ರೈತರ ಸಮಸ್ಯೆಗಳಿಗೆ ಸಂಘಟಿತ ಹೋರಾಟದಿಂದ ಪರಿಹಾರ ಸಾಧ್ಯ-ಕಾಂ. ಶಂಕರ್ ಘೋಷ್‌

Farmers' problems can be solved by organized struggle-Com. Shankar Ghosh

ರೈತರ ಸಮಸ್ಯೆಗಳಿಗೆ ಸಂಘಟಿತ ಹೋರಾಟದಿಂದ ಪರಿಹಾರ ಸಾಧ್ಯ-ಕಾಂ. ಶಂಕರ್ ಘೋಷ್‌

.ಬಳ್ಳಾರಿ 02 :ನಗರದ ರಾಘವ ಕಲಾ ಮಂದಿರದಲ್ಲಿ ಎಐಕೆಕೆಎಂಎಸ್ ರೈತ ಸಂಘಟನೆಯು ರಾಜ್ಯ ಸಮಿತಿಯ ವಿಸ್ತೃತ ಸರ್ವ ಸದಸ್ಯರ ಸಭೆಯನ್ನು ಸಂಘಟಿಸಲಾಗಿತ್ತು. 

ಈ ಸಂಧರ್ಭದಲ್ಲಿ ಸಂಘದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳು ಕಾಂ. ಶಂಕರ್ ಘೋಷ್ ಅವರು ಮಾತನಾಡುತ್ತಾ ಈ ದೇಶದ ರೈತರು ತಮ್ಮ ಸಮಸ್ಯೆಗಳಿಗೆ ಸಂಘಟಿತ ಹೋರಾಟದಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ, ಇತ್ತೀಚೆಗೆ ದೆಹಲಿಯ ಗಡಿ ಭಾಗದಲ್ಲಿ ನಡೆದ ಅಭೂತಪೂರ್ವ ಯಶಸ್ವಿ ಹೋರಾಟವೇ ಸಾಕ್ಷಿಯಾಗಿದೆ. ಜೋತೆಗೆ, ಸರ್ಕಾರವೇ ಮುಂದು ನಿಂತು ಈ ಹೋರಾಟವನ್ನು ಹತ್ತಿಕ್ಕಲು ಏನೇ ಪ್ರಯತ್ನ ಪಟ್ಟರೂ ಸಹ ಈ ಹೋರಾಟ ತಪ್ಪು ದಾರಿ ಹಿಡಿಯಲಿಲ್ಲ, ಮತ್ತು  ರೈತರನ್ನು ಯಾರೂ ಸಹ ಖರೀಧಿಸಲು ಸಾಧ್ಯವಿಲ್ಲ  ಎಂಬಂತಹ  ನೈತಿಕತೆಯನ್ನು ರೈತ ಸಮುದಾಯ ಹೊಂದಿದೆ ಎಂಬುದನ್ನು ಈ ಹೋರಾಟ ಸಾಬೀತುಪಡಿಸಿತು.   

ಹಾಗಾಗಿ ಇಂದು ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಸಹ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ, ಅವರು ಈ ವ್ಯವಸ್ಥೆಯ ಮಾಲೀಕರಾದ ಬಂಡವಾಳಿಗರ ಸೇವಕರಾಗಿದ್ದಾರೆ. ಆದ್ದರಿಂದ ನಾವು ಹೋರಾಟದ ಮೂಲಕ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸರಿಯಾದ ಸಂಘಟನೆ ಮೂಲಕ ಮುನ್ನುಗ್ಗಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಕಾರ್ಯದರ್ಶಿಗಳಾದ ಬಿ.ಭಗವಾನ್ ರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ ನಾಗಮ್ಮಾಳ್, ಎಸ್‌.ಎನ್‌.ಸ್ವಾಮಿ. ಲಕ್ಷ್ಮಣ ಜಡಗಣ್ಣನವರ್ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋವಿಂದ್, ದೀಪ, ಮಹೇಶ್, ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಸೇರಿದಂತೆ ಇತರ ರಾಜ್ಯ ಸಮಿತಿ ಸದಸ್ಯರು  ಮತ್ತು ಸಂಘದ ನೂರಾರು ಸದಸ್ಯರುಭಾಗವಹಿಸಿದ್ದರು.