ನಗೆ ಶಾಲೆಯಲ್ಲಿ 134ನೇ ಅಂಬೇಡ್ಕರ್ ಜಯಂತಿಯ ಸವಿ ನೆನಪಿಗಾಗಿ ಪ್ರಿಡ್ಜ್ ಕೊಡುಗೆ
ಕಾರವಾರ 14 : ತಾಲೂಕಿನ ಕುಗ್ರಾಮವಾದ ನಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜನ್ಮ ದಿನವನ್ನು ಆಚರಿಸಲಾಯಿತು. ಬಾಬಾ ಸಾಹೇಬ ಅಂಬೇಡ್ಕರ್ ಅವರ ನಿಜ ಜೀವನ ಮತ್ತು ಅವರ ಆದರ್ಶಗಳನ್ನು ಮಕ್ಕಳು ತಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಲು ತಿಳಿ ಹೇಳುವುದರ ಮೂಲಕ ನಮ್ಮ ಭಾರತ ದೇಶಕ್ಕೆ ಸಂವಿಧಾನ ರಚಿಸಿ ಅದರ ನಡಾವಳಿಗಳನ್ನು ಸರಕಾರದ ಪ್ರಣಾಳಿಕೆಯಲ್ಲಿ ಹಾಗೂ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ, ಸಂವಿಧಾನದಲ್ಲಿರುವ ಮೂಲಭೂತ ಉದ್ದೇಶಗಳನ್ನು ಸಾರುವಂತಹ ಧ್ಯೇಯೋದ್ದೇಶಗಳನ್ನು ಮನಗಾಣುವಂತೆ ನಾವುಗಳು ಶ್ರಮ ವಹಿಸಬೇಕು ಎಂದರು. ಸ್ವಾಗತವನ್ನು ರೂಪಾ ಉಮೇಶ ನಾಯ್ಕ ಮಾಡುವುದರೊಂದಿಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿದರು. ಎಸ್.ಡಿ.ಎಂ.ಸಿ. ನಾಗಿ ಪಾಂಡುರಂಗ ಗೌಡ ಪುಷ್ಪಗುಚ್ಚ ಸಲ್ಲಿಸಿದರೆ ಶಾಲಾ ಮಕ್ಕಳು ಹೂಹಾರವನ್ನು ಸಮರ್ಿಸಿದರು. ಅಖ್ತರ ಜೆ. ಸಯ್ಯದ್, ಅಂಕೋಲಾ ಪುಷ್ಪ ನಮನ ಮಾಡಿದರು. ಡಾಽ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದ ಸವಿ ನೆನಪಿಗಾಗಿ 7ನೇ ವರ್ಗದ ಮಕ್ಕಳಾದ ಭಾಗ್ಯಶ್ರೀ ಗೌಡ, ಮೋನಿಕಾ ಗೌಡ, ಶಾಲಿನಿ ಗೌಡ, ದೇವರಾಜ ಗೌಡ, ಶಾಂತಾ ಗೌಡ, ಹರೀಶ ಗೌಡ, ಶಿಕ್ಷಕಿ ರೂಪಾ ಉಮೇಶ ನಾಯ್ಕ, ಅತಿಥಿ ಶಿಕ್ಷಕಿ ರೇಷ್ಮಾ ಹುಲಸ್ವಾರ, ಅಖ್ತರ ಜೆ. ಸಯ್ಯದ್ ಅಂಕೋಲಾ ಇವರು ಗ್ರಾಮದಲ್ಲಿ ಮಕ್ಕಳಿಗೆ ಪ್ರಿಡ್ಜ್ ಬಳಸುವದನ್ನ ಅದರಿಂದಾಗುವ ಉಪಯೋಗಗಳನ್ನು ಮತ್ತು ಶಾಲೆಯ ಬಿಸಿಯೂಟ ಕೇಂದ್ರದ ತರಕಾರಿಗಳನ್ನು ಶೇಖರಿಸಿಡುವ ಸಲುವಾಗಿ ಡಬಲ್ ಡೋರಿನ ಸ್ಯಾಮ್‌ಸಂಗ್ ಕಂಪನಿಯ ಪ್ರಿಡ್ಜ್ ಕೊಡುಗೆಯಾಗಿ ಶಾಲೆಗೆ ನೀಡಿದ್ದು ವಿಶೇಷವಾಗಿತ್ತು.