ಆಲಮಟ್ಟಿ ಜಲಾಶಯದಿಂದ ರೈತರ ಬದುಕ ಹಸನು

Farmers' lives have improved with Alamatti Reservoir

ಆಲಮಟ್ಟಿ ಜಲಾಶಯದಿಂದ ರೈತರ ಬದುಕ ಹಸನು  

ಬಳ್ಳಾರಿ 28:  ಉತ್ತರ ಕರ್ನಾಟಕ ಜನರ,ರೈತರ ಬದುಕನ್ನು ಬದಲಿಸುವ ಉದ್ದೇಶದೊಂದಿಗೆ ನಿರ್ಮಾಣಗೊಂಡ ಜಲಾಶಯ ಆಲಮಟ್ಟಿ ಜಲಾಶಯ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.ಅವರು ಇಂದು ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಚೇತನ ಕಾರ್ಯಕ್ರಮದಡಿ ಏಳನೇ ತರಗತಿ ವಿದ್ಯಾರ್ಥಿಗಳು ಆಲಮಟ್ಟಿ ಹಾಗೂ ತುಂಗಭದ್ರಾ ಜಲಾಶಯಗಳ ಕುರಿತು ಮಂಡಿಸಿದ ವಿಷಯ ಆಲಿಸಿ ನಂತರ ಮಾತನಾಡಿದ ಅವರು ನೀರಾವರಿ ಹಾಗೂ ಜಲವಿದ್ಯುತ್ ಉತ್ಪಾದನೆ ಮಾಡುವ ಗುರಿ ಇಟ್ಟುಕೊಂಡು 1964ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಇದರ ಅಡಿಗಲ್ಲು ಪೂಜೆ ನೆರವೇರಿಸಿದರು. 

ಇದು160 ಅಡಿ ಎತ್ತರ ಹಾಗೂ130 ಟಿ.ಎಂ.ಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.ಇದರ ಕೆಲಸ 2005ರಲ್ಲಿ ಪೂರ್ಣಗೊಂಡಿತು.ಇದು ಬಿಜಾಪುರ ಜಿಲ್ಲೆಯ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.2010ರಲ್ಲಿ ಅಂದಿನ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಉದ್ಘಾಟಿಸಿ ಲೋಕಾರೆ​‍್ಣ ಗೊಳಿಸಿದರು.ಇಲ್ಲಿ ಏಳು ತಾರಸಿ ಉದ್ಯಾನವನ ಹಾಗೂ ರಾಕ್ ಹಿಲ್ ಎಂಬ ಕೃತಕ ಅರಣ್ಯ ನಿರ್ಮಿಸಲಾಗಿದೆ. ವರ್ಷದಿಂದ ವರ್ಷಕ್ಕೆ ದೇಶ ವಿದೇನದಿಂದ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.ಆದ್ದರಿಂದ ವಿದ್ಯಾರ್ಥಿಗಳು ಕರ್ನಾಟಕದ ಜಲಾಶಯ ಹಾಗೂ ನದಿಗಳ ಕುರಿತು, ಅವುಗಳ ಸಂಗಮ ಸ್ಥಳಗಳ ಕುರಿತು ಮಾಹಿತಿ ಸಂಗ್ರಹ ಮಾಡಿ ಅಧ್ಯಯನ ಶೀಲರಾಗಬೇಕೆಂದು ಹೇಳಿದರು.ಪ್ರತಿಭಾವಂತ ವಿದ್ಯಾರ್ಥಿನಿ ಏಳನೇ ತರಗತಿ ಕೆ.ಮಾನ್ಯಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ  ಶಿಕ್ಷಕರಾದ ದಿಲ್ಷಾದ್ ಬೇಗಂ, ಚನ್ನಮ್ಮ, ಶ್ವೇತಾ, ಉಮ್ಮೇಹಾನಿ, ಶಶಮ್ಮ, ರಾಮಾಂಜಿನೇಯ, ಗುರುಪ್ರಸಾದ್, ವಿಜಯ ಮುಂಡ್ರಿಗಿ ಮುಂತಾದವರು ಉಪಸ್ಥಿತರಿದ್ದರು.