ಕೊಪ್ಪಳ:ಚುನಾವಣೆ: ಕಾರ್ಯಕ್ರಮಗಳಲ್ಲಿ ರಾಜಕಿಯ ಚಟುವಟಿಕೆ ನಡೆದರೆ ಸೂಕ್ತ ಕ್ರಮ : ಪಿ. ಸುನೀಲ್ ಕುಮಾರ್

ಕೊಪ್ಪಳ 18: ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಧಾರ್ಮಿಕ  ಕಾರ್ಯಕ್ರಮಗಳಿಗೆ ಪೂರ್ವ ಅನುಮತಿ ಇಲ್ಲ, ರಾಜಕಿಯೇತರ ಕಾರ್ಯಕ್ರಮಗಳಲ್ಲಿ ರಾಜಕಿಯ ಚಟುವಟಿಕೆ ನಡೆದರೆ ಸೂಕ್ತ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.  

ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದು, ಮಾದರಿ ನೀತಿ ಸಂಹಿತೆ ಜಾರಿಯಾಗಿದೆ.  ಈ ಅವಧಿಯಲ್ಲಿ ಈಗಾಗಲೇ ಸಾರ್ವಜನಿಕರು ಹಮ್ಮಿಕೊಂಡಿರುವ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಕೋರುತ್ತಿರುವುದು ಗಮನಕ್ಕೆ ಬಂದಿದೆ.  ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮದುವೆ, ಹುಟ್ಟು ಹಬ್ಬ ಹಾಗೂ ಧಾಮರ್ಿಕ ಕಾರ್ಯಕ್ರಮಗಳಿಗೆ ಯಾವುದೇ ಪೂರ್ವ ಅನುಮತಿ ಪಡೆಯುವುದು ಅವಶ್ಯಕತೆಯಿರುವುದಿಲ್ಲ.  

ಆದರೆ ಸಾರ್ವತ್ರಿಕ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಸಾಮೂಹಿಕ ವಿವಾಹಗಳಲ್ಲಿ ಉಡುಗೊರೆ ಹಂಚುವುದು ಮತ್ತು ಮದುವೆ, ಹುಟ್ಟು ಹಬ್ಬ ಹಾಗೂ ಧಾಮರ್ಿಕ ಕಾರ್ಯಕ್ರಮಗಳ ನೆಪದಲ್ಲಿ ರಾಜಕೀಯ ಚಟುವಟಿಕೆ ಹಾಗೂ ಮತದಾರರಿಗೆ ಆಮಿಷ ಒಡ್ಡುವುದು, ಓಲೈಸುವದು ಕಂಡು ಬಂದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿ ಕಾನೂನಾತ್ಮಕವಾಗಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅವರು ಪ್ರಕಟಣೆಯ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.