ವಿವಿಧ ವಿಪತ್ತುಗಳಿಂದ ರಕ್ಷಣಾತ್ಮಕ ಮುನ್ನೇಚ್ಚರಿಕಾ ಕ್ರಮದ ಕುರಿತು ವೈಜ್ಞಾನಿಕ ತಂತ್ರಜ್ಞಾನ ಪ್ರದರ್ಶನ
ಗದಗ 12 : ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಅಂತರರಾಷ್ಟ್ರೀಯ ದಿನಾಚರಣೆಯ ಸುಸಂದರ್ಭದಲ್ಲಿ, ಅವಳಿ ನಗರವಾದ ಗದಗ ಬೆಟಗೇರಿಯ ಪ್ರತಿಷ್ಟಿತ ಆಂಗ್ಲ ಮಾಧ್ಯಮ ಶಾಲೆಯಾದ ಸಿ ಡಿ ಓ ಜೈನ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಇಂದು ವೈವಿಧ್ಯಮಯ ವಿಜ್ಞಾನ ಮತ್ತು ಗಣಿತ ಪ್ರದರ್ಶನ ಜರುಗಿತು.ಆ ಪ್ರಯುಕ್ತ ಗದಗ ಸಿ ಡಿ ಓ ಜೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಕುಮಾರಿ ಅನನ್ಯ ರಾಘವೇಂದ್ರ ಪಾಲನಕರ ಹಾಗೂ ಕುಮಾರಿ ಹರ್ಷಿತಾ ವಿನಾಯಕ ಜಾನಮನೆ ಇವರು ಜಂಟಿ ಸಹಭಾಗಿತ್ವದಲ್ಲಿ ವಿವಿಧ ನೈಸರ್ಗಿಕ ವಿಪತ್ತುಗಳಾದ ಪ್ರಳಯ, ಸುನಾಮಿ, ಚಂಡಮಾರುತ, ಭೂಕಂಪ, ರೇಲ್ವೆ ದುರಂತ, ಅಗ್ನಿ ಅವಘಡ ಇತ್ಯಾದಿ ಗಂಭೀರ ವಿಪತ್ತುಗಳಿಂದ ರಕ್ಷಣಾತ್ಮಕ ತಂತ್ರಜ್ಞಾನವನ್ನೂಳಗೊಂಡ ಕ್ರೀಯಾ ಯೋಜನೆಯನ್ನು ಪ್ರಾಯೋಗಿಕವಾಗಿ ತಯಾರಿಸಿಕೊಂಡು ಇಂದು ಬುಧವಾರ ದಿನಾಂಕ 12.2.2025 ರಂದು, ಶಾಲೆಯಲ್ಲಿ ಜರುಗಿದ ಪ್ರಾಥಮಿಕ ವಿಭಾಗದ ವಿಜ್ಞಾನ ಮತ್ತು ಗಣಿತ ಪ್ರದರ್ಶನದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು ನೈಸರ್ಗಿಕ ವಿಕೋಪಗಳಿಂದ ರಕ್ಷಣಾತ್ಮ ಕ್ರೀಯಾ ಯೋಜನೆಯ ಕುರಿತು ಸಮಗ್ರವಾಗಿ ವೀಕ್ಷಕರಿಗೆ ವಿವರಿಸುವ ಮೂಲಕ ಗಮನ ಸೆಳೆದಿರುತ್ತಾರೆ.
.