ಬದುಕಲು ಆವಕಾಶ ಕಲ್ಪಿಸಿದ ಸಂವಿಧಾನವನ್ನು ಗೌರವಿಸೋಣ: ಬಂಟನೂರ
ತಾಳಿಕೋಟಿ 27: ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯನಿಗೂ ಪವಿತ್ರವಾದ ಮತ್ತು ಮಹತ್ವದ ದಿನವಾಗಿದೆ. ಎಲ್ಲ ಭಾರತೀಯರನ್ನು. ಭಾವನಾತ್ಮಕವಾಗಿ.ಭಾಷಿಕವಾಗಿ ಭೌಗೋಳಿಕವಾಗಿ. ಹಾಗೂ ಆಡಳಿತಾತ್ಮಕವಾಗಿ ಬೆಸೆಯುವಂತೆ ಮಾಡಿದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನಮ್ಮೆಲ್ಲ ಭಾರತೀಯರ ಬಾಳಿನ ಭವಿಷ್ಯತ್ತಿನ ಬುನಾದಿಯಾಗಿದೆ ಎಂದು ಡಾ. ಆರ್.ಎಮ್. ಬಂಟನೂರ ಹೇಳಿದರು.
ಸ್ಥಳೀಯ ಖಾಸಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ 76 ನೆಯ ಗಣರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
76 ವರ್ಷಗಳಲ್ಲಿ ಭಾರತ ದೇಶವು ಅನೇಕ ಸಾಧನೆಗಳನ್ನು ಮಾಡಿದೆ. ಬಡತನ ಹಸಿವು. ಅನಕ್ಷರತೆಯಿಂದ ಬಳಲುತ್ತಿರುವ ಅಂದಿನ ಭಾರತ. ಇಂದು ಬಲಿಷ್ಠ ಭಾರತವಾಗಿ ಬೆಳೆದಿದೆ. ಪ್ರಪಂಚದ ನಾಲ್ಕನೆಯ ಆರ್ಥಿಕ ದೇಶವಾಗಿ ಬೆಳದಿದೆ. ಇದರಲ್ಲಿ ಪ್ರತಿಯೊಬ್ಬ ಭಾರತೀಯನ ಶ್ರಮವಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸ್ವಾಭಿಮಾನದ ಬದುಕು ದೊರಕುವಂತಾಗಲಿ ಎಂದು ಹೇಳಿದರು. ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.