ಫೆ.22ರಿಂದ ಎನ್.ಎಸ್.ಎಸ್ ರಾಷ್ಟ್ರೀಯ ಭಾವೈಕ್ಯತೆ ಶಿಬಿರ

ಬಳ್ಳಾರಿ20: ಇದೇ ತಿಂಗಳ ಫೆ.22ರಿಂದ ಫೆ.28ರವರೆಗೆ ಒಂದು ವಾರಗಳ ಕಾಲ ರಾಷ್ಟ್ರೀಯ ಭಾವಕ್ಯತೆ ಶಿಬಿರವನ್ನು ನಗರದ ಸರಳದೇವಿ ಸತೀಶ್ಚಂದ್ರ ಅಗರ್ವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ (ಸ್ವಾಯತ್ತ)ನಲ್ಲಿ ಏರ್ಪಡಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಯು.ಅಬ್ದುಲ್ ಮುತಾಲಿಬ್ ಅವರು ಹೇಳಿದರು.

   ನಗರದ ಸರಳದೇವಿ ಸತೀಶ್ಚಂದ್ರ ಅಗರ್ವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

    ರಾಜ್ಯದ 10 ಜಿಲ್ಲೆಗಳಲ್ಲಿ ವಿವಿಧೆಡೆ ಯಲ್ಲಿ ಈ ಶಿಬಿರಗಳನ್ನು ಆಯೋಜನೆ ಮಾಡಲಾಗಿದ್ದು, ಕಲಬುರಗಿ ವಿಭಾಗೀಯ ಮಟ್ಟದಲ್ಲಿ  ಸರಳದೇವಿ ಸತೀಶ್ಚಂದ್ರ ಅಗರ್ವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಈ ಶಿಬಿರಕ್ಕೆ ಶಾಸಕರುಗಳು, ಲೋಕಸಭಾ ಸದಸ್ಯರು ಹಾಗೂ ಇತರೆ ಗಣ್ಯವ್ಯಕ್ತಿಗಳು ಆಗಮಿಸಲಿದ್ದಾರೆ. 

   ರಾಷ್ಟ್ರೀಯ ಭಾವೈಕ್ಯತೆ ಶಿಬಿರದ ಅಂಗವಾಗಿ ತಮಿಳುನಾಡು, ಕೇರಳ, ಪಾಂಡೀಚೇರಿ, ಆಂಧ್ರ ಪ್ರದೇಶ ರಾಜ್ಯಗಳಿಂದ 55 ವಿದ್ಯಾಥರ್ಿಗಳು, ಕನರ್ಾಟಕ ಹಾಗೂ ಸ್ಥಳೀಯ ವಿದ್ಯಾಥರ್ಿಗಳು 95 ಸೇರಿದಂತೆ ಒಟ್ಟು 150 ಶಿಬಿರಾಥರ್ಿ ವಿದ್ಯಾಥರ್ಿಗಳು ಆಗಮಿಸಲಿದ್ದಾರೆ. ಬಂದಂತಹ ವಿದ್ಯಾಥರ್ಿಗಳಿಗೆ ನಗರದ ಸಕರ್ಾರಿ ತಾರಾನಾಥ ಆಯುವರ್ೇದ ಮಹಾವಿದ್ಯಾಲಯದಲ್ಲಿ ಉಚಿತವಾಗಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

    ರಾಷ್ಟ್ರೀಯಾ ಭಾವ್ಯಕ್ಯತೆ ಶಿಬಿರಕ್ಕೆ ಆಗಮಿಸುತ್ತಿರುವ ವಿದ್ಯಾಥರ್ಿಗಳಿಂದ ಆಯಾ ರಾಜ್ಯದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತದೆ. ಅದರ ಜೊತೆಗೆ ವಿಶೇಷ ಉಪನ್ಯಾಸ, ಯೋಗ, ಸ್ವಚ್ಛತಾ ಕಾರ್ಯಕ್ರಮ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಈ ಶಿಬಿರಗಳ ಮೂಲಕ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ  ಸರಳದೇವಿ ಸತೀಶ್ಚಂದ್ರ ಆಗರ್ ವಾಲ್ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಶಿಕ್ಷಕರು ಇದ್ದರು.