ಈಶ್ವರೀಯ ವಿ.ವಿಯಿಂದ ಒತ್ತಡ ರಹಿತ ಜೀವನ ನೀಡುವ ಕಾರ್ಯ

ಲೋಕದರ್ಶನ ವರದಿ

ಯಲ್ಲಾಪುರ: ದೈಹಿಕ ಆರೋಗ್ಯ ಸರಿ ಇರಬೇಕಾದರೆ, ಮಾನಸಿಕ ಆರೋಗ್ಯ ಸರಿ ಇರಬೇಕು. ಮಾನಸಿಕ ಆರೋಗ್ಯ ಸರಿ ಇರಬೇಕಾದರೆ ಒತ್ತಡ ರಹಿತ ಜೀವನ ಇರಬೇಕಾದದ್ದು ಅವಶ್ಯ. ಈ ಒತ್ತಡ ರಹಿತ ಜೀವನವನ್ನು ನೀಡುವ ಕಾರ್ಯ ಈಶ್ವರೀಯ ವಿಶ್ವ ವಿದ್ಯಾನಿಲಯ ಮಾಡುತ್ತಿದೆ ಎಂದು  ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ  ನಾಗರಾಜ ಮದ್ಗುಣಿ ಹೇಳಿದರು.

    ಪಟ್ಟಣದ ಲಿಂಗ್ಯಾನಕೊಪ್ಪ ದಲ್ಲಿರುವ ಈಶ್ವರೀಯ ವಿಶ್ವ ವಿದ್ಯಾನಿಲಯದ ತಪೋವನದಲ್ಲಿ ಕಳೆದ ಒಂದು ವಾರ ಕಾಲ ನಡೆದ ಕನರ್ಾಟಕ, ಕೇರಳ ಹಾಗೂ ಆಂದ್ರಪ್ರದೇಶ ದಿಂದ ಆಗಮಿಸಿದ ಈಶ್ವರೀಯ ವಿಶ್ವ ವಿದ್ಯಾನಿಲಯದ ಕಾರ್ಯಕರ್ತರ ಸ್ನೇಹ ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

   ಮುಖ್ಯ ಅತಿಥಿಯಾಗಿ ಆಗಮಿಸಿದ ಕಸಾಪ  ಜಿಲ್ಲಾ ಸಹ ಕಾರ್ಯದರ್ಶಿ  ಶಿವಲೀಲಾ ಹುಣಸಗಿ ಮಾತನಾಡಿ '"ಮಾನವ ಮಾನವನಾಗಿ ಉಳಿಯದೇ ದಾನವನಾಗಿ ಸಂಸ್ಕಾರ ಪಡೆಯುತ್ತಿದ್ದಾನೆ.ಎಲ್ಲರೂ ಉಪದೇಶ ಮಾಡುವವರೇ ಆಗಿದ್ದಾರೆಯೇ ಹೊರತು ತ್ಯಾಗದ ವಿಚಾರ ಬಂದಾಗ ಎಲ್ಲರೂ ಹಿಂದಡಿ ಇಡುತ್ತಾರೆ. ಜೀವನ ಮೌಲ್ಯಗಳ ಕೊರತೆ ಇದಕ್ಕೆಲ್ಲ ಕಾರಣ. ಜನರಲ್ಲಿ ಜೀವನ ಮೌಲ್ಯಗಳನ್ನು ಒಡ ಮೂಡಿಸಿ ಮಾನಸಿಕ ಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಈಶ್ವರಿ ವಿಶ್ವ ವಿದ್ಯಾನಿಲಯ ಮಾಡುತ್ತಿದೆ ಎಂದರು.

    ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ  ಡಿ.ಎನ್.ಗಾಂವ್ಕರ್ ಮಾತನಾಡಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ನಮ್ಮಿಂದಾಗದೇ ಹೋದರೆ ಉತ್ತಮ ಸಮಾಜವನ್ನು ನಿರ್ಮಿಸಲು  ಸಾಧ್ಯವಿಲ್ಲ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಈಶ್ವರಿ ಸಂಸ್ಥೆ ಮಾಡುತ್ತಿದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧೀ ಯೋಜನೆಯ ಯೋಜನಾಧಿಕಾರಿ ರಾಕೇಶ್, ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸದಸ್ಯೆ ಶೋಭಾ ಹುಲಮನಿ ಮಾತನಾಡಿದರು.

     ಕಡೂರಿನ ಜ್ಞಾನೇಶ್ವರಿ ಅಕ್ಕನವರು, ಹಾಗೂ ಮಂಗಳೂರಿನ ಮಹೆಶ್ವರಿ ಅಕ್ಕನವರು ಜೀವನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಹುಬ್ಬಳ್ಳಿ ವಿಭಾಗದ ಸಂಚಾಲಕಿ ಬಿ.ಕೆ. ನಿರ್ಮಲಕ್ಕ ಈಶ್ವರಿ ಸಂಸ್ಥೆಯ ಉದ್ದೇಶಗಳನ್ನು ವಿವರಿಸಿ, ನಿರೂಪಿಸಿದರು. ಬಿ.ಕೆ. ನಾಗಲಕ್ಷ್ಮೀ ಪ್ರಾರ್ಥನೆ ಹಾಡಿದರು, ಜಾಹ್ನವಿ ನೃತ್ಯ ಪ್ರದರ್ಶನ ಮಾಡಿದರು, ಬಿ.ಕೆ. ಶಿವಲೀಲಕ್ಕ ಸ್ವಾಗತಿಸಿದರು, ಯಲ್ಲಾಪುರ ಕೇಂದ್ರದ ಸಂಚಾಲಕಿ ಬಿ.ಕೆ. ಮಂಗಳಕ್ಕ ವಂದಿಸಿದರು.