ದೇವರು ಧ್ಯಾನದಿಂದ ವೃದ್ಧಾಪ್ಯದಲ್ಲಿ ಸುಖ: ಪಾಟೀಲ್

ಗದಗ 24: ನಾನು ಭಾರತವನ್ನು ಪ್ರೀತಿಸುತ್ತೇನೆ ಏಕೆಂದರೆ ಭಾರತ ದೇವರನ್ನು ಪ್ರೀತಿಸುತ್ತದೆ. ಎಂಬ ಮಹಾಕವಿಯ ವಾಖ್ಯ ಭಾರತೀಯ ಸಂಸ್ಕೃತಿಯ ಧ್ಯೋತಕವಾಗಿದೆ. ನಮ್ಮ ದೇಶದಲ್ಲಿ ಗುರು ಹಿರಿಯರನ್ನು ದೇವರಷ್ಟೇ ಪೂಜ್ಯ ಭಾವನೆಯಿಂದ ಗೌರವಿಸುವ ಹಿರಿದಾದ ಪರಂಪರೆ ನನಗೆ ಅತ್ಯಂತ ಪ್ರಿಯವಾದುದು ಎಂದು ಡಿ.ಆರ್. ಪಾಟೀಲ್ ಹೇಳಿದರು.

ಅವರು ದಿ. 23ರಂದು ಮುನ್ಸಿಪಲ್ ಹೈಸ್ಕ್ಕೂಲ್ ಮೈದಾನದಲ್ಲಿ ಜರುಗಿದ ವೃದ್ಧಾಪ್ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ದೇವರು ಧ್ಯಾನದಿಂದ ವೃದ್ಧಾಪ್ಯದಲ್ಲಿ ಸುಖ. ನಾನು ಈ ವೃದ್ಧಾಪ್ಯದಲ್ಲಿಯೂ ಇಷ್ಟು ಕ್ರಿಯಾಶೀಲರಾಗಿರಲು, ಸುಖವಾಗಿರಲು ಕಾರಣ ದೇವರಲ್ಲಿ ಶ್ರದ್ಧೆ ಮತ್ತು ಯೋಗ, ಧ್ಯಾನಗಳ ಅಭ್ಯಾಸ." ಎಂದು ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಎಂಬ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಿ.ಆರ್. ಪಾಟೀಲರು ಜನತೆಗೆ ಕರೆ ನೀಡಿದರು. ಇಲ್ಲಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮಾನ್ಯ ಡಿ.ಆರ್.ಪಾಟೀಲರವರು ಅಬು ಪರ್ವತ ಈಶ್ವರೀಯ ವಿಶ್ವ ವಿದ್ಯಾಲಯದ ಪ್ರಧಾನ ಕೇಂದ್ರದಲ್ಲಿ ತಾವು ಪಡೆದ ಆಧ್ಯಾತ್ಮಿಕ ಅನುಭವವನ್ನು ಹಂಚಿಕೊಂಡುರು ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಕ ಅಧಿಕಾರಿಗಳಾದ ಮಂಜುನಾಥ ಆರ್. ಚಾವಣ್ ಮಾತನಾಡುತ್ತಾ ಇಂದು ಜನತೆಯ ಮನಸ್ಸು ಕಮರ್ಷಿಯಲ್ ಆಗಿದೆ. ಆಧ್ಯತ್ಮಿಕತೆ ಕಡಿಮೆಯಾಗಿದೆ. ಜೀವನದ ಅಧಿಕ ಒತ್ತಡಗಳಿಂದ ಮತ್ತು ವಾಹನ ಮೇಲಿನ ಅವಲಂಬನೆಯಿಂದ ದೈಹಿಕ ವ್ಯಾಯಾಮ ಇಲ್ಲದೆ ಹೃದಯಘಾತಕ್ಕೆ ಒಳಪಡುವವರ ಸಂಖ್ಯೆ ಹೆಚ್ಚಾಗಿದೆ. ಮಾನವನ ದೇಹದ ಇನ್ರ್ಟನಲ್ ಆರ್ಗನ್ಸ್ ಗಳಿಗೆ ಬಾಹ್ಯ ಅಂಗಗಳಿಗಿಂತ ಹೆಚ್ಚು ವಯಸ್ಸಾಯಿಗಿದೆ. ವರ್ತಮಾನ ಸಮಯದಲ್ಲಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಈಶ್ವರೀಯ ವಿಶ್ವ ವಿದ್ಯಾಲಯದ ಶಿಕ್ಷಣ ಅತೀ ಅವಶ್ಯಕವಾಗಿದೆ. ಎಂದು ಅಭಿಪ್ರಾಯ ಪಟ್ಟರು.

