ಮಕ್ಕಳಿಗಿಲ್ಲ ಸಮವಸ್ತ್ರ್ರ, ಶೂ ಭಾಗ್ಯ

ನರಗುಂದ 13: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ತರಗತಿಗಳು ಆರಂಭವಾಗಿ ತಿಂಗಳು ಕಳೆದರೂ ತಾಲೂಕಿನ ಸಕರ್ಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ, ಶೂಗಳನ್ನು ವಿತರಿಸಿಲ್ಲ. 

ಪ್ರಸಕ್ತ ವರ್ಷದಿಂದ 8ರಿಂದ 10ನೇ ತರಗತಿ ವಿದ್ಯಾಥರ್ಿನಿಯರಿಗೆ ಸಮವಸ್ತ್ರವಾಗಿ ಚೂಡಿದಾರ್ ವಿತರಿಸಲು ನಿರ್ಧರಿಸಿದೆ. 8ನೇ ತರಗತಿಗೆ ಹೊಸದಾಗಿ ದಾಖಲಾಗಿರುವ ಎಲ್ಲ ವಿದ್ಯಾಥರ್ಿನಿಯರಿಗೆ ಶಿಕ್ಷಣ ಇಲಾಖೆ ಹೊಸ ಸಮವಸ್ತ್ರ ಪೂರೈಸಬೇಕಿದೆ.  ನರಗುಂದ ತಾಲೂಕಿನಲ್ಲಿ 54 ಪ್ರಾಥಮಿಕ ಹಾಗೂ 17 ಸಕರ್ಾರಿ ಪ್ರೌಢ ಶಾಲೆಗಳಿವೆ. 1ರಿಂದ 7ನೇ ತರಗತಿವರೆಗೆ 3615 ಬಾಲಕರು ಹಾಗೂ 4150 ಬಾಲಕಿಯರು ಸೇರಿ ಒಟ್ಟು 7765 ವಿದ್ಯಾಥರ್ಿಗಳಿದ್ದಾರೆ. 8ನೇ ತರಗತಿಯಲ್ಲಿ 466 ವಿದ್ಯಾಥರ್ಿನಿಯರು, 393 ವಿದ್ಯಾರ್ಥಿ ಗಳು, 9 ನೇ ತರಗತಿಯಲ್ಲಿ 442 ವಿದ್ಯಾಥರ್ಿನಿಯರು, 337 ವಿದ್ಯಾಥರ್ಿಗಳು, 10ನೇ ತರಗತಿಯಲ್ಲಿ 425 ವಿದ್ಯಾರ್ಥಿನಿಯರು, 325 ವಿದ್ಯಾರ್ಥಿ ಗಳು ಸೇರಿ ಒಟ್ಟು 1329 ವಿದ್ಯಾಥರ್ಿನಿಯರು ಹಾಗೂ 1055 ವಿದ್ಯಾಥರ್ಿಗಳಿದ್ದಾರೆ. 

ಪ್ರತಿವರ್ಷ ಶೂ ವಿತರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯಾ ಶಾಲೆಯ ಎಸ್ಡಿಎಂಸಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. ಆದರೆ, ಸಕರ್ಾರ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಜೂನ್ ಮೊದಲ ವಾರದಲ್ಲಿಯೇ ಬರಬೇಕಿದ್ದ ಚೂಡಿದಾರ್ ಸಮವಸ್ತ್ರಗಳು ಚುನಾವಣೆ ನೀತಿ ಸಂಹಿತೆಯಿಂದಾಗಿ ಟೆಂಡರ್ ತಡವಾಗಿ ನೀಡಲಾಗಿತ್ತು. ಅದರಿಂದ ಈವರೆಗೂ ಬಟ್ಟೆ ವಿತರಣೆಯಾಗಿಲ್ಲ. 8ನೇ ತರಗತಿಯವರಿಗೆ ಬೈಸಿಕಲ್ಗಳ ವಿತರಣೆಯೂ ಈ ಬಾರಿ ತಡವಾಗಲಿದೆ. 

ಹೀಗಿದೆ ಸಮವಸ್ತ್ರ: ಪ್ರೌಢ ಶಾಲೆಯ ವಿದ್ಯಾಥರ್ಿನಿಯರಿಗೆ ಬೂದು ಬಣ್ಣದ ಪ್ಯಾಂಟ್ ಮತ್ತು ದುಪ್ಪಟ್ಟ, ಚೆಕ್ಸ್ ಕಲರ್ ಟಾಫ್ ಬಟ್ಟೆ ಹಾಗೂ ಪ್ರಾಥಮಿಕ ಶಾಲೆಗಳ ವಿದ್ಯಾಥರ್ಿಗಳಿಗೆ ನೀಲಿ ಬಣ್ಣದ ಪ್ಯಾಂಟ್, ಶಟರ್್ ವಿತರಿಸಲಾಗುತ್ತದೆ.