ಸರ್ವಜ್ಞರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠ: ತುಕಾರಾಂ

ಕೊಪ್ಪಳ 25: ಸಂತ ಕವಿ ಸರ್ವಜ್ಞರ ವಚನಗಳು ಸರ್ವಕಾಲಕ್ಕೂ ಶ್ರೇಷ್ಠವಾಗಿ ಉಳಿದಿವೆ ಎಂದು ಕನರ್ಾಟಕ ಸಕರ್ಾರದ ವೈದ್ಯಕೀಯ ಶಿಕ್ಷಣ ಸಚಿವರಾದ ಈ. ತುಕಾರಾಂ ಅವರು ಹೇಳಿದರು. 

ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಸೋಮವಾರದಂದು ಏರ್ಪಡಿಸಿದ ಸಂತ ಕವಿ ಸರ್ವಜ್ಞ ಜಂಯಂತಿ ಆಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಆಟು ಮುಟ್ಟದ ಸೊಪ್ಪಿಲ್ಲ ಸರ್ವಜ್ಞರು ಹೇಳದ ಮಾತಿಲ್ಲ ಎಂದು ಹೇಳಲಾಗುತ್ತಿದ್ದು, ಸಂತ ಕವಿ ಸರ್ವಜ್ಞರ ವಚನಗಳು ಇಂದಿಗೂ ಅಜರಾಮರವಾಗಿ ಉಳಿದಿವೆ.  ಅವರ ತ್ರೀಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡೆವೆ.  ಮನುಷ್ಯರಾಗಿ ಬಾಳುವುದು ಮುಖ್ಯ ಎಂದು ಕವಿ ಸರ್ವಜ್ಞರು ಮನುಕುಲಕ್ಕೆ ಸಂದೇಶವನ್ನು ನೀಡಿದ್ದು, ತ್ರೀಪದಿಗಳ ಮೂಲಕ ಬದುಕಿನ ಸತ್ಯವನ್ನು ತುಂಬಾ ಸರಳವಾಗಿ ಜಗತ್ತಿಗೆ ಪರಿಚಯಿಸಿದ್ದಾರೆ.  ಇಂತಹ ಮಹನಿಯರ ವಿಚಾರಧಾರೆಗಳನ್ನು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ಸಕರ್ಾರವು ಜಯಂತಿಯನ್ನು ಆಚರಿಸುತ್ತಿದೆ.  ಸಣ್ಣ-ಸಣ್ಣ ಸಮಾಜಗಳ ಸಾಮಾಜಿಕ, ಆಥರ್ಿಕ ಅಭಿವೃದ್ಧಿಗಾಗಿ ನಮ್ಮ ಸಕರ್ಾರವು ಹಲವಾರು ಯೋಜನೆಗಳಡಿ ಹೆಚ್ಚಿನ ಅನುದಾನವನ್ನು ನೀಡುತ್ತಿದೆ.  ಪ್ರತಿಯೊಬ್ಬರ ಜೀವನದಲ್ಲಿಯೂ ಶಿಕ್ಷಣ ಅತ್ಯವಶ್ಯಕವಾಗಿದ್ದು, ಶಿಕ್ಷಣದಿಂದ ವ್ಯಕ್ತಿ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿ ಕಾಣಲು ಸಾಧ್ಯ.  ಆದ್ದರಿಂದ ಮೂಲ ಕಸುಬುಗಳ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ನೀಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಈ. ತುಕಾರಾಂ ಅವರು ಹೇಳಿದರು.  

