ಕೊಪ್ಪಳ: ವಾಲ್ಮೀಕಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ: ಗೊಂಡಬಾಳ ಹೇಳಿಕೆ

ಲೋಕದರ್ಶನ ವರದಿ

ಕೊಪ್ಪಳ 14: ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 2 ಲಕ್ಷ ಮತದಾರರನ್ನು ಹೊಂದಿರುವ ಎಸ್.ಟಿ. ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಹಾಗೂ ಪ್ರಾಮುಖ್ಯತೆ ನೀಡಬೇಕು ಎಂದು ಕನರ್ಾಟಕ ರಾಜ್ಯ ವಾಲ್ಮೀಕಿ ಯುವ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಜ್ಯದಲ್ಲಿ 45 ಲಕ್ಷ ಮತದಾರರಿರುವ ವಾಲ್ಮೀಕಿ ನಾಯಕ್ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಇದ್ದರೂ ಸಹ ಸಮುದಾಯ ಮುಂದೆ ಬರಲು ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಕೇಂದ್ರದಂತೆ ಶೇ. 7.5 ಮೀಸಲಾತಿ ಕೊಡಬೇಕು. ಅದನ್ನು ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಬೇಕು. ಕಾಂಗ್ರೆಸ್ ಸದಾ ಅಹಿಂದ ಪರವಾಗಿ ಇದೆ ಎಂದು ಹೇಳುತ್ತದೆಯಾದ್ದರಿಂದ ಮೊದಲು ಅವರೇ ಮೀಸಲಾತಿ ಕೊಡುವ ಕುರಿತು ತಮ್ಮ ಪ್ರಣಾಳಿಕಯಲ್ಲಿ ಘೋಷಣೆ ಮಾಡಬೇಕು. ಈ ಕುರಿತು ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದ್ದಾರೆ.     

ವಾಲ್ಮೀಕಿ ಸಮುದಾಯ ಬಿಜೆಪಿ ಜೊತೆಗಿದೆ ಎಂದ ಆಪಾದನೆ ಮಾಡಲಾಗಿದೆ ಆದರೆ ವಾಸ್ತವವಾಗಿ ಅದನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆ ರೀತಿಯಲ್ಲಿ ವಿವಿಧ ಮಾಧ್ಯಮಗಳ ಮೂಲಕ ತಪ್ಪು ದಾರಿಗೆ ಎಳೆಯಲಾಗಿದೆ. 

ಬಿಜೆಪಿಯಿಂದ ಬಿ. ಶ್ರೀರಾಮುಲುರನ್ನು ಉಪ ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಸುಳ್ಳು ಸುದ್ದಿ ಹರಡಲಾಗಿತ್ತು ಹೊರತು ಅದನ್ನು ಬಿಜೆಪಿಯ ಯಾವ ಮುಖಂಡರೂ ಎಲ್ಲಿಯೂ ಹೇಳಲಿಲ್ಲ, ಸಂಸದರಾಗಿದ್ದ ಬಿ. ಶ್ರೀರಾಮುಲರನ್ನು ಕೇಂದ್ರದಲ್ಲಿ ಮಂತ್ರಿ ಮಾಡುವ ಅವಕಾಶ ಇದ್ದಾಗಲೂ ಬಿಜೆಪಿ ಸರಕಾರ ಅದನ್ನು ಮಾಡಲಿಲ್ಲ. ದೇಶದ ಬಿಜೆಪಿ ಮಂತ್ರಿಮಂಡಲದಲ್ಲಿ ಒಬ್ಬನೇ ಒಬ್ಬ ವಾಲ್ಮೀಕಿ ಸಚಿವನಿರಲಿಲ್ಲ. ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಮಾಡುತ್ತೇನೆ ಎಂದವರು ಕನಿಷ್ಟ ವಿರೋಧ ಪಕ್ಷದ ಉಪ ನಾಯಕನನ್ನಾಗಿಯಾದರೂ ಮಾಡಬೇಕಿತ್ತು, ಅದನ್ನು ಮಾಡಲಿಲ್ಲ,  ಉಪನಾಯಕನನ್ನಾಗಿ ಮಾಡದವರು ಉಪ ಮುಖ್ಯಮಂತ್ರಿ ಮಾಡುತ್ತಾರೆಯೇ ಅದು ಕೇವಲ ಭ್ರಮೆ ಎಂದು ಜರಿದಿರುವ ಅವರು, ಕನರ್ಾಟಕ ಸರಕಾರದ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು, ಅಲ್ಲಿನ ಫಲಾನುಭವಿಗಳನ್ನು ಕೇವಲ ಶಾಸಕರೇ ಆಯ್ಕೆ ಮಾಡುವ ಬದಲಿಗೆ ನಿಗಮದ ಅಧ್ಯಕ್ಷರಿಗೆ ಶೇ. 40 ರಷ್ಟು ಫಲಾನುಭವಿಗಳ ಆಯ್ಕೆಗೆ ಅವಕಾಶ ನೀಡಬೇಕು. 

ಚುನಾವಣೆಗಳಲ್ಲಿ ಪರಿಶಿಷ್ಟ ಪಂಗಡದವರನ್ನು ಕೇವಲ ಮೀಸಲಾತಿಗೆ ಸೀಮಿತ ಮಾಡಲಾಗಿದೆ, ಅದರ ಬದಲಿಗೆ ಅವಕಾಶ ಇರುವ ಎಲ್ಲಾ ಕಡೆ ಸ್ಪಧರ್ೆಗೆ ಅವಕಾಶ ನೀಡಬೇಕು. ಕೊಪ್ಪಳ ಕ್ಷೇತ್ರದಲ್ಲಿ ಕುರುಬ ಮತ್ತು ಮುಸ್ಲಿಂ ಸಮುದಾಯಕ್ಕೆ ಸಮಾನವಾಗಿ ಇಲ್ಲಿ ವಾಲ್ಮೀಕಿ ಮತದಾರರಿದ್ದಾರೆ. ಖಾಸಗಿ ಕಾಖರ್ಾನೆ ಮತ್ತು ಕಂಪನಿಗಳಲ್ಲಿ ಮೀಸಲಾತಿ ನೀಡಬೇಕು, ಅದನ್ನು ಗುತ್ತಿಗೆ ಆಧಾರದಲ್ಲೂ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ಚುನಾವಣೆಯಲ್ಲಿ ಇವುಗಳನ್ನು ಗಂಭೀರವಾಗಿ ಸಮುದಾಯ ಪರಿಗಣಿಸಲಿದೆ, ಅಗತ್ಯಬಿದ್ದರೆ ಸಮಾಜದ ಗುರುಪೀಠದ ಪ್ರಸನ್ನಾನಂದಪುರಿ ವಾಲ್ಮೀಕಿ ಶ್ರೀಗಳನ್ನು ಭೇಟಿ ಮಾಡಿ ಅವರಿಂದಲೇ ಸಮುದಾಯ ಯಾವ ನಿರ್ಣಯದ ಮೇಲೆ ಮತ ಚಲಾವಣೆ ಮಾಡಬೇಕು ಎಂಬುದನ್ನು ಘೋಷಿಸಲಾಗುವದು ಎಂದು ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.