ತಾಯಂದಿರು ಕಥೆ ಕಟ್ಟುವ, ಹೇಳುವ ಹವ್ಯಾಸ ಬೆಳೆಸಿಕೊಳ್ಳಲಿ'

ಧಾರವಾಡ 02: ತಾಯಂದಿರು ಕಥೆ ಕಟ್ಟುವ, ಕಥೆ ಹೇಳುವ ಹವ್ಯಾಸಗಳನ್ನು ಬೆಳೆಸಿಕೊಂಡು ನಮ್ಮ ಸಾಹಿತ್ಯದಲ್ಲಿ ಮೌಲ್ಯಯುತವಾದ ದೃಷ್ಟಾಂತಗಳು ಸಾಕಷ್ಟಿದ್ದು ಅವುಗಳನ್ನು ನಮ್ಮ ಮಕ್ಕಳಿಗೆ ತಿಳಿಸುತ್ತಾ, ಅವರ ಜೀವನದಲ್ಲಿ ಎದುರಾಗಬಹುದಾದ ಅವಘಡ, ಅನಾಹುತಗಳನ್ನು ತಪ್ಪಿಸಬಹುದಾಗಿದೆ.  ಕೇವಲ ಪಾಶ್ಚಿಮಾತ್ಯ ಸಂಸ್ಕೃತಿಯ ಉದಾಹರಣೆಗಳನ್ನು ನೀಡದೆ, ನಮ್ಮ ಸಂಸ್ಕೃತಿ, ಸಾಹಿತ್ಯ, ಪರಂಪರೆಯನ್ನು ಎತ್ತಿಹಿಡಿಯವ ಕಥೆಗಳನ್ನು ಆಧರಿಸಿ ವೇದಿಕೆಯಲ್ಲಿ ತಮ್ಮ ಭಾಷಾ ಕೌಶಲ್ಯ ಅಭಿವ್ಯಕ್ತಿಗೊಳಿಸುವುದು ಅವಶ್ಯ ಎಂದು ಕನರ್ಾಟಕ ಕಲಾ ಕಾಲೇಜಿನ ಕನ್ನಡ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ ಡಾ. ಬಿ. ಎಸ್. ಭಜಂತ್ರಿ ಹೇಳಿದರು.

ಕರ್ನಾ ಟಕ ವಿದ್ಯಾವರ್ಧಕ ಸಂಘವು, ದಿ. ಆನಂದ ಚಿಗಟೇರಿ ದತ್ತಿ ಅಂಗವಾಗಿ ಸಂಘದಲ್ಲಿ ಆಯೋಜಿಸಿದ್ದ `ಕನ್ನಡ ಗಾದೆ ಮಾತುಗಳನ್ನು ಆಧರಿಸಿ ಕಥೆ ಹೇಳುವ ಸ್ಪರ್ಧೆ  ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡುತ್ತಾ, ಸ್ಪರ್ಧೆ ಯಲ್ಲಿ `ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ' ಹಾಗೂ `ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ' ಎಂಬ ಗಾದೆಗಳ ಮೇಲೆ ಸ್ಥಳೀಯ ಮಹಿಳಾ ಮಂಡಳದ 40 ಕ್ಕೂ ಹೆಚ್ಚು ಸದಸ್ಯನಿಯರು ಭಾಗವಹಿಸಿದ್ದನ್ನು ಶ್ಲಾಘಿಸಿದರು. 

ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ. ಇಂಗ್ಲೀಷ ವಿಭಾಗದ ಮುಖ್ಯಸ್ಥ ಡಾ. ಶ್ಯಾಮಲಾ ರತ್ನಾಕರ ಮಾತನಾಡಿ, ಕನ್ನಡ ಕಸ್ತೂರಿ ಕನ್ನಡದ ಜಾಣ್ಮೆಯನ್ನು ಪ್ರದಶರ್ಿಸಲು ಆಗಮಿಸಿದ ಮಹಿಳಾ ಸದಸ್ಯರನ್ನು ಅಭಿನಂದಿಸುತ್ತಾ, ಮಹಿಳೆ ತನ್ನ ಎಲ್ಲ ಕೌಟುಂಬಿಕ ನಿರ್ವಹಣೆಯಲ್ಲಿ ಸಾಮೂಹಿಕ ಜವಾಬ್ದಾರಿಯನ್ನು ಹೊಂದಿದ್ದಾರೆ. ತ್ಯಾಗ-ಬಲಿದಾನಗಳೊಂದಿಗೆ ನೋವು ನಲಿವನ್ನು ಸಹಿಸಿಕೊಂಡು, ಕುಟುಂಬ ನಿರ್ವಹಣೆಯಲ್ಲಿ ತಂದೆ-ತಾಯಿ-ಗಂಡ-ಮಕ್ಕಳು ಹೀಗೆ ಅನೇಕರ ಸಂರಕ್ಷಣೆ ಜವಾಬ್ದಾರಿ ಸ್ತ್ರೀ ಮೇಲಿದೆ.  ಸ್ತ್ರೀ, ಪುರುಷನ ಸಮಾಂತರವಾಗಿ ಕಾರ್ಯ ನಿರ್ವಹಿಸಬಲ್ಲಳು. ಈ ದಿಸೆಯಲ್ಲಿ ಇನ್ನೂ ಹೆಚ್ಚು ಮಹಿಳಾ ಸಬಲೀಕರಣವಾಗಬೇಕೆಂದು ಸೂಚ್ಯವಾಗಿ ತಿಳಿಸಿದರು. ಹೆಣ್ಣು ಸಮಾಜಮುಖಿಯಾಗಿ ಬೆಳೆದು ತನ್ನ ನೋವು, ನಲಿವು ತ್ಯಾಗಗಳಲ್ಲಿಯೂ ಬೆಂದವಳಾಗಿದ್ದಾಳೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ. ಚಂಪಾರವರ ಮಾತಿನಂತೆ ಕನ್ನಡ ನನ್ನ ರಕ್ತ, ಇಂಗ್ಲೀಷ ನನ್ನ ಅನ್ನದ ಭಾಷೆ ಎನ್ನುವುದನ್ನು ನೆನಪಿಸಿಕೊಳ್ಳುತ್ತಾ, ಸ್ಪಧರ್ೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಎಂದು ಸ್ಪರ್ಧಾ ಳುಗಳಿಗೆ ಕಿವಿಮಾತು ಹೇಳಿದರು. 

ಸ್ಪರ್ಧೆ ಯಲ್ಲಿ ಧಾರವಾಡದ ಸ್ವರಸುಧಾ ಮಹಿಳಾ ಮಂಡಳದ ಜಯಶ್ರೀ ಪಾಟೀಲ ಕುಲಕರ್ಣಿ  ಪ್ರಥಮ, ಯೋಗಮಿತ್ರಾ ಮಹಿಳಾ ಮಂಡಳದ ವಿದ್ಯಾ ಶಿರಹಟ್ಟಿ ದ್ವಿತೀಯ ಹಾಗೂ ಅಕ್ಕನ ಬಳಗ ಮಹಿಳಾ ಮಂಡಳದ ಶಾಂತಾ ಸಾಲಂಕಿ ತೃತೀಯ ಬಹುಮಾನ ಪಡೆದರು. 

ಪ್ರಗತಿ ಮಹಿಳಾ ಮಂಡಳದ ಗೌರಿ ಕೋರಿಶೆಟ್ಟರ, ಶಾರದಾ ಭಜನಾ ಮಂಡಳದ ಶ್ರೀದೇವಿ ದೇಶಪಾಂಡೆ, ಸ್ನೇಹಬಳಗದ ಸುಜಾತಾ ಹಾನಗಲ್ಲ ಹಾಗೂ ಅಕ್ಕನ ಬಳಗದ ಪ್ರಭಾವತಿ ಮೂರಶಿಳ್ಳಿ ಸಮಾಧಾನಕರ ಬಹುಮಾನ ಪಡೆದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು. 

ದಿ. ಆನಂದ ಚಿಗಟೇರಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ದತ್ತಿ ದಾನಿಗಳ ಪರವಾಗಿ ಮಂಗಳಾ ಚಿಗಟೇರಿ ದತ್ತಿ ಆಶಯ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಕಾಯರ್ಾಧ್ಯಕ್ಷ ಶಿವಣ್ಣ ಬೆಲ್ಲದ ಉಪಸ್ಥಿತರಿದ್ದರು. ಕೋಶಾಧ್ಯಕ್ಷ ಕೃಷ್ಣ ಜೋಶಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಬ. ಗಾಮನಗಟ್ಟಿ ನಿರೂಪಿಸಿ, ವಂದಿಸಿದರು. ಅನ್ನಪೂಣರ್ಾ ವಸ್ತ್ರದ ಪ್ರಾಥರ್ಿಸಿದರು.

ಸಹಕಾರ್ಯದರ್ಶಿ  ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಮನೋಜ ಪಾಟೀಲ, ಚನಬಸಪ್ಪ ಅವರಾದಿ, ಚಿಗಟೇರಿ ಪರಿವಾರದವರು, ಮಹಿಳಾ ಮಂಡಳದ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.