ಲೋಕದರ್ಶನ ವರದಿ
ವಿಜಯಪುರ, 27 : ನೂತನ ತಾಲೂಕಾ ಕೇಂದ್ರ ಕೊಲ್ಹಾರದಲ್ಲಿ ಸುಸಜ್ಜಿತ ತಾಯಿ-ಮಗು ಆಸ್ಪತ್ರೆ ಮಂಜೂರಾತಿ ಮಾಡುವುದಾಗಿ ಆರೋಗ್ಯ ಖಾತೆ ಸಚಿವರಾದ ಶಿವಾನಂದ ಎಸ್. ಪಾಟೀಲ ಅವರು ಹೇಳಿದರು.
ಕೊಲ್ಹಾರದಲ್ಲಿ ಜರುಗಿದ ಕೊಲ್ಹಾರ ಪಟ್ಟಣದ ವಾಣಿಜ್ಯ ಸಂಕೀರ್ಣ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಹಾಗೂ ಪೌರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿಜಯಪುರ ನಗರದಲ್ಲಿ ಸುಸಜ್ಜಿತವಾದ ತಾಯಿ-ಮಗು ಆಸ್ಪತ್ರೆ ಸಿದ್ಧಗೊಂಡು ಉತ್ತಮ ಸೇವೆ ಸಲ್ಲಿಸುತ್ತಿದ್ದೆ. ಇದೇ ಮಾದರಿಯಲ್ಲಿ ನೂತನ ತಾಲೂಕಾ ಕೇಂದ್ರವಾದ ಕೊಲ್ಹಾರ ಪಟ್ಟಣದಲ್ಲಿ ಸುಸಜ್ಜಿತವಾದ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ಶೀಘ್ರವೇ ಮಂಜೂರಾತಿ ಹಾಗೂ ಪಟ್ಟಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿಮರ್ಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕೊಲ್ಹಾರದಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ, ಪಟ್ಟಣ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಬೇಕಾಗಿದೆ. ಕೊಲ್ಹಾರ ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ತಾಲೂಕಾ ಕೇಂದ್ರ ಆಗಿ ರೂಪುಗೊಳ್ಳಲು ಪಕ್ಷಾತೀತವಾಗಿ ಎಲ್ಲರ ಬೆಂಬಲ, ಸಹಕಾರ ಅವಶ್ಯಕವಾಗಿದೆ. ಬಸವನ ಬಾಗೇವಾಡಿ ಪಟ್ಟಣದಲ್ಲಿ ಉದ್ಯಾನವನಗಳ ಪ್ರಗತಿಗೆ ಹೊಸ ಹೆಜ್ಜೆ ಇರಿಸಲಾಗಿದ್ದು, ಈ ಭಾಗದಲ್ಲಿಯೂ ಉದ್ಯಾನವನಗಳ ಪ್ರಗತಿಗೆ ಆದ್ಯತೆ ನೀಡಲಾಗುವುದು. 380 ಅಂಬ್ಯುಲೆನ್ಸ್ಗಳನ್ನು ಹೊಸದಾಗಿ ಸೇವೆಗೆ ಅಣಿಗೊಳಿಸಲಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಆಯುಷ್ಮಾನ ಭಾರತ ಹಾಗೂ ಆರೋಗ್ಯ ಕನರ್ಾಟಕ ಯೋಜನೆಯಡಿಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ಆರೋಗ್ಯ ಸೇವೆ ಒದಗಿಸುವ ಮಹತ್ತರವಾದ ಹೆಜ್ಜೆಯನ್ನು ಸಕರ್ಾರ ಇರಿಸಿದೆ ಎಂದು ಹೇಳಿದರು.
ನನಗೆ ಕಷ್ಟಕಾಲದಲ್ಲಿ ಅತೀ ಹೆಚ್ಚಿನ ಸಹಾಯ ಕೊಲ್ಹಾರದಿಂದಲೇ ಆಗಿದ್ದು, ಕೊಲ್ಹಾರ ತಾಲೂಕಾ ಕೇಂದ್ರ ಆಗಿ ರೂಪುಗೊಳ್ಳಲು ಪ್ರತಿಯೊಬ್ಬರ ಶ್ರಮ ಅಡಗಿದೆ, ಕೊಲ್ಹಾರ ಪಟ್ಟಣದ ಸರ್ವತೋಮುಖ ಪ್ರಗತಿಗಾಗಿ 150 ಕೋಟಿ ರೂ. ಅನುದಾನ ನೀಡಿ ಎಂದು ಮುಖ್ಯಮಂತ್ರಿಗಳಿಗೆ ಕೋರಿದ ಹಿನ್ನಲೆಯಲ್ಲಿ ಪ್ರಥಮ ಹಂತದಲ್ಲಿಯೇ 50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.
