ಪಟ್ಟಣದಲ್ಲಿ ಮೂರು ದಿನ ಕುಡಿಯುವ ನೀರು ಪೂರೈಕೆ ಸ್ಥಗಿತ

Drinking water supply disrupted in town for three days

ಪಟ್ಟಣದಲ್ಲಿ ಮೂರು ದಿನ ಕುಡಿಯುವ ನೀರು ಪೂರೈಕೆ ಸ್ಥಗಿತ  

ತಾಳಿಕೋಟಿ 05: ಪಟ್ಟಣದಲ್ಲಿರುವ ಕುಡಿಯುವ ನೀರು ಸಂಗ್ರಹಣಾ ಘಟಕ (ಟ್ಯಾಂಕ್) ಗಳು ಶಿಥಿಲಗೊಂಡಿದ್ದು ಅವುಗಳನ್ನು ತೆರೆವು ಗೊಳಿಸುವ ಕಾರ್ಯ ಆರಂಭವಾಗುವುದರಿಂದ ಪಟ್ಟಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೇ 6, 7 ಹಾಗೂ 8ರವರೆಗೆ ಕುಡಿಯುವ ನೀರು ಪೂರೈಕೆ ಆಗುವುದಿಲ್ಲ. ಸಾರ್ವಜನಿಕರು ಇದರ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡು ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಮುಖ್ಯಾಧಿಕಾರಿ ಮೋಹನ ಜಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.