ರೋಟರಿ ಸಂಸ್ಥೆ ಆಯೋಜನೆ; ಸಮಾಜ ಸೇವೆಗೆ ರಕ್ತದಾನವೇ ಶ್ರೇಷ್ಠ ಕೊಡುಗೆ ಎಂದು ಗಣ್ಯರ ಕರೆ

  ರೋಟರಿ ಸಂಸ್ಥೆ ಆಯೋಜನೆ; ಸಮಾಜ ಸೇವೆಗೆ ರಕ್ತದಾನವೇ ಶ್ರೇಷ್ಠ ಕೊಡುಗೆ ಎಂದು ಗಣ್ಯರ ಕರೆ  Organized by the Rotary Club; dignitaries call blood donation the greatest contribution to social s

ರಾಣೆಬೆನ್ನೂರು  2: ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ನಗರದ ಶಿಕ್ಷಣ ಪ್ರೇಮಿ ಮಹಾದೇವಪ್ಪ ಖನ್ನೂರ ಸಭಾಭವನದಲ್ಲಿ ರೋಟರಿ ಸೇವಾ ಸಂಸ್ಥೆಯ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.  ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಪೌರಾಯುಕ್ತ ಫಕೀರ​‍್ಪ ಇಂಗಳಗಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಅಪಘಾತ ಹಾಗೂ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ವಿವಿಧ ಸೇವಾ ಸಂಸ್ಥೆಗಳು ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತ ಭಂಡಾರದ ಸಂಗ್ರಹಕ್ಕೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಡಾ. ಪ್ರವೀಣ್ ಖನ್ನೂರ ಮಾತನಾಡಿ, ಪದಗ್ರಹಣದ ಬಳಿಕ ವೈದ್ಯರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಿರುವುದು ಸಂಸ್ಥೆಯ ಮೊದಲ ಸೇವಾ ಕಾರ್ಯಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.  ಟ್ಯಾಗೋರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಕೇಳಗಾರ ಅವರು ವೈದ್ಯರ ದಿನಾಚರಣೆಯ ಮಹತ್ವ ಮತ್ತು ಆರೋಗ್ಯ ಸೇವೆಯಲ್ಲಿ ವೈದ್ಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.  

ಕಾರ್ಯಕ್ರಮದಲ್ಲಿ ಸಹಾಯಕ ರಾಜ್ಯಪಾಲ ಬಸವರಾಜ ಸುಂಕಾಪುರ, ರೋಟರಿ ಕಾರ್ಯದರ್ಶಿ ಜಿ.ಎಸ್‌. ರಾಮಚಂದ್ರ, ಇನ್ನರ್ವೀಲ್ ಅಧ್ಯಕ್ಷೆ ಪ್ರಮಿಳಾ ಜಂಬಿಗಿ, ಮಂಗಳಗೌರಿ ಪೂಜಾರ, ತ್ರಿವೇಣಿ ಪವಾರ್, ಡಾ. ಶೈಲಶ್ರೀ ಖನ್ನೂರ, ಸುಧೀಂದ್ರ ಕುರುವತ್ತಿ, ಜಿ.ಜಿ. ಹೊಟ್ಟಿಗೌಡರ, ಉಮಾಪತಿ ಹೊನ್ನಾಳಿ, ಸುಜಿತ್ ಜಂಬಿಗಿ, ಶಿವಯೋಗಿ ಅಂಗಡಿ, ಡಾ. ನಾರಾಯಣ ಪವಾರ್, ವಾಸುದೇವ ಗುಪ್ತಾ, ಪ್ರಕಾಶ ಮಾಳಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.  ಶಿಬಿರದಲ್ಲಿ ಡಾ. ಪ್ರವೀಣ್ ಖನ್ನೂರ ಸೇರಿದಂತೆ ಹಲವರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ವ್ಯಾಪಾರಿಗಳು, ಯುವಕರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಶಿಬಿರ ಯಶಸ್ವಿಯಾಗುವಂತೆ ಮಾಡಿದರು.