ನಾನು ವಿಜಯಪುರ ನಗರಸಭೆಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸುಸಜ್ಜಿತ ಮಾರುಕಟ್ಟೆ ನಿಮರ್ಿಸಿದ್ದೆ, ಅದಕ್ಕೆ ಲಾಲ್ ಬಹಾದ್ದೂರ ಶಾಸ್ತ್ರೀಜೀ ಅವರ ಹೆಸರು ಇರಿಸಿದೆ, ಪ್ರಸ್ತುತ ಕೊಲ್ಹಾರ ಪಟ್ಟಣದಲ್ಲಿ ನಿಮರ್ಿಸಲಾಗಿರುವ ಮಾರುಕಟ್ಟೆ ಪ್ರಾಂಗಣಕ್ಕೆ ಮಹಾತ್ಮಾ ಗಾಂಧೀಜಿ ಅವರ ಹೆಸರು ಇರಿಸಬೇಕು ಎಂದು ಸಲಹೆ ನೀಡಿದರು. ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 24*7 ಕುಡಿಯುವ ನೀರಿನ ಯೋಜನೆ, ಮೆಗಾ ಮಾಕರ್ೆಟ್ ನಿಮರ್ಾಣ ಸೇರಿದಂತೆ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕೊಲ್ಹಾರ ದಿಗಂಬರೇಶ್ವರ ಮಠದ ಶ್ರೀ ಯೋಗಿ ಕಲ್ಲಿನಾಥ ಆಶೀವರ್ಚನ ನೀಡಿ, ಕೊಲ್ಹಾರ ಪಟ್ಟಣ ಪಂಚಾಯ್ತಿಯಾಗಿ ರೂಪುಗೊಳ್ಳಲು ಹಾಗೂ ಕೊಲ್ಹಾರ ತಾಲೂಕಾ ಕೇಂದ್ರವಾಗಿ ರೂಪುಗೊಳ್ಳಲು ಸಚಿವ ಶಿವಾನಂದ ಪಾಟೀಲರೇ ಕಾರಣ, ಬಸವನ ಬಾಗೇವಾಡಿ ತಾಲೂಕಿನಲ್ಲಿ ದೊಡ್ಡ ಪಟ್ಟಣವಾಗಿದ್ದರೂ ಸಹ ಈ ಹಿಂದೆ ಕೊಲ್ಹಾರದಲ್ಲಿ ಅಭಿವೃದ್ಧಿ ಎನ್ನುವುದೇ ಮರೀಚಿಕೆಯಾಗಿತ್ತು, ಈಗ ಪಟ್ಟಣದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ವಿವಿಧ ಕಾಮಗಾರಿಗಳಿಗೆ ಚಾಲನೆ ದೊರಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಚಿವರಾದ ನಂತರ ಪ್ರಥಮ ಬಾರಿಗೆ ಕೊಲ್ಹಾರ ಪಟ್ಟಣಕ್ಕೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ ಅವರಿಗೆ ಪೌರಸನ್ಮಾನದ ಜೊತೆಗೆ ಕೊಲ್ಹಾರ ನಿವಾಸಿಗಳು ಸನ್ಮಾನಿಸಿ ಗೌರವಿಸಿದರು.
ಮಸೂತಿ ಹಿರೇಮಠದ ಶ್ರೀ ಪ್ರಭುಶಿವಕುಮಾರ ಮಹಾಸ್ವಾಮಿಗಳು, ಹಜರತ್ ಮುಖ್ತಿಯಾರ್ ಪಠಾಣ ಸಾನಿಧ್ಯ ವಹಿಸಿದ್ದರು. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಉಸ್ಮಾನ ಪಟೇಲ್, ಕೊಲ್ಹಾರ ಪಟ್ಟಣ ಪಂಚಾಯತ ಅಧ್ಯಕ್ಷ ಚಂದ್ರಶೇಖರ ಗಣಕುಮಾರ, ಬಸವನ ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಅಂಗಡಿ, ನಾತಾಜಿ ನಾಗರಾಳ, ಕಲ್ಲಪ್ಪ ಸೊನ್ನದ, ರಾಮಣ್ಣ ಬಾಟಿ, ಉಸ್ಮಾನ ಕಂಕಣಪೀರ ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಗೌಸ್ ಹವಾಲ್ದಾರ ಕಾರ್ಯಕ್ರಮ ನಿರೂಪಿಸಿದರು.