ಮದ್ಯ ಪಾನ ನಿಷೇಧ ಮಾಡಿದರೆ ಭಾರತ ರತ್ನ ಪ್ರಶಸ್ತಿ ನೀಡಿದಂತೆ: ಪಂಡಿತಾರಾದ್ಯ ಶ್ರೀಗಳು

ಲೋಕದರ್ಶನ ವರದಿ

ಹರಪನಹಳ್ಳಿ 25:ಇತ್ತಿಚಿಗೆ ಲಿಂಗೈಕ್ಯರಾದ ಸಿದ್ದಗಂಗಾಮಠದ ಶ್ರೀ ಶಿವಕುಮಾರಸ್ವಾಮಿಗಳಿಗೆಭಾರತ ರತ್ನ ಪ್ರಶಸ್ತಿನೀಡುವ ಬದಲು ಸಿದ್ದಗಂಗಾ ಶ್ರೀಗಳ   ಬಗ್ಗೆ ನಿಜವಾದ ಗೌರವ ಸಕರ್ಾರಕ್ಕಿದ್ದರೆ ಮದ್ಯ ಪಾನ ನಿಷೇಧ ಮಾಡಿದರೆ ಭಾರತ ರತ್ನ  ಪ್ರಶಸ್ತಿ ನೀಡಿದಂತೆ ಎಂದು ಸಾಣೇಹಳ್ಳಿ ಡಾ.ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಜಿ ಹೇಳಿದರು. 

ಪಟ್ಟಣದ ಎಚ್ ಪಿ ಎಸ್ ಕಾಲೇಜಿನ ಆವರಣದಲ್ಲಿ ನೀನಲ್ಲದೆ ಮತ್ತಾರು ಇಲ್ಲವಯ್ಯ ಎಂಬ  ವಚನ ನೃತ್ಯ ರೂಪಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇವಲ ಆಥರ್ಿಕ ಪ್ರಗತಿ ಪ್ರಗತಿಯಲ್ಲ, ಅದರ ಜೊತೆಗೆ ಶೈಕ್ಷಣಿಕ ಪ್ರಗತಿಯಾಗಬೇಕು, ಆಗ ಮಾತ್ರ ತಲೆ ಎತ್ತಿ ಬದುಕಬಹುದು ಸಿರಿಗೇರಿ ಹಿಂದಿನ ಶ್ರೀಗಳು  ದುಗ್ಗಾಣಿ ಮಠವಾಗಿದ್ದ ಸಿರಿಗೇರಿ ಮಠವನ್ನು  ದುಡಿಯುವ ಮಠವನ್ನಾಗಿ ಮಾಡಿದರು. ದುಶ್ಟಟಗಳಿಗೆ ನಮ್ಮನ್ನು ನಾವು ಮಾರಿಕೊಂಡಿದ್ದೇವೆ, ನಮ್ಮನ್ನು ಆಳುವ ನೇತಾರರ ಸ್ಥಿತಿ ಹೇಗಾಗಿದೆ ಎಂದು ನೋಡಿದರೆ ಉಳಿದವರ ಸ್ಥಿತಿ ಹೇಗಾಗಬಹುದು ಎಂದು ಶಾಸಕರಿಬ್ಬರ ರೇಸಾರ್ಟ ಗಲಾಟೆಯನ್ನು ಪರೋಕ್ಷವಾಗಿ ಪ್ರಸ್ಥಾಪಿಸಿದರು.

 ಸಹಜ ಹಾಗೂ ಸಾವಯವ ಕೃಷಿಗೆ ಒತ್ತು ನೀಡಬೇಕು ಎಂದು ಹೇಳಿದ ಶ್ರೀಗಳು ಮನೋರಂಜನೆ ಮನೋವಿಕಾಸವಾಗಬೇಕು ಹೊರತು ಮನೋವಿಕಾರವಾಗಬಾರದು ಎಂದರು. ವಚನಗಳ ಸಂಸ್ಕಾರ ವನ್ನು ಮಕ್ಕಳಿಗೆ ಕಲಿಸಬೇಕು ಎಂದು ಅವರು ತಿಳಿಸಿದರು.

ತರಳಬಾಳು ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿ ಸಮಾಜಮುಖಿ ಕಾರ್ಯಗಳನ್ನು ಕೇವಲ ಸಕರ್ಾರಗಳು ಮಾಡಲು ಸಾದ್ಯವಿಲ್ಲ, ಸಂಘ ಸಂಸ್ಥೆಗಳು ಮಾಡಬೇಕಾಗುವುದು, ಇಂದು ಆರಂಭವಾಗಿರುವ ವಿಶ್ವಬಂಧು ಮರುಳ ಸಿದ್ದ ಸೌಹಾರ್ಧ ಸಹಕಾರ ಬ್ಯಾಂಕು ಯಶಸ್ವಿಯಾಗಲಿ ಎಂದರು. ವೀರಶೈವ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಪಟೇಲ್ ಬೆಟ್ಟನಗೌಡ ಮಾತನಾಡಿ ಸಹಕಾರಿ ರಂಗದಲ್ಲಿ ಸಾಧನೆ ಮಾಡವುದರ ಜೊತೆಗೆ ಇತರೆ ಸಮಾಜದವರಿಗೆ ಸಾಲ ಸೌಲಭ್ಯ ನೀಡಬೇಕು ಎಂದರು. ಸಾಧುವೀರಶೈವ ಸಮಾಜದ ಅಧ್ಯಕ್ಷ ಬಂದೋಳು ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿಮನುಷ್ಯ ಬಟ್ಟೆ.ಸೇರಿದಂತೆ ವಿವಿಧ ವಸ್ತುಗಳನ್ನು ಬದಲಾಯಿಸುತ್ತಾನೆ ಅದರೆ ತಾನು ಬದಲಾವಣೆ ಯಾಗದಿರವುದು ದುರಂತವಾಗಿದ್ದು ಕಾಲ ಬದಲಾದಂತೆ ಮನುಷ್ಯ ಬದಲಾವಣೆಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢ ಶಾಲೆ ಹಾಗೂ ಶಿವಕುಮಾರ  ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯ 100 ಮಕ್ಕಳು 40 ವಚನಗಳಿಗೆ ನೃತ್ಯ ಮಾಡಿ ಗಮನ ಸೆಳೆದರು. ನಿವೃತ್ತ ಪ್ರಾಚಾ.ರ್ಯ ಎ.,ಸಿದ್ದೇಶ್ವರ ಮುಖಂಡರಾದ ಬಿ.ಕೆ.ಪ್ರಕಾಶ, ಕೆ.ರವೀಂದ್ರನಾಥ, ಡಾ.ಹರ್ಷ, ಪ್ರಕಾಶ ಹುಣ್ಸಿಹಳ್ಳಿ, ಪ್ರೇಮಕುಮಾರ,, ಬಳಿಗನೂರು ರಾಮನಗೌಡರು,  ಶಂಕ್ರಗೌಡ್ರು, ನಾಗರಾಜ ಕುಸುಮಾ, ಇತರರು ಉಪಸ್ಥಿತರಿದ್ದರು.