ರಾಜಕೀಯ ಸೇರು ಉದ್ದೇಶ ನನಗೆ ಇಲ್ಲ: ಚೆನ್ನಣ್ಣನವರ್

ಲೋಕದರ್ಶನ ವರದಿ

ಕೊಪ್ಪಳ 13: ಯುವಕರಿಗೆ ಸ್ಫೂತರ್ಿ ತುಂಬುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದರ ಹಿಂದೆ ಯಾವುದೇ ಉದ್ದೇಶವಿಲ್ಲ. ಮುಂದೆ ರಾಜಕೀಯ ಸೇರುವ ಉದ್ದೇಶವೂ ಇಲ್ಲವೆಂದು ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಸ್ಪಷ್ಟಪಡಿಸಿದ್ದಾರೆ.

ಅವರು ತಾಲೂಕಿನ ಅಳವಂಡಿ ಗ್ರಾಮಕ್ಕೆ  ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬಲಿಷ್ಠ ರಾಷ್ಟ್ರ ನಿಮರ್ಾಣದಲ್ಲಿ ಯುವಕರ ಪಾತ್ರ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಆಗಮಿಸಿದ ವೇಳೆ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ನಾನೂ ಇದೇ ಭಾಗದವನು, ಯುವಕರಿಗೆ ಸ್ವಾಮಿ ವಿವೇಕಾನಂದರು ''ಏಳಿ ಎದ್ದೇಳಿ ಗುರಿ ತಲುಪುವವರಿಗೆ ನಿಲ್ಲದಿರಿ'' ಅಂತಾ ಹಿಂದೆಯೇ ಕರೆ ನೀಡಿದ್ದರು. ಅದನ್ನು ಪಾಲಿಸಬೇಕು. ಶಿಕ್ಷಣವೇ ಮೊದಲ ಆದ್ಯತೆಯಾಗಬೇಕು. ಯುವಕರು ಹೆಚ್ಚಿನ ಸಮಯವನ್ನು ಓದಿಗಾಗಿ ವ್ಯಯಿಸಬೇಕು ಎಂದು ಸಲಹೆ ನೀಡಿದರು ಡಿಸಿಪಿ ಚೆನ್ನಣ್ಣನವರ್. 

ಅಲ್ಲದೆ ಸಾಮಾಜಿಕ ಜಾಲತಾಣಗಳಿಂದ ಯುವ ಜನಾಂಗ ದೂರವಿರಬೇಕು, ಹಾಗಿದ್ದರೆ ಮಾತ್ರ ತಮ್ಮ ಗುರಿ ತಲುಪಲು ಸಾಧ್ಯ ಎಂದು ಯುವಕರಿಗೆ ಕಿವಿಮಾತನ್ನು ಅವರು ಹೇಳಿದರು. ಈ ಸಂದರ್ಭದಲ್ಲಿ ಅಳವಂಡಿ ಗ್ರಾಮದ ವಿದ್ಯಾಥರ್ಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.