ಹಂಪಿ ವಿಶ್ವ ವಿದ್ಯಾಲಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಕನ್ನಡ ಪ್ರಾಧ್ಯಾಪಕರಾದ ಡಾ. ಅಮರೇಶ ನುಗಡೋಣಿ ಅವರು ಸಂತ ಕವಿ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸವನ್ನು ನೀಡಿ, ಸರ್ವಜ್ಞ ಅವರು 15ನೇ ಶತಮಾನದಲ್ಲಿ ಬಾಳಿದವರು.  ಪ್ರತಿಯೊಬ್ಬರೂ ಹುಟ್ಟಿದಾಗ ಜಾತಿಯಿಂದ ಬಿಂಬಿಸಿಕೊಳ್ಳುತ್ತಾರೆ.  ಆದರೆ ಸರ್ವಜ್ಞರು ಯಾವುದೇ ಒಂದು ನಿಧರ್ಿಷ್ಟ ಜಾತಿಯಲ್ಲಿ ಬಿಂಬಿಸಿಕೊಳ್ಳದೇ ಯಾವ ಜಾತಿಗೂ ಸೇರದೇ ಇರುವವರು.  ಕವಿ ಸರ್ವಜ್ಞರು ಕನರ್ಾಟಕದಲ್ಲಿ ನೀತಿ ಶಾಸ್ತ್ರವನ್ನು ಬೋಧಿಸಿದ್ದಾರೆ.  ನೀತಿ ಶಾಸ್ತ್ರದ ಮೂಲಕ ಧರ್ಮ, ಜಾತಿ, ಮತಗಳನ್ನು ದ್ವೇಷಿಸಿದ್ದಾರೆ.  ಯಜ್ಞ ಯಾಗಗಳು, ಹರಕೆ ಪೂಜೆಗಳನ್ನು ಮಾಡುವುದು ಮೂಡ ನಂಬಿಕೆ.  ತೋರಿಕೆಯ ಭಕ್ತಿಯನ್ನು ಮಾಡುವುದನ್ನು ನಿರಾಕರಿಸಬೇಕು ಎಂದು ಕವಿ ಸರ್ವಜ್ಞರು ತಮ್ಮ ವಚನಗಳ ಮೂಲಕ ಜನರಿಗೆ ಹೇಳುತ್ತಾ ಬಂದಿದ್ದಾರೆ.  ಸರ್ವಜ್ಞರು ಜಾತಿ, ಧರ್ಮಗಳನ್ನು ಪಾಲಿಸದೇ ಶಿವನೇ ತನ್ನ ಕುಲವೆಂದು, ಶಿವನನ್ನು ಆರಾಧಿಸುತ್ತಾ ತಮ್ಮ ವಚನಗಳ ಮೂಲಕ ಜಾತಿ, ಧರ್ಮದ ಅಂಧಕಾರದಿಂದ ಹೊರ ಜಗತ್ತಿಗೆ ಬರುವಂತೆ ಜನಕ್ಕೆ ಸಾರಿದ್ದಾರೆ.  ಬಸವಣ್ಣನವರು ಹೇಳಿದಂತೆ "ಇವನ್ಯಾರವ ಇವನ್ಯಾರವ ಎಂದು ಹೇಳದೇ, ಇವ ನಮ್ಮವ ಇವ ನಮ್ಮವ ಎಂದು ಹೇಳು" ಎಂಬ ಹಾಗೆ ಬದುಕಬೇಕು ಎಂದು ತಿಳಿಸಿದ್ದಾರೆ.  ಭೂಮಿಯ ಮೇಲೆ ಇರುವವರನ್ನು ದ್ವೇಷಿಸು ಎಂಬುವುದಕ್ಕೆ ಸಂತ ಕವಿ ಸರ್ವಜ್ಞರು ಈ ಭೂಮಿಯ ಮೇಲೆ ಇರುವವರೆಲ್ಲ ನನ್ನ ಕುಲಬಾಂಧವರಾಗಿರುವಾಗ ನಾನು ಹೇಗೆ ಎಲ್ಲರನ್ನೂ ದ್ವೇಷಿಸಲಿ ಎಂದು ತಮ್ಮ ವಚಗಳ ಮೂಲಕ ಹೇಳಿದ್ದಾರೆ.  ಎಲ್ಲರ ವಿವೇಚನೆಯ ಪ್ರತಿನಿಧಿಯಾಗಿದ್ದವರು ಸಂತ ಕವಿ ಸರ್ವಜ್ಞ.  ಅವರ ವಚನಗಳು ಸರ್ವಕಾಲಿಕವಾದದ್ದಾಗಿವೆ.  ಇಂತಹ ಮಹಾನಿಯರನ್ನು ಜಯಂತಿಯಲ್ಲಿ ಅಷ್ಟೆ ನೆನೆಯದೇ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು.  ಅಂದಾಗ ಮಾತ್ರ ಜಯಂತಿ ಆಚರಣೆಗೆ ಹೆಸರು ಬರುತ್ತದೆ ಹಾಗೂ ನಮ್ಮ ಜೀವನವು ಸಹ ಸಾರ್ಥಕವಾಗುತ್ತದೆ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಸಂತ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.  ಸಮಾರಂಭದ ಅಧ್ಯಕ್ಷತೆಯನ್ನು ಸಕರ್ಾರದ ಸಂಸದೀಯ ಕಾರ್ಯದಶರ್ಿ ಹಾಗೂ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ವಹಿಸಿದ್ದರು.  ಸಂಸದ ಸಂಗಣ್ಣ ಕರಡಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ನಗರಸಭೆ ಸದಸ್ಯರಾದ ಗುರುರಾಜ ಹಾಗೂ ಅಜೀಮ್ ಅಖ್ತರ್, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ತಹಶೀಲ್ದಾರ ಜೆ.ಬಿ. ಮಜ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೆಶಕ ಕೃಷ್ಣಮೂತರ್ಿ ದೇಸಾಯಿ, ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಚಾರ್ಯರಾದ ಚಿಲಕರಾಯ, ಪ್ರಾಧ್ಯಾಪಕ ಡಾ. ಪ್ರಭುರಾಜ್ ನಾಯಕ್, ಸಮಾಜದ ಮುಖಂಡರಾದ ಕಳಕಪ್ಪ ಕುಂಬಾರ, ಮಲ್ಲಪ್ಪ ಕುಂಬಾರ ಕುಣಿಕೇರಿ, ನಿಂಗಪ್ಪ ಕುಂಬಾರ ಇರಕಲ್ಗಡ, ಗವಿಸಿದ್ದಪ್ಪ ಕುಂಬಾರ ಕಕರ್ಿಹಳ್ಳಿ, ಪ್ರಭು ಕುಂಬಾರ, ಪರಸಪ್ಪ ಬಹದ್ದೂರ ಬಂಡಿ, ಬೋಜಪ್ಪ ಕುಂಬಾರ, ಈರಣ್ಣ ಆಡೂರ್, ಗಣ್ಯರಾದ ಅಲ್ಲಮಪ್ರಭು ಬೆಟ್ಟದೂರು ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಕಾರ್ಯಕ್ರಮದ ನಂತರ ಕವಿ ಸರ್ವಜ್ಞರ ಭಾವಚಿತ್ರದ ಭವ್ಯ ಮೇರವಣಿಗೆ ಅಶೋಕ ವೃತ್ತದಿಂದ ಜವಾಹರ ರಸ್ತೆ, ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಮಾರ್ಗವಾಗಿ ಪ್ಯಾಟಿ ಈಶ್ವರ ದೇವಸ್ಥಾನದವರೆಗೆ ಅದ್ದೂರಿಯಾಗಿ ಜರುಗಿತು.