ಪ್ರಗತಿಪರ ಕೃಷಿಕ ಹೆಗಡೆಗೆ ಡಾ.ಎಂ.ಹೆಚ್.ಮರಿಗೌಡ ಸ್ಮಾರಕ ಪ್ರಶಸ್ತಿ

ಲೋಕದರ್ಶನ ವರದಿ 

ಯಲ್ಲಾಪುರ: ತೋಟಗಾರಿಕಾ ಸಾಧನೆಗಾಗಿ ತಾಲೂಕಿನ ಕಾನಕೊಡ್ಲಿನ ಪ್ರಗತಿಪರ ಕೃಷಿಕ ಪ್ರಸಾದ ರಾಮಾ ಹೆಗಡೆಯವರಿಗೆ ಡಾ.ಎಂ.ಹೆಚ್.ಮರಿಗೌಡ ಸ್ಮಾರಕ ಪ್ರಶಸ್ತಿ ಲಭಿಸಿದೆ.

    ಕಾಳು ಮೆಣಸು ಹಾಗೂ ದಾಲ್ಚಿನ್ನಿ ಬೆಳೆ ಸಂರಕ್ಷಣೆ, ಸಂಶೋಧನೆ ಮತ್ತು ಸಾವಿರಕ್ಕೂ ಮಿಕ್ಕ ಸಸ್ಯ ತಳಿ ರಕ್ಷಣೆಯಲ್ಲಿನ ಮಹತ್ತರ ಸಾಧನೆಗಾಗಿ ಇವರು ಪ್ರಶಸ್ತಿಗೆ ಭಾಜನನರಾಗಿದ್ದಾರೆ. ಬೆಂಗಳೂರಿನ ಕೃಷಿ ವಿವಿ ವಾಷರ್ಿಕವಾಗಿ ನೀಡುವ ಈ ಪ್ರಶಸ್ತಿ 25,000 ರು. ನಗದು ಸ್ಮರಣಿಗೆ ಒಳಗೊಂಡಿದೆ. ಗುರುವಾರ ಬೆಂಗಳೂರಿನ ಕೃಷಿ ವಿವಿ ಆವಾರದಲ್ಲಿ ನಡೆದ ಕೃಷಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಕೃಷಿ ಸಚಿವ ಶಿವಶಂಕರ ರೆಡ್ಡಿ ಪ್ರಸಾದ ಹೆಗಡೆಗೆ ಪ್ರಶಸ್ತಿ ಪ್ರಧಾನ ಮಾಡಿದರು. 

ಹೆಗಡೆಯವರು ಕಾಳುಮೆಣಸು, ಅಡಕೆ, ದಾಲ್ಚಿನ್ನಿ ಪಳಗೊಂಡು ಹಲವಾರು ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದು, ಇವರ ಸಾಧನೆಯಲ್ಲಿ ತಂದೆ ರಾಮಾ ಹೆಗಡೆ, ತಾಯಿ ಸರಸ್ವತಿ ಹೆಗಡೆ ಸಹಕಾರವಿದೆ. ಪ್ರಗತಿಪರ ಕೃಷಿಕರಾಗಿರುವ ಇವರಿಗೆ ಈ ಮೊದಲು ರಾಜ್ಯ ಸಕರ್ಾರ ನೀಡುವ ಕೃಷಿ ಪಂಡಿತ ಪ್ರಶಸ್ತಿಯೂ ಲಭಿಸಿದೆ.