ನಗರದ ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗಾಗಿ ಹೋರಾಟಕ್ಕೆ ಸಜ್ಜಾಗಿ: ಚಿತ್ತಾಪೂರ

ಲೋಕದರ್ಶನ ವರದಿ

ಗದಗ 27: ಗದಗ ನಗರದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳು ಕನಿಷ್ಟಮಟ್ಟದ ಮೂಲ ಸೌಕರ್ಯಗಳು ಇಲ್ಲದೇ ಚಿಕ್ಕ-ಚಿಕ್ಕ ಗುಡಿಸಲುಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ, ನಮ್ಮ ಕೊಳಗೇರಿಗಳ ಅಭಿವೃದ್ಧಿಗಾಗಿ ನಮ್ಮ ಸಂಘಟನೆಯಿಂದ ನಿರಂತರ ಹೋರಾಟಗಳನ್ನು ನಡೆಸಿ ನಮ್ಮ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಗದಗ-ಬೆಟಗೇರಿ ನಗರದ ಸುಮಾರು ಕೊಳಚೆ ಪ್ರದೇಶಗಳು ಅಭಿವೃದ್ಧಿ ಕಂಡಿದೆ, ಆದ್ದರಿಂದ ಸ್ಲಂ ನಿವಾಸಿಗಳ ತಮ್ಮ ಪ್ರದೇಶಗಳ ಅಭಿವೃದ್ಧಿಗಾಗಿ ಸಂಘಟನೆಯ ಮೂಲಕ ಹೋರಾಟಕ್ಕೆ ಸಜ್ಜಾಗಬೇಕೆಂದು ಸ್ಲಂ ಯುವ ಸಮಿತಿ ಸಂಚಾಲಕ ಉಸ್ಮಾನ ಚಿತ್ತಾಪೂರ ಕರೆ ನೀಡಿದರು.

ಅವರು ನಗರದ ಹೊಂಬಳನಾಕಾ ಜನತಾ ಕಾಲೋನಿ ಗುಡಿಸಲು ಪ್ರದೇಶದಲ್ಲಿ ಸ್ಲಂ ನಿವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಕೊಳಚೆ ಪ್ರದೇಶದಲ್ಲಿ ಸುಮಾರು ಸಮಸ್ಯಗಳಿಂದ ಸ್ಥಳೀಯ ಜನರು ಬಳಲುತ್ತಿದ್ದು ಕೊಳಗೇರಿಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ಸ್ಲಂ ನಿವಾಸಿಗಳ ಒಂದಾಗಿ ನಮ್ಮ ನ್ಯಾಯಬದ್ದ ಹಕ್ಕುಗಳ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಹೇಳಿದರು. ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ ಮಾತನಾಡಿ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಪ್ರತಿ ವರ್ಷದಂತೆ ಈ ಬಾರಿಯು ಸ್ಲಂ ಜನರ ಉತ್ಸವ ಮತ್ತು ಸಮಾವೇಶವನ್ನು ನಡೆಸಲು ಉದ್ದೇಶಿಸಿದ್ದು, ನಮ್ಮ ಹಕ್ಕೋತ್ತಾಗಳ ಮತ್ತು ನಮ್ಮ ಸ್ಲಂ ಜನರ ಬದುಕು ಬದಲಾವಣೆಗಾಗಿ ಈ ಒಂದು ಸಮಾವೇಶದ ಮೂಲಕ ಆಗ್ರಹಿಸಲಾಗುವುದು. ನಮ್ಮ ಸ್ಲಂ ಪ್ರದೇಶದಲ್ಲಿ ಹೆಚ್ಚು ಸಮಸ್ಯಗಳು ಅನುಭವಿಸುತ್ತಿರುವುದು ನಮ್ಮ ಮಹಿಳೆಯರು, ಇದನ್ನ ತಡೆಗಟ್ಟಲು ಕೊಳಗೇರಿ ಪ್ರದೇಶಗಳ ನಮ್ಮ ಎಲ್ಲಾ ಮಹಿಳೆಯರು ಒಂದಾಗಿ ತಮ್ಮ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರತಿಭಟನೆ ನಡೆಸಲು ಮುಂದಾಗಬೇಕೆಂದು ಹೇಳಿದರು. ಸ್ಲಂ ಯುವ ಸಮಿತಿ ಸಂಘಟನಾ ಸಂಚಾಲಕ ಮಹ್ಮದರಫೀಕ ಧಾರವಾಡ,  ಮಲ್ಲವ್ವ ಎಸ್ ಮ್ಯಾದಾರ, ಉಮಾ ಹಾದಿಮನಿ, ಯಲ್ಲವ್ವ ಚಲವಾದಿ, ಶಶಿಕಲಾ ಚಲವಾದಿ, ದುರ್ಗಮ್ಮ ದಾನಿ, ಮಹಾದೇವಿ ಚಲವಾದಿ, ಸಂಗೀತಾ ದೊಡ್ಡಮಣಿ, ಯಮನಮ್ಮ ಕಡಿಯವರ, ಬಸವರಾಜ ಬೇವಿನಮರದ, ಹೇಮಾ ಹರಿಜನ, ಲಲಿತಾ ಹರಿಜನ, ಗಾಳೇಮ್ಮ ಪೂಜಾರ, ಸುಮಿತ್ರಾ ಕಟಗೇರಿ, ರೇಷ್ಮಾ ಮಾರನಬಸರಿ, ಈರಪ್ಪ ಕುಬಸದ, ಮಾಬುಬ್ಬಿ ಶಿಗ್ಲಿ ಹಾಗೂ ಸ್ಥಳೀಯ ನೂರಾರು ಮಹಿಳೆಯರು ಸಭೆಯಲ್ಲಿ ಉಪಸ್ಥಿತರಿದ್ದರು.