ನಿವೃತ್ತ ಶಿಕ್ಷಕ ಎ.ಎಸ್‌. ಪಾಟೀಲರಿಗೆ ಸನ್ಮಾನ

ನಿವೃತ್ತ ಶಿಕ್ಷಕ ಎ.ಎಸ್‌. ಪಾಟೀಲರಿಗೆ ಸನ್ಮಾನ Felicitation of retired teacher A.S. Patil

ಲೋಕದರ್ಶನ ವರದಿ 

  ಕಾಗವಾಡ 03 :  ವಿದ್ಯಾರ್ಥಿಯ ಯಶಸ್ಸಿನ ನಿಜವಾದ ಗೌರವ ಅವನ ಶಿಕ್ಷಕರಿಂದ ಮಾತ್ರ ಸಿಗುತ್ತದೆ. ಸರ್ಕಾರಿ ಸೇವೆಗೆ ಸೇರಿದ ನಂತರ ಶಾಲಾ ಜೀವನದಲ್ಲಿ ರೂಪುಗೊಂಡ ವಿದ್ಯಾರ್ಥಿಯ ವೈಭವವನ್ನು ಪ್ರತಿಯೊಬ್ಬ ಶಿಕ್ಷಕನೂ ತನ್ನ ಕಣ್ಣುಗಳಿಂದ ನೋಡುವ ಅದೃಷ್ಟ ದೊರೆಯುವುದಿಲ್ಲ. ಅಂತಹ ಸೌಭಾಗ್ಯ ಈಗ ನನಗೆ ಲಿಭಿಸಿದೆ ಎಂದು ಸಿದ್ದೇಶ್ವರ ವಿದ್ಯಾಲಯದ ನಿವೃತ್ತ ಶಿಕ್ಷಕ ಎಸ್‌.ಎ. ಪಾಟೀಲ್ ಹೇಳಿದ್ದಾರೆ. 

ಅವರು, ಮಂಗಳವಾರ ದಿ. 30 ರಂದು ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಹೊಸ ಇಂಗಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ, ನಿವೃತ್ತರಾದ ಡಾ. ಸುಧೀರ್ ಬೋಲೆ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಿದ್ದರು.  

ಕಾರ್ಯಕ್ರಮದಲ್ಲಿ ಡಾ. ಸುಧೀರ್ ಬೋಲೆ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಡಾ. ಸುಧೀರ್ ಬೋಲೆ ಮಾತನಾಡಿ, ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗಿದ್ದರೂ, ಸಮಾಜಸೇವೆ ಮತ್ತು ವೈದ್ಯಕೀಯ ಸೇವೆ ಎಂದಿಗೂ ನಿಲ್ಲುವುದಿಲ್ಲ. ಸಾಮಾನ್ಯ ನಾಗರೀಕರಿಗಾಗಿ ನನ್ನ ವೈದ್ಯಕೀಯ ಕಾರ್ಯ ನಿರಂತರವಾಗಿ ಮುಂದುವರಿಯುತ್ತದೆ ಎಂದರು. 

ಈ ವೇಳೆ ಡಾ.ಸುಧೀರ್ ಪಾಟೀಲ್, ಸಹಕಾರಿ ರಿಜಿಸ್ಟ್ರಾರ್ ಸಂಜಯ್ ಪೂಜಾರಿ, ಸಂಜಯಕುಮಾರ ಅಳತೆ, ಭೀಮು ಬೋಲೆ, ಮಾಜಿ ಜಿ.ಪಂ. ಸದಸ್ಯ ಅಣ್ಣಾಸಾಹೇಬ ಪವಾರ, ಸಿಬಿಕೆಎಸ್ ಕಾರ್ಖಾನೆಯ ನಿರ್ದೇಶಕ ಮಹಾವೀರ ಕಾತ್ರಾಳೆ, ಚಿದಾನಂದ ಪಾಟೀಲ, ಅಶೋಕ ಕಾತ್ರಾಳೆ, ಸುಭಾಶ ಪಾಟೀಲ, ಭೀಮು ಅಕಿವಾಟೆ, ಸುರೇಶ ಚೌಗಲೆ, ರಾಜು ಚೌಗಲೆ, ಡಾ. ಸುಕುಮಾರ ಚೌಗಲೆ, ಡಾ. ರಮೇಶ ಖಿಚಡೆ, ಡಾ. ಲಕ್ಷ್ಮಣ ಪವಾರ, ಗಣಪತಿ ಧನವಾಡೆ, ಚಂದ್ರಕಾಂತ ಲಗೊಂಟೆ, ವಿಲಾಸ ಪವಾರ, ಜ್ಯೋತಿರಾಮ ಯಾದವ ಸಂಜಯ ಕುಡಚೆ ಸೇರಿದಂತೆ ಮಾಂಜರಿ, ಇಂಗಳಿ, ಶಿರಗುಪ್ಪಿ ಮತ್ತು ಅಂಕಲಿ ಗ್ರಾಮಗಳ ಅನೇಕ ಗಣ್ಯರು ಉಪಸ್ಥಿತರಿದ್ದರು.