ರಸ್ತೆ, ಸೇತುವೆ ನಿರ್ಮಾಣ ಕಾಮಗಾರಿಗೆ ಒತ್ತಾಯ

ಲೋಕದರ್ಶನ ವರದಿ

ಹೊನ್ನಾವರ: ತಾಲೂಕಿನ ಸಾಲಕೊಡ ಗ್ರಾ.ಪಂ ವ್ಯಾಪ್ತಿಯ ದರ್ಬಾರ ಜಡ್ಡಿ-ಹೋಯ್ನಿರು ಸಂಪರ್ಕಿಸುವ  ರಸ್ತೆ ಮತ್ತು ಸೇತುವೆ ನಿರ್ಮಾಣ  ಕಾಮಗಾರಿ ಅರಣ್ಯ ಇಲಾಖೆಯ ಮದ್ಯಪ್ರವೆಶದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿರುವದನ್ನು  ಶೀಘ್ರದಲ್ಲಿ ಆರಂಭಿಸಬೇಕೆಂದು ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಗೆ  ಭೇಟಿ ನೀಡಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಾದೇವ ನಾಯ್ಕ ಮಾದ್ಯಮದವರೊಂದಿಗೆ ಮಾತನಾಡಿ, ಗ್ರಾಮಸ್ಥರ  ದಶಕಗಳ ಹೋರಾಟದ ಫಲವಾಗಿ ಕಳೆದ ಎರಡು ವರ್ಷಗಳ ಹಿಂದೆ ಮಾಜಿ ಶಾಸಕಿ ಶಾರದಾ ಶೆಟ್ಟಿಯವರ ಅವಧಿಯಲ್ಲಿ ದರ್ಬಾರ ಜಡ್ಡಿಯ ಹೋಯ್ನೀರು ಸೇತುವೆ ಮತ್ತು ರಸ್ತೆಗೆ ಅನುದಾನ ಮಂಜೂರಿಯಾಗಿ ಕಾಮಗಾರಿ ಚಾಲನೆ ಹಂತದಲ್ಲಿತ್ತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಕಾಮಗಾರಿ ತಡೆ ಹಿಡಿದಿದ್ದು ಇಲ್ಲಿಯ ವರೆಗು ಆರಂಭವಾಗಿಲ್ಲ. ಎನೋ ಕಾಗದ ಪತ್ರದ ಸಮಸ್ಯೆ ಇರಬೇಕೆಂದು ಇಷ್ಟು ದಿನಗಳ ಕಾಲ ಸುಮ್ಮನಿದ್ದೇವೆ. ಆದರೆ ಇನ್ನೊಂದು ವರ್ಷ ಕಳೆದರೆ ಕಾಮಗಾರಿ ಅವದಿಯೇ ಮುಕ್ತಾಯವಾಗುತ್ತದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿಯಾಗುತ್ತದೆ.   ದೈನಂದಿನ ಕೆಲಸಕಾರ್ಯಕ್ಕೆ ತೆರಳುವವರಿಗೆ, ಶಾಲಾ ವಿದ್ಯಾಥರ್ಿಗಳಿಗೆ ಈ ಸೇತುವೆಯೆ ಪ್ರಮುಖ ಕೊಂಡಿ. ಊರಿನ ಜನರೆ ಮರದ ಸೇತುವೆ ನಿಮರ್ಿಸಿಕೊಂಡಿದ್ದೇವೆ. ಮಳೆಗಾಲದಲ್ಲಂತು ಜೀವದ ಹಂಗು ತೊರೆದು ಮರದ ಸೇತುವೆಯ ಮೇಲೆ  ಸಂಚರಿಸಬೇಕಾಗುತ್ತದೆ.  ಆದ್ದರಿಂದ ಇಂದು ಡಿಏಫ್ಒ ಕಛೇರಿಗೆ ಭೇಟಿ ನೀಡಿ  ಆದಷ್ಟು ಶಿಘ್ರದಲ್ಲಿ ಸಮಸ್ಯೆ ಬಗೆಹರಿಸುವಂತೆ ಕೋರಿದ್ದೇವೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಛೇರಿಯ ಎದುರು ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು 

                 ಇನ್ನೊರ್ವ ಗ್ರಾಮಸ್ಥ ಸಚೀನ್ ನಾಯ್ಕ ಮಾತನಾಡಿ, ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದು ಕೊನೆಗು  ಸೇತುವೆ ಮಂಜೂರಿ ಭಾಗ್ಯ ಸಿಕ್ಕಿತ್ತು. ಆದರೆ ಇಂದು ಕಾಮಗಾರಿಯೇ ನಿಂತು ಹೋಗಿದೆ.  ಈ ಸೇತುವೆ ನಿಮರ್ಾಣವಾಗುವುದರಿಂದ ಅಲ್ಲಿಯ ಜನತೆ ಅಂದಾಜು ಹತ್ತು ಕಿ.ಮೀ ವರೆಗೆ ಸುತ್ತುವರೆದು ಸಂಚರಿಸುವುದು ತಪ್ಪುತ್ತದೆ. ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಬೇಕು ಎಂದರು.