 ಮುಖ್ಯ ಉಪನ್ಯಾಸಕರಾಗಿ ಅಬುಪರ್ವತದಿಂದ ಆಗಮಿಸಿದ ಡಾ. ಮಹೇಶ ಹೇಮಾದ್ರಿ ಅವರು  ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಕುರಿತು ವಿವರವಾಗಿ ಮಾತಾಡುತ್ತಾ ವಯಸ್ಸಾದವರು ಎಲ್ಲಾ ಚಲನ ವಲನಗಳಲ್ಲಿ ಎಚ್ಚರಿಕೆ ವಹಿಸುವುದು. ಬಹಳ ಅವಶ್ಯಕತೆಯಿದೆ. ಹಿರಿಯ ನಾಗರಿಕರಾದವರು ತಮ್ಮ ಶರೀರ ಮತ್ತು ಮನಸ್ಸಿನ ಸಂತುಲನೆಯನ್ನು ಕಾಪಾಡಲು ದ್ಯಾನ ಮತ್ತು ಯೋಗದಂತಹ ಅಭ್ಯಾಸವನ್ನು ನಿರಂತರ ಮಾಡುತ್ತಿರಬೇಕು ಅಷ್ಟೇ ಅಲ್ಲ ಶರೀರದ ಸಂಧಿಗಳ ಲವಲವಿಕೆಗಾಗಿ ಕೆಲವು ಸುಲಭ ವ್ಯಾಯಾಮಗಳನ್ನು ಮಾಡಬೇಕು ತಮ್ಮ ಚಿಂತನೆಯಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಂಡರೆ ಆರೋಗ್ಯದಲ್ಲಿ ತುಂಬಾ ಸುಧಾರಣೆ ಆಗುವುದು ಎಂದು ಅಮೂಲ್ಯವಾದ ಸಲಹೆಗಳನ್ನು ನೀಡಿದರು. ಬೀದರನಿಂದ ಆಗಮಿಸಿದ ಡಾ. ಹನುಮಂತ ಭಾರಶಟ್ಟಿ ಅಣ್ಣನವರು ವಾದನ ಸಂಗೀತದ ಮೂಲಕ ಲಘು ವ್ಯಾಯಾಮವನ್ನು ಸಂಧಿ ಕೀಲುಗಳ ಸಡಿಲಿಸುವ ವ್ಯಾಯಾಮ ಖುಚರ್ಿಯಲ್ಲಿ  ಕುಳಿತು ಮಾಡುವ ಸೂರ್ಯ ನಮಸ್ಕಾರ ಇತ್ಯಾದಿ ಹಿರಿಯ ನಾಗರಿಕರಿಗೆ ಅನುಕೂಲವಾದ ಅಭ್ಯಾಸಗಳ ಪ್ರಾತ್ಯಾಕ್ಷಿಕೆ ಮಾಡಿದರು ಮುಖ್ಯ ಅಥಿತಿಗಳಾಗಿ ಆಗಮಿಸಿದ ಪೆನ್ಶರ್ನಸ್ಕ್ಲಬಿನ ಅಧ್ಯಕ್ಷರಾದ ಪ್ರೋ.ಕೆ.ಎಚ್.ಬೇಲೂರ ಅವರು ಎಲ್ಲಾ ಅಥಿತಿಗಳ ಪರವಾಗಿ ಮಾತನಾಡುತ್ತಾ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಆಧ್ಯಾತ್ಮಿಕ ಶಿಕ್ಷಣವನ್ನು ಪಡೆಯುವ ನಿತ್ಯ ಅಭ್ಯಾಸವನ್ನು ಮಾಡುವ ಮಹತ್ವತೆಯನ್ನು ತಿಳಿಸಿದರು. ಪ್ರೋಬಸ್ ಕ್ಲಬಿನ ಅಧ್ಯಕ್ಷರಾದ ಶ್ರೀ.ಎಸ್ ಎಚ್. ಕರಿಯಣ್ಣನವರ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಇಲಾಖೆಯ ಬಿ.ಬಿ.ಹೂಗಾರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಶುಭ ಹಾರೈಸಿ ಡಾ. ಮಹೇಶ ಹೇಮಾದ್ರಿ ಅವರನ್ನು ಸನ್ಮಾನಿಸಿದರು.

ರೈತರ ದಿನಾಚರಣೆಯ ಅಂಗವಾಗಿ ಪ್ರಗತಿ ಪರ ರೈತರಾದ ಚನ್ನಬಸಪ್ಪ ಕೊರವಣ್ಣನವರ್ ಮತ್ತು 88 ವಯಸ್ಸಿನ ಕಮಲ್ಲಮ್ಮ ತಿಮ್ಮಣ್ಣನವರ್ ಅವರನ್ನು ಸಮಾರಂಭದ ಅಧ್ಯಕ್ಷರು ಸನ್ಮಾನಿಸಿದರು. ಅವರು ಮಾತನಾಡುತ್ತಾ ಪ್ರತಿ ದಿನ 30 ರೊಟ್ಟಿ ಬಡಿತೀನಿ ಮನೆ ಕೆಲಸ ಮುಗಿಸಿ ಹೊಲಕ್ಕೆ ಹೋಗುತ್ತೇನೆ ಎಂದು ತಮ್ಮ ಆರೋಗ್ಯವಂತ ಜೀವನವನ್ನು ಪ್ರತ್ಯಕ್ಷಗೊಳಿಸಿದರು. ವಯಸ್ಸಾದಾಗ ಆರೋಗ್ಯ ಚನ್ನಾಗಿದ್ದರೆ ನಾನು ಚನ್ನಾಗಿ ಬದುಕಬಲ್ಲೆ ಎಂಬ ಆತ್ಮ ವಿಶ್ವಾಸ ಹೆಚ್ಚುವುದಲ್ಲದೇ ಸೋಸೆಯರು ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ. ಜೀವನ ಹಗುರವಾಗಿರುತ್ತದೆ. ಎಂದು ಹರ್ಷ ವ್ಯಕ್ತ ಪಡಿಸಿದರು.

ಗದಗ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕನವರು ನಿರೂಪಣೆ ಮಾಡಿದ ಈ ಕಾರ್ಯಕ್ರಮದಲ್ಲಿ ಬಿ.ಕೆ.ಉಮಕ್ಕನವರು ಸ್ವಾಗತಿಸಿದರು ಮತ್ತು ಬಿ.ಕೆ ರೇಖಕ್ಕನವರು ವಂದಿಸಿದರು.