ಕುಂದಗೋಳ ಉಪಚುನಾವಣೆ: ಜೆಡಿಎಸ್ ಅಭ್ಯಥರ್ಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ

ಕುಂದಗೋಳ೨೭ : ಸಚಿವ ಸಿ.ಎಸ್. ಶಿವಳ್ಳಿ ಅವರ ನಿಧನದಿಂದ ತೆರವಾಗಿರುವ ಕುಂದಗೋಳ ವಿಧಾನ ಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯಥರ್ಿಯನ್ನು ಕಣಕ್ಕೆ ಇಳಿಸಬೇಕೆ ಬೇಡವೇ ಎಂಬುದರ ಕುರಿತು ಚಚರ್ಿಸಲು ಶನಿವಾರ ಕರೆದಿದ್ದ ಸಭೆಯಲ್ಲಿ ಜೆಡಿಎಸ್ ಅಭ್ಯಥರ್ಿಯನ್ನು ಕಣಕ್ಕೆ ಇಳಿಸುವ ಕುರಿತು ಹೈಕಮಾಂಡ್ ಜೊತೆಗೆ ಚಚರ್ಿಸಿದ ಬಳಿಕ ಅಂತಿಮ ನಿಧರ್ಾರಕ್ಕೆ ಬರಲು ನಿರ್ಧರಿಸಲಾಯಿತು.

ವಿಧಾನ ಪರಿಷತ್ ಹಿರಿಯ ಸದಸ್ಯ ಬಸವರಾಜ ಎಸ್.ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿ ಎನ್.ಹೆಚ್. ಕೋನರಡ್ಡಿ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮುಖಂಡರು ತಮ್ಮ ಅಭಿಪ್ರಾಯ ಮಂಡಿಸಿದರು. 

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯಥರ್ಿಯಾಗಿ ಸ್ಪಧರ್ಿಸಿದ್ದ ಮಾಜಿ ಶಾಸಕ ಮಲ್ಲಿಕಾಜರ್ುನ ಅಕ್ಕಿ ಹಾಗೂ ಪಕ್ಷೇತರ ಅಭ್ಯಥರ್ಿಯಾಗಿ ಸ್ಪಧರ್ಿಸಿದ್ದ ಹಜರತ್ ಅಲಿ ದೊಡ್ಡಮನಿ ಇವರಿಬ್ಬರ ನಡುವೆ ಒಬ್ಬರನ್ನು ಕಣಕ್ಕೆ ಇಳಿಸಲು ಸ್ಥಳೀಯ ಮುಖಂಡರ ಒತ್ತಾಯದ ಮೇರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರ ಗಮನ ಸೆಳೆದು ಕುಂದಗೋಳ ಕ್ಷೇತ್ರವನ್ನು ಜೆಡಿಎಸ್ ಪಾಲಿಗೆ ಉಳಿಸುವಂತೆ ಕೋರಲು ಮುಖಂಡರು ನಿರ್ಧರಿಸಿದರು. 

ಸಮ್ಮೀಶ್ರ ಸರಕಾರದಲ್ಲಿ ಪೌರಾಡಳಿತ ಸಚಿವರರಾಗಿ ಸಿ.ಎಸ್. ಶಿವಳ್ಳಿ ಅವರು ಕಾರ್ಯನಿರ್ವಹಿಸಿದ್ದರಿಂದ ಅವರ ಪತ್ನಿ ಕುಸುಮಾ ಶಿವಳ್ಳಿ ಅವರು ಟಿಕೇಟ್ ಗಾಗಿ ಪ್ರಯತ್ನಿಸುತ್ತಿದ್ದಾರೆ. 

 ಅನುಕಂಪದ ಆಧಾರದ ಮೇಲೆ ವರಿಷ್ಟರು ಅವರಿಗೆ ಟಿಕೇಟ್ ನೀಡಲು ಸಮ್ಮತಿ ಸೂಚಿಸುವುದರಿಂದ ಪಕ್ಷ ವರಿಷ್ಟರು ಹಾಗೂ ಸಮನ್ವಯ ಸಮಿತಿ ಕೈಗೊಳ್ಳು ವ ನಿಧರ್ಾರವೇ ಅಂತಿಮವಾಗಲಿದೆ. 

ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮೀಶ್ರ ಸರಕಾರವಿರುವುದರಿಂದ ಚಿಂಚೋಳಿ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟು ಕುಂದಗೋಳ ಕ್ಷೇತ್ರವನ್ನು ಜೆಡಿಎಸ್ ಪಡೆಯಲು ಚಿಂತನೆ ನಡೆದಿದೆ. ಆದರೆ ಪಕ್ಷದ ವರಿಷ್ಟರು ಕೈಗೊಳ್ಳು ವ ನಿಧರ್ಾರಕ್ಕೆ ಬದ್ದವಾಗಿರಬೇಕು ಎಂಬುದಕ್ಕೆ ಸ್ಥಳೀಯ ಮುಖಂಡರು ಕೂಡ ಸಮ್ಮತಿ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶರ್ಿ ಎನ್.ಹೆಚ್. ಕೋನರಡ್ಡಿ ತಿಳಿಸಿದರು.

ಕಳೆದ ಬಾರಿ ಸ್ಪಧರ್ೀಸಿದ್ದ ಹಜರತ್ ಅಲಿ ದೊಡಮನಿ ಅವರು ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದರೆ ಜೆಡಿಎಸ್ ಮತಗಳು ಹರಿದು ಹಂಚಿ ಹೋದರೆ ಕಾಂಗ್ರೆಸ್ ಅಭ್ಯಥರ್ಿಯ ಗೆಲುವಿಗೆ ಮುಳುವಾಗಲಿದೆ. ಹೀಗಾಗಿ ಜೆಡಿಎಸ್ ವರಿಷ್ಟರು ಯಾವ ನಿಧರ್ಾರ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಕುಂದಗೋಳ ಕ್ಷೇತ್ರದ ಜೆಡಿಎಸ್ ಅಭ್ಯಥರ್ೀ ಭವಿಷ್ಯ ನಿಂತಿದೆ ಎಂದು ಕೋನರಡ್ಡಿ ತಿಳಿಸಿದರು. 

 ಈ ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರ ಮಠ, ಮಹಾನಗರ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಪಕ್ಷದ ವಿವಿಧ ಘಟಕಗಳ ಮುಖಂಡರು ಉಪಸ್ಥಿತರಿದ್ದರು.