ಲೋಕದರ್ಶನ ವರದಿ
ಕಂಪ್ಲಿ 21: ಸಮಾಜ ಮತ್ತು ಮಹಿಳಾ ಸಂಘದಲ್ಲಿನ ಅನುಪಮ ಸೇವೆಯನ್ನು ಗುರುತಿಸಿ ಹತ್ತು ಮಹಿಳೆಯರಿಗೆ, ಇಲ್ಲಿನ ಅಕ್ಕಮಹಾದೇವಿ ಮಹಿಳಾ ಮಂಡಳಿಯವರು, ಅಕ್ಕಮಹಾದೇವಿ ಜಯಂತಿ ನಿಮಿತ್ತ 'ಅಕ್ಕಶ್ರೀ' ಮತ್ತು 'ಯಶಸ್ವಿನಿ ಮಹಿಳೆ' ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಬಿ.ಪಾರ್ವತಮ್ಮ, ಮುಕ್ಕುಂದಿ ಶಿವಗಂಗಮ್ಮ, ಗಡಾದ ವಿಜಯಲಕ್ಷ್ಮಿ, ಕಲ್ಗುಡಿ ರಾಜೇಶ್ವರಿ, ಕೋರಿ ಶರಣಮ್ಮ, ಕಲ್ಗುಡಿ ಜ್ಞಾನೇಶ್ವರಿ, ಕಲ್ಗುಡಿ ಚನ್ನಮ್ಮ, ಮುಕ್ಕುಂದಿ ಮಮತಾ, ಕಲ್ಗುಡಿ ನಾಗರತ್ನಾ, ಕಲ್ಗುಡಿ ಬಸಂತಮ್ಮ ಇವರು ಮಹಿಳಾ ಮಂಡಳಿಗೆ ಮತ್ತು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ 'ಅಕ್ಕಶ್ರೀ', ಮರಿಶೆಟ್ರು ವಿಜಯಲಕ್ಷ್ಮಿ, ಯಶೋಧಮ್ಮ ಇವರಿಗೆ 'ಯಶಸ್ವಿನಿ ಮಹಿಳೆ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ರುದ್ರಾಣಿ ಬಸವರಾಜ ತಿಳಿಸಿದರು.