ನ್ಯಾಯಾಧೀಶ ಶಂಭುಲಿಂಗಯ್ಯ ಮೂಡಿಮಠಗೆ ಬೀಳ್ಕೊಡುಗೆ

ಲೋಕದರ್ಶನ ವರದಿ 

ಅಂಕೋಲಾ  16: ಇಲ್ಲಿಯ ಜೆಎಂಎಫ್ಸಿ  ನ್ಯಾಯಾಲಯದಲ್ಲಿ ಕಳೆದ 3 ವರ್ಷದಿಂದ ನ್ಯಾಯಾಧೀಶರಾಗಿ ಸೇವೆಸಲ್ಲಿ ಸಿದ ಶಂಭುಲಿಂಗಯ್ಯ ಮೂಡಿಮಠ ಅವರು ವಗರ್ಾವಣೆಯಾದ ಹಿನ್ನೆಲೆಯಲ್ಲಿ ಬುಧವಾರ ವಕೀಲ ಸಂಘದವರು ಸನ್ಮಾನಿಸಿ, ಬೀಳ್ಕೊಡಲಾಯಿತು. 

ಸನ್ಮಾನ ಸ್ವೀಕರಿಸಿದ ನ್ಯಾ.ಮೂಡಿಮಠ ಅವರು ಮಾತನಾಡಿ ಕಾನೂನಿನಲ್ಲಿ ವ್ಯವಸ್ಥೆಯಲ್ಲಿ ನ್ಯಾಯಾಲಯದಲ್ಲಿ ಸರಿ ಯಾದ ನ್ಯಾಯವನ್ನು ನೀಡುವದರ ಮುಖೇನ, ಯಾರಿಗೂ ಅನ್ಯಾಯವಾಗದಂತೆ ತಿಮರ್ಾನ ನೀಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ. ನನಗೆ ನಮ್ಮ ಎಲ್ಲಾ ನ್ಯಾಯವಾದಿಗಳು 3 ವರ್ಷದಿಂದ ಉತ್ತಮ ಸಹಕಾರ ನೀಡಿದ್ದಾರೆ. ಹೈ ಕೋರ್ಟನ ಮಾರ್ಗದರ್ಶನದಂತೆ ಕಾನೂನಿನ ಸುವ್ಯವಸ್ಥೆ ಕಾಪಾಡಬೇಕಾದದು ಪ್ರತಿಯೊಬ್ಬರ ಆಧ್ಯ ಕರ್ತವ್ಯ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಜಿ.ಎನ್. ನಾಯ್ಕ ಅಧ್ಯಕ್ಷತೆವಹಿಸಿ ಮಾತನಾಡಿ,  ಎಷ್ಟೋ ಜಠಿಲವಾದ ಪ್ರಕರಣಗಳನ್ನು ಬಗೆಹರಿಸಿ, ನ್ಯಾಯದಾನ ಮಾಡಿದ ಕೀತರ್ಿ ನ್ಯಾಯಾಧೀಶ ಶಂಭುಲಿಂಗಯ್ಯ ಮೂಡಿಮಠ ಆವರಿಗೆ ಸಲ್ಲುತ್ತದೆ. ಅವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ಗೌರವಗಳು ಅರಸಿ ಬರಲಿ ಎಂದರು. ವಕೀಲರಾದ ಎಮ್. ಪಿ. ಭಟ್, ಶಾಂತಾ ಹೆಗಡೆ, ಅನಂತ ತಲಗೇರಿ, ಬಿ.ಡಿ. ನಾಯ್ಕ, ಸಂತೋಷ ನಾಯ್ಕ, ವಿ.ಎಸ್. ನಾಯ್ಕ, ನಾಗಾನಂದ ಬಂಟ, ಉಮೇಶ ನಾಯ್ಕ ಮಾತನಾಡಿದರು. 

ಸಮಾರಂಭದಲ್ಲಿ ವಕೀಲರಾದ ನಿತ್ಯಾನಂದ ಕವರಿ, ಪಿ.ಎಂ.ನಾಯಕ, ವಿನಾಯಕ ನಾಯ್ಕ, ನಾರಾಯಣ ನಾಯಕ, ಎಂ. ಎ.ರಾಯ್ಕರ, ವಿನೋದ ಶಾನಭಾಗ, ಗುರು ವಿ. ನಾಯ್ಕ, ಮಮತಾ ಕೆರೆಮನೆ ಸೇರಿದಂತೆ ಹಲವರು ಉಪಸ್ಥಿ ತರಿದ್ದರು. ಎಸ್. ಜಿ. ನಾಯ್ಕ ಸ್ವಾಗತಿಸಿದರು. ಕಾರ್ಯದಶರ್ಿ ಸುರೇಶ ಬಾನಾವಳಿಕರ ನಿರೂಪಿಸಿದರು. ಉಪಾಧ್ಯಕ್ಷೆ ಸಂಪದಾ ಗುನಗಾ ವಂದಿಸಿದರು.