವರದಿ

ಹಳಿಯಾಳ: ಮೊಬೈಲ್ ಬಳಕೆಯಿಂದ ಹಲವಾರು ದುಷ್ಪರಿಣಾಮಗಳು ಆಗುತ್ತಿದ್ದು ಈ ಬಗ್ಗೆ ವಿದ್ಯಾರ್ಥಿ ಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಶಾಲಾ ಮುಖ್ಯಾಧ್ಯಾಪಕರಿಗೆ ಸಲಹೆ ನೀಡಿದ್ದಾರೆ.

ತಾಲೂಕ ಕಚೇರಿಯಲ್ಲಿ ಮಂಗಳವಾರದಂದು ಏರ್ಪಡಿಸಲಾದ ವಿದ್ಯಾರ್ಥಿ ಗಳಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸ್ವಚತೆಯ ಅರಿವು ಕುರಿತು ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ವಿವಿಧ ಸಲಹೆ-ಸೂಚನೆಗಳನ್ನು ನೀಡಿದರು. 

ಇತ್ತಿತ್ತಲಾಗಿ ಹಳಿಯಾಳದಲ್ಲಿ ವಿದ್ಯಾರ್ಥಿ ಗಳ ಮೊಬೈಲ್ ಬಳಕೆಯಿಂದ ವಿವಿಧ ಘಟನೆಗಳು ನಡೆಯುತ್ತವೆ. ಈ ಬಗ್ಗೆ ದಿನಂಪ್ರತಿ ದೂರುಗಳು ಕೇಳಿ ಬರುತ್ತಿವೆ. ಮೊಬೈಲ್ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿರಿ ಎಂದರು. ಬಾಲಕಿಯರು ಶಾಲೆಗೆ ತೆರಳುತ್ತೇನೆಂದು ಪಾಲಕರಿಗೆ ತಿಳಿಸಿ ಶಾಲೆಯಿಂದ ಬೇರೊಬ್ಬರ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿರುವುದು ಸಹ ದೂರುಗಳಲ್ಲಿ ಕೇಳಿಬರುತ್ತಿದೆ. ಈ ಬಗ್ಗೆ ಪಾಲಕರು ಸಹ ಎಚ್ಚರಿಕೆ ವಹಿಸಬೇಕು. ಮುಂದಾಗುವ ಘಟನೆಗಳಿಗೆ ಈಗಿನಿಂದಲೇ ನಿಯಂತ್ರಣವನ್ನು  ತರಲು ಶಿಕ್ಷಕರು ಮತ್ತು ಪಾಲಕರು ಸೇರಿ ವಿದ್ಯಾಥರ್ಿಗಳಿಗೆ ಸೂಕ್ತ ದಾರಿಯಲ್ಲಿ ಬರುವಂತೆ ಮಾಡಬೇಕು.

ಪಟ್ಟಣದಲ್ಲಿ ಇತ್ತಿಚೇಗೆ ಡಿಜೆ ಡಾಲ್ಫಿಯಂತಹ ಕರ್ಕಶ ಧ್ವನಿವರ್ಧಕಗಳ ಮೂಲಕ ಮೆರವಣಿಗೆ ಮತ್ತಿತ್ತರ ಸಂದರ್ಭಗಳಲ್ಲಿ ಬಳಸುತ್ತಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಕೂಡಲೇ ಎಲ್ಲ ಸಮಾಜದ  ಮುಖಂಡರ ಸಭೆ ನಡೆಸಿ ಇನ್ನು ಮುಂದೆ ಹಳಿಯಾಳದಲ್ಲಿ ಡಿಜೆ ಮತ್ತು ಡಾಲ್ಫಿಯಂತಹ ಕರ್ಕಷ ಧ್ವನಿವರ್ಧಕಗಳನ್ನು  ಬಳಸದಂತೆ ನಿರ್ಧಾರ ಕೈಗೊಳ್ಳಬೇಕು ಎಂದು ತಹಶೀಲ್ದಾರ ಹಾಗೂ ಪಿಎಸ್ಐ ಅವರಿಗೆ ತಿಳಿಸಿದರು.

ಶಾಲಾ ಆವರಣದಲ್ಲಿ ಔಷಧಿಯುಕ್ತ ಸಸಿಗಳನ್ನು ಬೆಳೆಸುವಂತೆ ಮುಖ್ಯಾಧ್ಯಾಪಕರಿಗೆ ಸಲಹೆ ನೀಡಿದರು.

ತಹಶೀಲ್ದಾರ ವಿದ್ಯಾಧರ ಗುಳಗುಳಿ, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯವರ, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ್ ಅಹಮ್ಮದ್ ಮುಲ್ಲಾ, ಪಿ.ಎಸ್.ಐ. ಅನಂದ ಮೂತರ್ಿ, ಪುರಸಭೆ ಇಂಜಿನೀಯರ್ ಜಿ.ಆರ್. ಹರೀಶ ವೇದಿಕೆಯಲ್ಲಿದ್ದರು