ಕೊಪ್ಪಳ: ವಾಲ್ಮೀಕಿ ಕುರುಬ ಸಮುದಾಯಗಳು ಸಾಮರಸ್ಯದಿಂದ ಇರಬೇಕು: ಗೊಂಡಬಾಳ

ಲೋಕದರ್ಶನ ವರದಿ

ಕೊಪ್ಪಳ 17: ಕರ್ನಾಟಕದಲ್ಲಿ ವಾಲ್ಮೀಕಿ ನಾಯಕ ಮತ್ತು ಕುರುಬ ಸಮುದಾಯಗಳು ದೊಡ್ಡ ಸಂಖ್ಯೆಯ ಸಮುದಾಯಗಳಾಗಿದ್ದು, ರಾಜಕೀಯ ಕಾರಣಗಳಿಗೆ ಇವುಗಳ ಮಧ್ಯೆ ವಿಷಬೀಜ ಬಿತ್ತುವವರಿಂದ ಎಚ್ಚರಿಕೆವಹಿಸಬೇಕಿದೆ ಎಂದು ಕನರ್ಾಟಕ ವಾಲ್ಮೀಕಿ ಯುವಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಸಮುದಾಯಗಳಲ್ಲಿ ವಿನಂತಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ 45 ಲಕ್ಷ ಮತದಾರರಿರುವ ವಾಲ್ಮೀಕಿ ನಾಯಕ ಸಮುದಾಯ ಮತ್ತು ಅಷ್ಟೇ ಪ್ರಮಾಣದಲ್ಲಿರುವ ಕುರುಬ ಸಮುದಾಯಗಳು ಒಂದಾಗಿದ್ದರೆ ರಾಜಕೀಯ ದೃವೀಕರಣಗೊಳ್ಳುವ ಭಯದಿಂದ ಹಲವರು ಕೋಮು ಸಾಮರಸ್ಯ ಕದಡುವ ಕೆಲಸ ಮಾಡುತ್ತಾರೆ, ವಿಶೇಷವಾಗಿ ಪ್ರಸ್ತುತ ರಾಜಕೀಯ ವಿದ್ಯಮಾನದಲ್ಲಿ ಇವುಗಳ ಮಧ್ಯೆ ಇರುವ ಹೊಂದಾಣಿಕೆಯಿಂದ ಹಲವರ ನಿದ್ಯೆಗೆಡಿಸುತ್ತದೆ. 

ಈ ಎರಡು ಸಹೋದರ ಸಮುದಾಯಗಳು ಸದಾ ಕಾಲ ಒಂದಾಗಿರಬೇಕು. ರಾಜ್ಯಮಟ್ಟದಲ್ಲಿಯೂ ಸಹ ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ಅವರು ಅನ್ಯೋನ್ಯವಾಗಿದ್ದಾರೆ, ಅವರು ಎರಡೂ ಸಮುದಾಯಕ್ಕೆ ಎಂದಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಾರೆ. ಇಲ್ಲದ ಸುಳ್ಳು ಸುದ್ದಿಗಳಿಂದ ನಮ್ಮ ಬದುಕನ್ನು ಹಾಳುಮಾಡಿಕೊಳ್ಳಬಾರದು. ಕೊಪ್ಪಳ ಕ್ಷೇತ್ರದ ಶಾಸಕ ಸಂಸದೀಯ ಕಾರ್ಯದಶರ್ಿ ರಾಘವೇಂದ್ರ ಹಿಟ್ನಾಳರು ಸಹ ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಮಹತ್ವ ಮತ್ತು ಪ್ರಾಧಾನ್ಯತೆ ನೀಡಿದ್ದಾರೆ, ವಾಲ್ಮೀಕಿ ಸಮುದಾಯ ಶಿಕ್ಷಣ ಮತ್ತು ಸಂಘಟನೆ ಕಡೆಗೆ ಗಮನ ಕೊಡಬೇಕು, ಬರುವ ದಿನಗಳಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿಯೂ ಕನರ್ಾಟಕ ವಾಲ್ಮೀಕಿ ಯುಸೇನೆಯನ್ನು ಕಟ್ಟಲಾಗುವದು ಎಂದು ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.