ಗ್ರಾ.ಪಂ ಅಧ್ಯಕ್ಷರಾಗಿ ದೇವಿಂದ್ರ ಬಡಿಗೇರ ಅವಿರೋಧ ಆಯ್ಕೆ
ದೇವರಹಿಪ್ಪರಗಿ 13: ತಾಲೂಕಿನ ಯಾಳವಾರ ಗ್ರಾಮದ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ದೇವೇಂದ್ರ ಮಾನಪ್ಪ ಬಡಿಗೇರ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಚೆನ್ನಾರೆಡ್ಡಿ ಸೋಮನಗೌಡ ನ್ಯಾಮಣ್ಣವರ ಅವರು ಒಡಂಬಡಿಕೆಯ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿತ್ತು. ತೆರವಾಗಿದ್ದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಬುಧವಾರದಂದು ಚುನಾವಣೆ ನಡೆಯಿತು.
ಸದಸ್ಯ ದೇವಿಂದ್ರ ಮಾನಪ್ಪ ಬಡಿಗೇರ ಹೊರತುಪಡಿಸಿ ಬೇರೆ ಯಾವುದೇ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 16ಸದಸ್ಯರು ಇರುವ ಗ್ರಾ.ಪಂನಲ್ಲಿ ಬೆಂಬಲಿತ 11 ಸದಸ್ಯರು ಹಾಜರಾಗಿದ್ದರು.5 ಜನ ಸದಸ್ಯರು ಗೈರಾಗಿದ್ದರು. ಚುನಾವಣಾಧಿಕಾರಿಯಾಗಿ ಭಾರತಿ ಚೆಲುವಯ್ಯ,ತಾ.ಪಂ ಎಡಿ(ಪಂ.ರಾ) ಶಿವಾನಂದ ಮೂಲಿಮನಿ,ಪಿಡಿಒ ಮಲ್ಲಿನಾಥ ಮಸಳಿ ಕರ್ತವ್ಯ ನಿರ್ವಹಿಸಿದರು.
ಚುನಾವಣೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅಧ್ಯಕ್ಷರು,ತಮ್ಮ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಮಾಜಿ ಗ್ರಾ.ಪಂ ಅಧ್ಯಕ್ಷ ಚೆನ್ನಾರಡ್ಡಿ ನ್ಯಾಮಣ್ಣವರ ಮಾರ್ಗದರ್ಶನ, ಉಪಾಧ್ಯಕ್ಷರ ಹಾಗೂ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬರುವಂಥ ದಿನಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷರಿಗೆ ಗ್ರಾಮದ ಪ್ರಮುಖರು ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸಂಗನಗೌಡ ಹರನಾಳ, ಯುವ ಮುಖಂಡರಾದ ಚನ್ನಬಸಪ್ಪಗೌಡ ನ್ಯಾಮಣ್ಣವರ ಸೇರಿದಂತೆ ಹಲವಾರು ಮುಖಂಡರು ಶುಭ ಹಾರೈಸಿದರು.
ನಂತರ ನೂತನ ಅಧ್ಯಕ್ಷ ದೇವೇಂದ್ರ ಬಡಿಗೇರ ಅವರಿಗೆ ಗ್ರಾಮದ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು, ಅಲ್ಲದೆ ಪಟಾಕಿ ಸೇರಿಸಿ ಸಂಭ್ರಮಿಸಲಾಯಿತು.
ಗ್ರಾಮದ ಪ್ರಮುಖರುಗಳಾದ ನಾನಗೌಡ ನ್ಯಾಮಣ್ಣವರ, ಬಾಪುಗೌಡ ಪಾಟೀಲ, ನೀಲಕಂಠರಾಯಗೌಡ ಮೂಲಿಮನಿ, ಸಂಗನಗೌಡ ತಳೆವಾಡ, ಶಿವಾನಂದ ನಾಗರಾಳ, ಶಿವಾನಂದ ದೊಡಮನಿ, ಸಂಗನಗೌಡ ತೆಗ್ಗಿನಮನಿ, ಮಲ್ಲಣ್ಣ ಅಗಸರ, ಅಲ್ಲಾಭಕ್ಷ ಮುಲ್ಲಾ, ಮಶಾಕ್ ಕಾಚೂರ, ರಾಜು ಕೆಸರಟ್ಟಿ, ಉಪಾಧ್ಯಕ್ಷರಾದ ರಮಜಾನಬಿ ಕಾಚೂರ, ಸದಸ್ಯರುಗಳಾದ ನೀಲಮ್ಮ ಉಪ್ಪಾರ, ಅನಿಲಕುಮಾರ ತೆಲಗರ, ಸಣ್ಣಪ್ಪ ಬಡಗಿ, ನೀಲಮ್ಮ ಬೂದಿಹಾಳ, ಪೀರಮ್ಮ ವಾಲಿಕಾರ, ಲಕ್ಷ್ಮೀಬಾಯಿ ನಾಯ್ಕೋಡಿ, ಮಲ್ಲಿಕಿಂದ್ರಾಯ ಬೈರಿದೊರೆಗಳು, ಚಂದ್ರಶೇಖರ ಕಡಕೋಳಕರ, ತಾ.ಪಂ ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.