20ರಂದು ರಾಜ್ಯ ಮಟ್ಟದ ಮ್ಯಾರಥಾನ್

ಲೋಕದರ್ಶನ ವರದಿ

ಕೊಪ್ಪಳ 17: ನಗರದಲ್ಲಿ ಇತಿಹಾಸ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಯ ಪ್ರಯುಕ್ತ  ರಾಜ್ಯ ಮಟ್ಟದ ಮ್ಯಾರಥಾನ್-2019, ಪ್ರತಿ ವರ್ಷದಂತೆ ಈ ವರ್ಷವು ಕೊಪ್ಪಳ ಅಥ್ಲೇಟಿಕ್ಸ್ ಅಸೋಸಿಯೇಷನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದಿ. 20 ಜನೆವರಿ 2019ರಂದು ಅಯೋಜಿಸಲಾಗಿದೆ. ಮ್ಯಾರಥಾನ್ ಓಟವು ಮಹಿಳಾ ಮತ್ತು ಪುರುಷಗಾಗಿ ಅಯೋಜನೆ ಮಾಡಲಾಗಿದ್ದು ಪುರುಷರ ಮ್ಯಾರಥಾನ್ ಓಟಕ್ಕೆ  ಸಂಸದರಾದ ಕರಡಿ ಸಂಗಣ್ಣ ಹಾಗೂ ಜಿಲ್ಲಾಧಿಕಾರಿ ಪಿ.ಸುನಿಲ್ಕುಮಾರ್ ಚಾಲಾನೆ ನೀಡುವರು. ಮಹಿಳಾ ಮ್ಯಾರಥಾನ್ ಓಟಕ್ಕೆ   ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ಚಾಲಾನೆ ನೀಡುವರು. 

ಪುರುಷರ ಓಟ ಹೊಸಪೇಟೆ ರಸ್ತೆ ಹಾಲವತರ್ಿ ಕ್ರಾಸ್ ನಿಂದ ಪ್ರಾರಂಭಗೊಂಡು ಮಳೆಮಲ್ಲೇಶ್ವರ ಕ್ರಾಸ್ಗೆ ಕೊನೆ ಗೊಳ್ಳುತ್ತದೆ. ಮಹಿಳೆಯರ ಮ್ಯಾರಥಾನ್ ಓಟವು ಹೊಸಪೇಟೆ ರಸ್ತೆ ಹಾಲವತರ್ಿ ಕ್ರಾಸ್ ನಿಂದ ಪ್ರಾರಂಭಗೊಂಡು ಗೌರಿಶಂಕರ ದೇವಸ್ಥಾನದ ಹತ್ತಿರ ಕೊನೆಗೋಳ್ಳುತ್ತದೆ.  ಓಟದ ಮಧ್ಯೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಹಾಗೂ ದಿ.23, 24, ಜನೆವರಿ 2019ರಂದು ಪುರುಷರಿಗಾಗಿ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಗಳು ಗವಿಸಿದ್ದೇಶ್ವರ ಮಹಾವಿದ್ಯಾಲಯ ಮೈದಾನದಲ್ಲಿ ಅಯೋಜಿಸಲಾಗಿದೆ ಎಂದು ಅಯೋಜಕರಾದ ಶ್ರೀನಿವಾಸ ಗುಪ್ತ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಶರರಣಬಸವ ಬಂಡಿಹಾಳ್, ಬಸವರಾಜ್, ವಿಠಲ್, ಬಸವರಾಜ್ ಹೋಸಮನಿ ಇನ್ನು ಮುಂತಾದವರು ಉಪಸ್ಥಿತರಿದ್ದರು.