ಅತಿಸಾರ ಭೇದಿ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ

ಲೋಕದರ್ಶನ ವರದಿ 

ಅಂಕೋಲಾ : ತಾಲೂಕಿನ ಬೆಳಸೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕ ಮಟ್ಟದ ಅತಿಸಾರ ಭೇದಿ ನಿಯಂತ್ರಣದ ಪಾಕ್ಷಿಕದ ಚಾಲನೋತ್ಸಕ್ಕೆ ಸೋಮವಾರ ತಾ.ಪಂ. ಅಧ್ಯಕ್ಷೆ ಸುಜಾತ ಟಿ. ಗಾಂವಕರ ಅವರು ಹೂ ಗಿಡಕ್ಕೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು. 

ಬಳಿಕ ಅವರು ಮಾತನಾಡಿ ತಾಯಿ ಮತ್ತು ಮಗುವಿನ ರಕ್ಷಣೆಗಾಗಿ ಸಕರ್ಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅಂತಹ ಕಾರ್ಯಕ್ರಮಗಳಲ್ಲಿ ಅತಿಸಾರ ಭೇದಿ ನಿಯಂತ್ರಣವೂ ಒಂದು. ಇಂದಿನ ಮಕ್ಕಳೇ ಮುಂದಿನ ಸದೃಢ ಪ್ರಜೆಗಳು, ಅದಕ್ಕಾಗಿ ಎಲ್ಲರೂ ಕೈ ಜೋಡಿಸಿ ಅತಿಸಾರ ಭೇದಿ ನಿಯಂತ್ರಿಸುವತ್ತ ಗಮನಹ ರಿಸೋಣ. ಎಂಬುದಾಗಿ ತಿಳಿಸಿದರು.

ತಾ.ಪಂ. ಸದಸ್ಯ ಬೀರಾ ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಶಾ ಕಾರ್ಯಕತರ್ೆ ಯರು ಹಾಗೂ ಅಂಗನವಾಡಿ ಕಾರ್ಯಕತರ್ೆಯರು ಈಗಾಗಲೇ ಮನೆ ಮನೆ ಭೇಟಿ ನೀಡಿ ಅತಿಸಾರ ಭೇದಿ ನಿಯಂತ್ರಣದ ಕುರಿತು ಮಾಹಿತಿ ನೀಡುತ್ತಿದ್ದಾರೆ. ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿದ್ದು, ಎಲ್ಲರೂ ನೀರ ನ್ನು ಕಾಯಿಸಿ ಆರಿಸಿ ಕುಡಿಯಬೇಕು ಮೂಲಕ ಆರೋಗ್ಯದ ಕಡೆ ಗಮನ ನೀಡಬೇಕು ಎಂದರು.   

ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ. ಅರ್ಚನಾ ನಾಯಕರವರು ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕದ ಕುರಿತು, ಅತಿಸಾರ ಭೇದಿ ಕಾರ್ಯಕ್ರಮದ ಉದ್ದೇಶ, ನಿಯಂತ್ರಣ ಹಾಗೂ ಮುಂಜಾಗ್ರತ ಕ್ರಮಗಳ ಬಗ್ಗೆ  ಪ್ರಾಸ್ತಾವಿಕ ಮಾತಿನಲ್ಲಿ ಕೈತೊಳೆಯುವ ವಿಧಾನ, ಓ. ಆರ್ ಎಸ್ ಮತ್ತು ಜಿಂಕ್ ಮಾತ್ರೆಗಳ ಉಪಯೋಗದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಆರೋಗ್ಯ ಸಹಾಯಕಿ ರೇಣುಕಾ ಎನ್. ನಾಯ್ಕ ಆರೋಗ್ಯ ಮೇಲ್ವಿಚಾರಕಿ ಅಂಜನಿ ಟಿ. ಅಂಚೇಕರ,  ಓ. ಆರ್.ಎಸ್. ದ್ರಾವಣ ತಯಾರಿಸುವ ಬಗೆಯನ್ನು ಪ್ರಾತ್ಯಕ್ಷಿತೆಯ ಮೂಲಕ ವಿವರಿಸಿದರು. 0-5 ವರ್ಷದ ಮಕ್ಕಳಿಗೆ ಓ ಆರ್ ಎಸ್ ಪ್ಯಾಕೆಟನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾ.ಆ.ಕೇಂದ್ರದ ಸಿಬ್ಬಂದಿ, ಅಂಗನವಾಡಿ ಕಾರ್ಯಕತರ್ೆಯರು ಮತ್ತು ಆಶಾ ಕಾರ್ಯಕತರ್ೆಯರು ಹಾಗೂ ತಾಯಂದಿರು ಉಪಸ್ಥಿತ ರಿದ್ದರು.