ರೈತರ ಸಮಸ್ಯೆ ಕಾಪಾಡಲು ರಾಜ್ಯ ಸರ್ಕಾರ ವಿಫಲ: ನಿಖಿಲ ಕುಮಾರಸ್ವಾಮಿ

ರೈತರ ಸಮಸ್ಯೆ ಕಾಪಾಡಲು ರಾಜ್ಯ ಸರ್ಕಾರ ವಿಫಲ: ನಿಖಿಲ ಕುಮಾರಸ್ವಾಮಿ State government failed to address farmers' issues: Nikhil Kumaraswamy

  ಲೋಕದರ್ಶನ ವರದಿ   

ಇಂಡಿ 14: :ಮತಕ್ಷೇತ್ರದ ಅಗಸನಾಳ, ಹೊರ್ತಿ, ಝಳಕಿ ಹಾಗೂ ಅಂಜುಟಗಿ ಗ್ರಾಮಗಳಲ್ಲಿ ಬರಗಾಲದ ಪರಿಸ್ಥಿತಿಯನ್ನು ವೀಕ್ಷಿಸಿ ಪರೀಶೀಲನೆ ಮಾಡಿದ ಜೆಡಿಎಸ್ ರಾಜ್ಯ ಯುವ ಘಟಕ ಅಧ್ಯಕ್ಷ ನಿಖಿಲ ಕುಮಾರಸ್ವಾಮಿ ಅವರು ಬಾರಿ ರಾಜ್ಯದಲ್ಲಿ ಬೀಕರ ಬರಗಾಲ ಉಂಟಾಗಿದ್ದು ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ರೈತರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ತುಂಬಾ ವಿಫಲವಾಗಿದೆ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ಮಾಡಿದರೂ.ಅವರು ಇಂಡಿ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಅನ್ನದಾತ ಸ್ಥಿತಿ ಹೇಳತೀರದಾಗಿದೆ.ಇಂಡಿ ತಾಲ್ಲೂಕಿನ 75ಅ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಮುಂಗಾರು ಮಳೆ ಬರಬಹುದು ಎಂದು ರೈತರು ತೊಗರಿ ಹತ್ತಿ ಮೆಕ್ಕೆಜೋಳ ಸಜ್ಜೆ ಶೇಂಗಾ  ಬಿತ್ತನೆ ಮಾಡಿದ್ದಾರೆ, ಮುಂಗಾರು ಮಳೆಯೇ ಕೈಕೊಟ್ಟಿದೆ.ಬಿತ್ತನೆ ಮಾಡಿದ ನಾಟಿಕೆಗಳು ಮಳೆ ಇಲ್ಲದೆ ಒಣಗಿ ಹೋಗಿವೆ.

ರೈತರು ಅಲ್ಲಿ ಇಲ್ಲಿ ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ ಆದರೆ ಮಳೆನೂ ಇಲ್ಲ ಬೆಳೆನೂ ಇಲ್ಲದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರ ತಕ್ಷಣವೇ ರೈತರಿಗೆ ಪ್ರತಿ ಎಕರೆಗೆ ಇಪ್ಪತ್ತು ಐದು ಸಾವಿರ ರೂಪಾಯಿಗಳನ್ನು ತಕ್ಷಣವೇ ಪರಿಹಾರ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಪ್ರತಿ ಗ್ರಾಮಗಳಲ್ಲಿ ಮೇವು ಬ್ಯಾಂಕ್ ತೆಗೆಯಬೇಕು. ಮಳೆ ಇಲ್ಲ ಇಂಡಿ ತಾಲೂಕಿನ ನಿಂಬೆ ದ್ರಾಕ್ಷೀ ದಾಳಿಂಬೆ ಗಿಡಗಳು ಒಣಗಿ ಹೋಗುತ್ತಿವೆ. ಇಂಡಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು, ಗುತ್ತಿ ಬಸವಣ್ಣ ಕಾಲುವೆ ಮೂಲಕ ನೀರು ಹರಿಸಬೇಕು ಎಂದು ಹೇಳಿದರು. 

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಮಾತನಾಡಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಜನತಾದಳದ ನಿಯೋಗವು ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ರೈತರ ಮನೆಗಳು ಹಾಗೂ ಹೊಲಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಕೈಗೊಂಡಿದೆ. ಅದರ ಭಾಗವಾಗಿ ಇಂಡಿ ಮತಕ್ಷೇತ್ರಕ್ಕೂ ಭೇಟಿ ನೀಡಿದ್ದೇವೆ ಎಂದು ಅವರು ತಿಳಿಸಿದರು. 

ಮಾಜಿ ವಿಧಾನ ಪರಿಷತ್ ಉಪಸಭಾಪತಿ ಕೃಷ್ಣಾರೆಡ್ಡಿ ಅವರು ಮಾತನಾಡಿ ಬರಗಾಲ ಬಿದ್ದು 45 ದಿನಗಳು ಕಳೆದರೂ ರಾಜ್ಯ ಸರ್ಕಾರದ ಯಾವುದೇ ಪ್ರತಿನಿಧಿ, ಶಾಸಕರು ಅಥವಾ ಸಚಿವರು ರೈತರ ಬಳಿ ತೆರಳಿ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ರೈತರ ಪರವಾಗಿ ನಿಲ್ಲುವುದು ಜನತಾದಳದ ಹುಟ್ಟುಗುಣವಾಗಿದೆ. ರೈತರ ಸಂಕಷ್ಟದಲ್ಲಿ ಅವರೊಂದಿಗೆ ನಿಲ್ಲುವುದು ನಮ್ಮ ಪಕ್ಷದ ಬದ್ಧತೆಯಾಗಿದೆ ಎಂದು ಹೇಳಿದರು.  

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ರಾಜಗೌಡ ಪಾಟೀಲ, ಇಂಡಿ ಜೆಡಿಎಸ್ ಅಧ್ಯಕ್ಷ ಬಿ.ಡಿ. ಪಾಟೀಲ, ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ರಾಮು ರಾಠೋಡ, ಗಂಗಾಧರಗೌಡ ಬಿರಾದಾರ, ಮರೇಪ್ಪ ಗಿರಣಿವಡ್ಡರ, ಸಿದ್ದು ಡಂಗಾ, ಅಯೂಬ್ ನಾಟೀಕರ, ಶ್ರೀಶೈಲಗೌಡ ಪಾಟೀಲ, ರಮೇಶ್ ರಾಠೋಡ, ರೇವಣಸಿದ್ದ ಗೋಡಕೆ, ದುಂಡು ಬಿರಾದಾರ, ಭೀಮನಗೌಡ ಪಾಟೀಲ, ನಿಯಾಝ್ ಅಗರಖೇಡ, ಯಶವಂತ ಕಾಡೆಗೋಳ, ಸಚಿನ್ ಪಾಟೀಲ, ಲಕ್ಕು ಲಚ್ಚ್ಯಾಣ, ಬಾಬು ಕಾಂಬಳೆ, ಬಾಳು ರಾಠೋಡ, ಪಜಲು ಮುಲ್ಲಾ, ರಾಜು ಮುಲ್ಲಾ, ಸಚಿನ್ ಗಿರಣಿ ವಡ್ಡರ, ಭೀಮರಾ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.