ಕುಟುಂಬದಲ್ಲಿ ಪ್ರತಿಯೊಬ್ಬರೂ ಮನೆಯ ಬೆಳಕಿಗೆ ಕಾರಣ: ದಿಂಗಾಲೇಶ್ವರ ಶ್ರೀ

ಶಿರಸಿ 05: ದೀಪವು ಬೆಳಗಿಸುವವನಿಗೆ ಅದರ ಒಗ್ಗಟ್ಟನ್ನು ಅದರ ಬಲವನ್ನು ತಿಳಿಸುತ್ತದೆ. ಬತ್ತಿ ಎಣ್ಣೆ ಹಣತೆಗಳ ಸಂಗಮ ಬೆಳಕಿಗೆ ಕಾರಣವಾದಂತೆ ಕುಟುಂಬದಲ್ಲಿ ಪ್ರತಿಯೊಬ್ಬರೂ ಮನೆಯ ಬೆಳಕಿಗೆ ಕಾರಣರಾಗುತ್ತಾರೆ ಎಂದು ಬಾಳೆಹೊಸೂರು ದಿಂಗಾಲೇಶ್ವರ ಶ್ರೀಗಳು ನುಡಿದರು. ಅವರು ಸೋಮವಾರ ಸಂಜೆ ನಗರದ ಬಣ್ಣದ ಮಠದ ವಚನ ಮಂದಿರದಲ್ಲಿ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥಾಪಕರಾದ ಲಿಂಗೈಕ್ಯ ಕುಮಾರ ಮಹಾಶಿವಯೋಗಿಗಳವರ 151 ನೇ ಜಯಂತಿ, ಲಿಂಗೈಕ್ಯ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳವರ 106 ನೇ ಜಯಂತಿ, ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿಗಳವರ 85 ನೇ ಸ್ಮರಣೋತ್ಸದ ಅಂಗವಾಗಿ ನಡೆದ ಧಾಮರ್ಿಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಧರ್ಮದರ್ಶನ ಸಂದೇಶ ನೀಡಿದರು.

ಕಾತರ್ಿಕ ಮಾಸ ಅಜ್ಞಾನ ದೂರಮಾಡಿ ಜ್ಞಾನ ಹಚ್ಚಿಸುವಂತಹದು. ಸೂರ್ಯ ಹೊರಗಿನ ಕತ್ತಲೆಯನ್ನುಕಳೆದರೆ ಗುರು ಒಳಗಿನ ಕತ್ತಲೆಯೆಂಬ ಅಜ್ಞಾನವನ್ನು ಕಳೆಯುತ್ತಾನೆ. ಮನೆಯಲ್ಲಿ ಅರಿತು ಬಾಳದಿದ್ದರೆ ಬದುಕು ದುಸ್ತರವಾಗುತ್ತದೆ ಎಂದು ವಿವರಿಸಿದರು. ಬನವಾಸಿ ಹೊಳೆಮಠದ ನಾಗಭೂಷಣ ಸ್ವಾಮಿಗಳು ಆಶೀರ್ವಚನ ನೀಡಿ ವೀರಶೈವ ಧರ್ಮ ಜನಿಸಿದ್ದುಜನರ ಉದ್ಧಾರಕ್ಕೆ ,ಇತ್ತೀಚೆಗೆ ಲಿಂಗಾಯತರು ಲಿಂಗ ಪೂಜೆ ಬಿಟ್ಟು ಬೇರೆಲ್ಲಾ ಪೂಜೆ ಮಾಡುತ್ತಿದ್ದಾರೆ. ನಾವು ಯಜ್ಞ ಯಾಗಾದಿ ಮಾಡುವದಕ್ಕಿಂತ ಲಿಂಗಪೂಜೆ ಮಾಡಬೇಕು. ರುದ್ರಾಕ್ಷಿ, ವಿಭೂತಿ ಧಾರಣೆ ಕಡ್ಡಾಯವಾಗಬೇಕು ಮತ್ತು ಸತ್ಯಶುದ್ಧವಾದ ಕಾಯಕ ನಮ್ಮ ನಿಜವಾದ ಧರ್ಮವೆಂದು ನುಡಿದರು. 

ಸದಾಶಿವ ಪೇಟೆ ವಿರಕ್ತಮಠದ ಗದಿಗೇಶ್ವರ ಶ್ರೀಗಳು, ಬಣ್ಣದ ಮಠದ ಪೀಠಾಧೀಶ ಶಿವಲಿಂಗ ಶ್ರೀಗಳು ಸಾನಿಧ್ಯವಹಿಸಿದ್ದರು. ಬನವಾಸಿ ಗ್ರಾಪಂ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣವರ,ವೀರಶೈವ ಸಮಾಜದಅಧ್ಯಕ್ಷ ಕೆ.ಎಸ್ ಶೆಟ್ಟರ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶ್ರೀಕಾಂತ ಹೂಲಿ ಮುಂತಾದವರು ಉಪಸ್ಥಿತರಿದ್ದರು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇ90ಕ್ಕಿಂತ ಹೆಚ್ಚಿನ ಅಂಕಗಳಿಸಿದ ವೀರಶೈವ ಸಮಾಜದ ವಿದ್ಯಾಥರ್ಿಗಳಿಗೆ  ಶ್ರೀಗಳು ವಿದ್ಯಾಥರ್ಿವೇತನ ನೀಡಿ ಗೌರವಿಸಿದರು. ಬಣ್ಣದ ಮಠದವ್ಯವಸ್ಥಾಪಕ ಎಸ್,ಬಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.