ಡಾ. ಕೆ. ರವೀಂದ್ರನಾಥ ಅವರಿಗೆ ಹಂಡೆಸಿರಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹಂಪಿ 27: ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರು ಮತ್ತು ನಾಡಿನ ಹಸ್ತಪ್ರತಿ ಕ್ಷೇತ್ರದ ಹಿರಿಯ ಸಂಶೋಧಕರಾದ ಡಾ. ಕೆ. ರವೀಂದ್ರನಾಥ ಅವರಿಗೆ ಕಲಬುರ್ಗಿಯ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ 2025ನೇ ಸಾಲಿನ “ಹಂಡೆಸಿರಿ” ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಡಾ. ಕೆ. ರವೀಂದ್ರನಾಥ ಅವರು ಹಸ್ತಪ್ರತಿಯ ಗ್ರಂಥ ಸಂಪಾದನೆ, ಚರಿತ್ರೆ-ದಾಖಲು ಸಾಹಿತ್ಯ, ವಚನ ಸಾಹಿತ್ಯ ಹಸ್ತಪ್ರತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.
ಡಾ. ಕೆ. ರವೀಂದ್ರನಾಥ ಅವರ ಸೇವೆಯನ್ನು ಗುರುತಿಸಿ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠವು 2025ನೇ ಸಾಲಿನ “ಹಂಡೆಸಿರಿ” ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆಂದು ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಎಸ್. ಸಿ. ಪಾಟೀಲ್ ಅವರು ತಿಳಿಸಿದ್ದಾರೆ. ಈ ಪ್ರಶಸ್ತಿವು ಫಲಕದೊಂದಿಗೆ ಸೇರಿದಂತೆ 25 ಸಾವಿರ ನಗದು ಒಳಗೊಂಡಿದೆ. ಕೂಡಲಸಂಗಮದಲ್ಲಿ ದಿನಾಂಕ 01 ಮತ್ತು 02 ಫೆಬ್ರವರಿಯಲ್ಲಿ ನಡೆಯುವ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ 3ನೆಯ ಸಮಾವೇಶದಲ್ಲಿ ಹಂಡೆಸಿರಿ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ತಿಳಿಸಿದ್ದಾರೆ.