ಕೊಪ್ಪಳ: ಕಾಂಗ್ರೆಸ್ ಪಕ್ಷ ಹಿಟ್ನಾಳ್ ಕುಟುಂಬಕ್ಕೆ ಕೆಂದ್ರಿಕೃತವಾಗಿದೆ: ವಿಕಲಚೇತನ ಸಂಘದ ನಗರಾಧ್ಯಕ್ಷ ಪುಂಡಗೌಡರ

ಲೋಕದರ್ಶನ ವರದಿ

ಕೊಪ್ಪಳ 27: ಲೋಕಸಭಾ ಕ್ಷೆತ್ರದಲ್ಲಿ ಕಾಂಗ್ರೆಸ್ ಪಕ್ಷದ ರಾಜಶೇಖರ್  ಹಿಟ್ನಾಳ್ಗೆ ಟಿಕೇಟ್ ನೀಡಿ ತಪ್ಪು ಮಾಡಿದೆ,  ಹಿಟ್ನಾಳ್ ಕುಟುಂಬಕ್ಕೆ ಹಾಲುಮತ ಕುರುಬ ಸಮಾಜ ಒತ್ತಿ ಬಿದ್ದಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಿಕಲಚೇತನ ಸಂಘದ ನಗರಾಧ್ಯಕ್ಷ ಹಾಗೂ ಸೇವಕರ ಕುರುಬರ ಯಮನಪ್ಪ ಪುಂಡಗೌಡರ ಕುಟುಂಬ ರಾಜಕಾರಣ ವಿರೋದಿಸಿ ನಾನು ಈ ಬಾರಿ ಲೋಕಸಬೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೆನೆ ಎಂದು  ಹೇಳಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನೆಡೆಸಿ   ಮಾತನಾಡಿದರು. ಹಾಲು ಮತ ಕುರುಬ ಸಮಾಜದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದೆ.

ಆದರೆ ಕೊಪ್ಪಳ ಕ್ಷೇತ್ರದಲ್ಲಿ ಹಾಲು ಮತ ಕುರುಬ ಸಮಾಜದಿಂದ ಸ್ಪಧೆರ್ೆಮಾಡುವ ಪ್ರಭಾವಿ ವ್ಯಕ್ತಿಗಳು ಇದ್ದರು ಕಾಂಗ್ರೆಸ್ ಪಕ್ಷ ಹಿಟ್ನಾಳ್ ಕುಟುಂಬದ ಜಿಪಂ ಸದಸ್ಯ ರಾಜಶೇಖರ್ ಹಿಟ್ನಾಳ್ಗೆ ಅವಕಾಶ ನೀಡಿರುವುದು ದುರಂತದ ಸಂಗತಿಯಾಗಿದೆ, ಹಿಟ್ನಾಳ್ ಕುಟುಂಬದಲ್ಲಿ ತಂದೆ ಬಸವರಾಜಪ್ಪನವರು ಶಾಸಕರಾಗಿ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ, ಅವರ ಪುತ್ರರಾದ ರಾಘವೇಂದ್ರ ಈಗ ಹಾಲಿ ಶಾಸಕ ಮತ್ತು ಅಭ್ಯಥರ್ಿ ರಾಜಶೇಖರ ಹಿಟ್ನಾಳ್ ಜಿಪಂ ಸದಸ್ಯರಾಗಿದ್ದಾರೆ. ಇಷ್ಟೇಲ್ಲ ಅಧಿಕಾರ ಹೊಂದಿದ್ದರು ಮತ್ತೆ ಅವರ ಕುಟುಂಬಕ್ಕೆ ಕಾಂಗ್ರೆಸ್ ಮಣೆ ಹಾಕಿರುವುದು ಸರಿಯಲ್ಲ.

ಇದರಿಂದ ಕೊಪ್ಪಳದಲ್ಲಿ ಭಾರಿ ಅಸಮಾಧಾನವಾಗಿದೆ, ಹಾಲು ಮತ ಕುರುಬ ಸಮಾಜದ ಹಿರಿಯರು ಮತ್ತು ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಅವರಿಗೆ ಅವಕಾಶ ನೀಡದೆ ವಂಚಿಸಿರುವುದು ಸರಿಯಲ್ಲ ರಾಜಕೀಯ ವಿಕೇಂದ್ರಿಕರಣವಾಗದೆ ಕಾಂಗ್ರೆಸ್ ಪಕ್ಷ ಹಿಟ್ನಾಳ್ ಕುಟುಂಬಕ್ಕೆ ಕೆಂದ್ರಿಕೃತವಾಗಿರುವುದು ಬೇಸರವಾಗಿದೆ. ಎಲ್ಲಾ ಕುರುಬ ಸಮಾಜದವರು ಮತ ಹಾಕುವುದಿಲ್ಲ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಹುಲುಗಪ್ಪ ಕಾಗೇರಿ ಹಾಗೂ ಇನ್ನು ಮುಂತಾದವರು ಉಪಸ್ಥಿತರಿದ್ದರು.