ಭಂಟನೂರ ಪಿಕೆಪಿಎಸ್ ಗೆ ಸದಸ್ಯರಾಗಿ ಶಿವರಾಜ್ ಆಯ್ಕೆ

Shivraj elected as member of Bhantanur PKPS

ಭಂಟನೂರ ಪಿಕೆಪಿಎಸ್ ಗೆ ಸದಸ್ಯರಾಗಿ ಶಿವರಾಜ್ ಆಯ್ಕೆ  

ತಾಳಿಕೋಟಿ, 28:  ತೀವ್ರ ಕುತೂಹಲ ಕೆರಳಿಸಿದ ಭಂಟನೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬಿನ್ ಸಾಲಗಾರರ ಒಂದು ಸ್ಥಾನಕ್ಕೆ ಸೋಮವಾರದಂದು ನಡೆದ ಚುನಾವಣೆಯಲ್ಲಿ ಶಿವರಾಜ್ ಇಂಗಳಗೇರಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿ ಅಚ್ಛರಿ ಮೂಡಿಸಿದರು. 

   ಸಂಘದ ಒಟ್ಟು 12 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಅವಿರೋದ ಆಯ್ಕೆ ನಡೆದು ಕೇವಲ ಒಂದು ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ​‍್ಪಟಟಿತ್ತು, ಬಿನ್ ಸಾಲಗಾರರ ಕ್ಷೇತ್ರದ ಒಟ್ಟು ಒಟ್ಟು ಮತದಾರರಲ್ಲಿ 25 ಮತದಾರರು ಮತ ಚಲಾವಣೆ ಹಕ್ಕು ಹೊಂದಿ ಉಳಿದ 76 ಮತದಾರರು ನ್ಯಾಯಾಲಯದ ಮೊರೆ ಹೋಗಿ ತಮ್ಮ ಮತ ಹಕ್ಕು ಪಡೆದುಕೊಂಡು ಮತ ಚಲಾವಣೆ ಮಾಡಿದ್ದರು ಇವರಿಗಾಗಿಯೇ ಪ್ರತ್ಯೇಕ ಮತಪೆಟ್ಟಿಗೆ ಕಲ್ಪಿಸಿ ಮತದಾನ ಮಾಡಿಸಲಾಗಿತ್ತು ಮತ ಎಣಿಕೆ ಮಾಡದೆ ಅದನ್ನು ನ್ಯಾಯಾಲಯದ ಆದೇಶದಂತೆ ಕಾಯ್ದಿರಿಸಲಾಗಿತ್ತು. 

   ಚುನಾವಣೆ ಅಧಿಕಾರಿ ಎ.ಜಿ. ದೇಸಾಯಿ ಅವರು ಹೊಸದಾಗಿ ಮತದಾನದ ಅರ್ಹತೆ ಹೊಂದಿದ ಚಲಾವಣೆಗೊಂಡ 69 ಮತಗಳ ಪೆಟ್ಟಿಗೆಯನ್ನು ಕಾಯ್ದಿರಿಸಿ ಮೊದಲೇ ಅರ್ಹತೆ ಹೊಂದಿದ್ದ ಚಲಾವಣೆಗೊಂಡ ಕೇವಲ 23 ಮತಗಳನ್ನು ಎಣಿಕೆ ಮಾಡಿದಾಗ ಶಿವರಾಜ್ ಇಂಗಳಗೇರಿ ಅವರಿಗೆ 12 ಮತಗಳು ಬಂದು ಅವರ ಪ್ರತಿಸ್ಪರ್ಧಿ ಭೀಮಬಾಯಿ ಬಿರಾದಾರ್ ಅವರಿಗೆ 11 ಮತಗಳು ಬಂದಿದ್ದವು. ಇದರಿಂದ ಶಿವರಾಜ್ ಇಂಗಳಗಿರಿಯವರು ಒಂದು ಮತದ ಅಂತರದಿಂದ ತಾತ್ಕಾಲಿಕವಾಗಿ ಬೀನ್ ಸಾಲಗಾರರ ಕ್ಷೇತ್ರಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿಗಳು ಘೋಷಿಸಿದರು.    ವಿಜಯೋತ್ಸವದಲ್ಲಿ ಮುಖಂಡರಾದ ಸುರೇಶಬಾಬುಗೌಡ ಬಿರಾದಾರ ಪೀರಾಪೂರ, ವಿಶ್ವನಾಥ್ ರೆಡ್ಡಿ ನಾಡಗೌಡ, ಸುರೇಶಕುಮಾರ ಇಂಗಳಗೇರಿ, ಕಾಶಿರಾಯಗೌಡ ಬಿರಾದಾರ, ಪಂಚಾಕ್ಷರಿ ಹಿರೇಮಠ, ಸಂಗನಗೌಡ ಇಂಗಳಗೇರಿ, ಬಸವಂತರಾಯ ಗೌಡ ಚೌದ್ರಿ, ಸಂಗನಗೌಡ ಪಾಟೀಲ, ಸೋಮನಗೌಡ ಆನೇಸೂರ, ಮಲ್ಲನಗೌಡ ಆನೇಸೂರ, ಶಂಕರಗೌಡ ದೇಸಾಯಿ, ಗೌಡಪ್ಪಗೌಡ ಪಾಟೀಲ, ಬಸನಗೌಡ ಬಸರೆಡ್ಡಿ, ವೆಂಕರೆಡ್ಡಿ ಬಿರಾದಾರ, ಬಸನಗೌಡ ಸಿಂಗನಹಳ್ಳಿ, ಶೇಖಣ್ಣ ಆಲ್ಯಾಳ, ಗೌಡಪ್ಪಗೌಡ ಪದರಡ್ಡಿ, ಹುಸೇನ್ ಬಾಷಾ ಮುಲ್ಲಾ, ನಿಂಗಣ್ಣ ಹವಾಲ್ದಾರ, ರೆಡ್ಡಿಗೌಡ ಬಿರಾದಾರ, ನೀಲಕಂಠರ ಪಾಟೀಲ, ಹನುಮಂತರಾಯ ತಳ್ಳೊಳ್ಳಿ, ಸಂಗನಗೌಡ ಪಾಟೀಲ, ಅಪ್ಪಿಸಾಹೇಬ ಗೌಡ ಬಿರಾದಾರ, ಪ್ರಭುಗೌಡ ಪಾಟೀಲ ಮತ್ತಿತರರು ಇದ್ದರು.