ಇನ್ನು ಊರಿನ ಜನತೆಯೊಂದಿಗೆ ಸಮಸ್ಯೆ ಬಗೆಹರಿಸುವ ಕುರಿತಾಗಿ ಡಿಎಫ್ಒ ಕಛೇರಿಗೆ ಆಗಮಿಸಿದ ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಹೋಯ್ನೀರು ಸೇತುವೆ ಮತ್ತು ರಸ್ತೆ ನಿರ್ಮಾಣ ವಾಗುವುದರಿಂದ ಸುತ್ತಲಿನ ಗುಂಡಬಾಳ,ಹಡಿನಬಾಳ,ಕವಲಕ್ಕಿ, ಚೌಡಿಗದ್ದೆ ಸೇರಿದಂತೆ ವಿವಿಧ ಭಾಗಗಳಿಗೆ ರಿಂಗ್ ರಸ್ತೆ ಆಗಲಿದೆ. ಅಲ್ಲಿನ ಶಾಲಾ ವಿದ್ಯಾಥರ್ಿಗಳು ನಾಲ್ಕೈದು ಕಿ.ಮೀ ಸುತ್ತುವರಿದು ಶಾಲೆಗಳಿಗೆ ತೆರಳಬೇಕಾದ ಸ್ಥಿತಿ ಇದೆ. ದರ್ಬಾರ ಜಡ್ಡಿ-ಹೋಯ್ನಿರು ಸೇತುವೆ ಮತ್ತು ರಸ್ತೆ ನಿಮರ್ಾಣ ಕಾಮಗಾರಿಗೆ 2017ರಲ್ಲಿ ಅಡಿಗಲ್ಲು ನೇರವೇರಿಸಲಾಗಿತ್ತು.  ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ 3ಕೋಟಿ 21ಲಕ್ಷ ವೆಚ್ಚದ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಇಗಾಗಲೇ ಕಾಮಗಾರಿ ಮುಕ್ತಾಯವಾಗಿ ಲೋಕಾರ್ಪಣೆಯಾಗಬೇಕಿತ್ತು. ಆದರೆ ಅರಣ್ಯ ಇಲಾಖೆಯವರ ಮದ್ಯಪ್ರವೇಶದಿಂದ ಈ ಕಾಮಗಾರಿ ನಿಂತಿತು. ಈ ಬಗ್ಗೆ ಹಿಂದಿನ ಡಿಎಫ್ಒ ಅವರು ಫಾರೆಸ್ಟ್ ಕ್ಲಿಯರೆನ್ಸ ಇದೆ ಆ ಸಮಸ್ಯೆಯನ್ನು ಬಗೆಹರಿಸಿಕೊಡುತ್ತೇವೆ ಎಂದಿದ್ದರು. ಅವರ ವಗರ್ಾವಣೆಯಾಗಿ ನೂತನ ಡಿಏಫ್ಒ ಅವರು ನೇಮಕವಾಗಿರುವುದರಿಂದ ಅವರಿಗೆ ಈ ಸಮಸ್ಯೆ ಬಗ್ಗೆ ತಿಳಿಸಲು  ಗ್ರಾಮಸ್ಥರೊಂದಿಗೆ  ಭೇಟಿ ನೀಡಿದ್ದೇನೆ. ಇನ್ನೊಂದು ವಾರದಲ್ಲಿ ಹೋಯ್ನಿರು ಪ್ರದೇಶಕ್ಕೆ ಡಿಎಫ್ಒ ಅವರು ಭೇಟಿ ನೀಡಿ ನಮ್ಮಿಂದಾಗುವ ಸಹಾಯ ನೀಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ ಎಂದರು. 

       

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗಣಪತಿ ನಾಯ್ಕ, ರವಿ ಭಟ್ಟ, ರಾಘವೇಂದ್ರ, ಆಶಾ ನಾಯ್ಕ, ನಾಗವೇಣಿ ನಾಯ್ಕ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.