ಕಾನೂನುಗಳನ್ನು ತಂತ್ರಜ್ಞಾನದಲ್ಲಿ ಅಳವಡಿಸಿಕೊಳ್ಳಿ: ಶಿವಪ್ರಸಾದ

ಲೋಕದರ್ಶನ ವರದಿ

ಬೆಳಗಾವಿ 04:  ಕನರ್ಾಟಕ ಕಾನೂನು ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರಂದು ಜರುಗಿದ ಕೃತಕ ಬುದ್ಧಿವಂತಿಕೆ ಮತ್ತು ಕಾನೂನು ಸಮಸ್ಯೆಗಳು ಮತ್ತು ಸವಾಲುಗಳು ಎನ್ನುವ ವಿಷಯದ ಮೇಲೆ ಒಂದು ದಿನದ   ಕಾಯರ್ಾಗಾರವನ್ನು ಆಯೋಜಿಸಲಾಗಿತ್ತು.   

ಪ್ರೊ. ಡಾ. ಎಸ್. ಎಮ್. ಶಿವಪ್ರಸಾದ, ನಿದರ್ೆಶಕರು, ಕರ್ನಾ ಟಕ ರಾಜ್ಯ ಉನ್ನತ ಶಿಕ್ಷಣ ಅಕಾಡಮಿ, ಧಾರವಾಡ, ಇವರು ಈ ಕಾರ್ಯಾ ಗಾರದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮೂರು ತಂತ್ರಜ್ಞಾನಗಳಾದಂತಹ ನ್ಯಾನೋ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿವಂತಿಕೆ ಹೊಂದಿರುವಂತಹ ಇಂದಿನ ಅದ್ಭುತ ಕಾಲದ ಬಗ್ಗೆ ವಿವರಿಸಿದರು ಮತ್ತು ಈ ತಂತ್ರಜ್ಞಾನಗಳು ಒಂದುಗೂಡಿದಾಗ ಒಂದು ಹೊಸ ವಿಕಸನದ ಸೃಷ್ಟಿಗೆ ಕಾರಣವಾಗುತ್ತದೆ. ಕಾನೂನಿನ ಜೊತೆಗೆ ಸಮಾಜದಲ್ಲಿ ತಂತ್ರಜ್ಞಾನವನ್ನು ಅಳವಡಿಸಿದಾಗ ಕಾಯ್ದೆಯ ಮಹತ್ವ ಘಟ್ಟಿಗೊಳುವುದು ಮತ್ತು ನ್ಯಾಯವಾದಿಗಳು ತಂತ್ರಜ್ಞಾನ ಮತ್ತು ಕಾನೂನಿನ ನಡುವೆ ಇರುವ ಅಂತರಕ್ಕೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕೆಂದು ವಿವರಿಸಿ ಹೇಳಿದರು.  

ಉದ್ಘಾಟನೆಯ ನಂತರ ಈ ಕಾರ್ಯಾ ಗಾರದಲ್ಲಿ ನಾಲ್ಕು ವಿಷಯಗಳ ಮೇಲೆ ಅವಧಿ (ಸೆಶನ್) ಗಳನ್ನು ನಡೆಸಲಾಯಿತು. ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ  ಅಭಯ ಇಂಚಲ, ಸಹಾಯಕ ಪ್ರಾಧ್ಯಾಪಕರು, ವಿ.ಡಿ. ಐ.ಟಿ, ಹಳಿಯಾಳ, ಡಾ. ಅವಿನಾಶ ದಧಿಚಿ, ನಿಯೋಜಿತ ಪ್ರಾಂಶುಪಾಲರು ಮತ್ತು ಡೀನರು, ಐ.ಎಪ್.ಐ.ಎಮ್. ಕಾನೂನು ಶಾಲೆ, ಬೆ0ಗಳೂರು, ಡಾ. ಸಂತೋಷ ಎಸ್. ಸರಾಪ್, ಮುಖ್ಯಸ್ಥರು, ಇ.ಸಿ.ಇ. ವಿಭಾಗ, ಜಿ.ಐ.ಟಿ., ಬೆಳಗಾವಿ, ಮತ್ತು ಪ್ರೊ. ಜಿ. ಎಮ್. ವಾಘ, ಆರ್. ಎಲ್. ಕಾನೂನು ಮಹಾವಿದ್ಯಾಲಯ, ಬೆಳಗಾವಿ, ಆಗಮಿಸಿದ್ದರು. ದೇಶದ ವಿವಿಧ ಮಹಾವಿದ್ಯಾಲಯಗಳಿಂದ ಪ್ರಾಧ್ಯಾಪಕರು ಮತ್ತು ವಿದ್ಯಾಥರ್ಿಗಳು ಆಗಮಿಸಿದ್ದರು.  

ಆರ್. ಎಲ್. ಕಾನೂನು ಮಹಾವಿದ್ಯಾಲಯ ಆಡಳಿತ ಮಂಡಳಿ ಸದಸ್ಯರಾದ ಎಸ್. ವಿ. ಗಣಾಚಾರಿ ಇವರು  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲರಾದ ಡಾ. ಸಂಧ್ಯಾ ಎಚ್. ವಿ., ಸ್ವಾಗತಿಸಿದರು.  ಉಪನ್ಯಾಸಕರಾದ ಡಾ. ಸಮೀನಾ ಬೇಗ್  ಕಾರ್ಯಾ ಗಾರದ ಕುರಿತು ಪರಿಚಯಿಸಿದರು. ವಿದ್ಯಾರ್ಥಿ ಯಾದ   ಶ್ರೇಯಾ ಕುಲಕರ್ಣಿ ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಿದಳು ಮತ್ತು ಸತೀಶ ಆನಿಖಿಂಡಿ ವಂದನಾರ್ಪಣೆಯನ್ನು ಮಾಡಿದರು.