ಕಟ್ಟಡ ಕಾರ್ಮಿಕರಿಗೆ ಸೌಲಭ್ಯಗಳ ಸರಳೀಕರಣಕ್ಕೆ ಆಗ್ರಹ

ಲೋಕದರ್ಶನ ವರದಿ

ಹೊನ್ನಾವರ: ಕಟ್ಟಡ ಕಾಮರ್ಿಕ ಫಲನುಭವಿಗಳಿಗೆ ಕಟ್ಟಡ ಕಾಮರ್ಿಕರ ಕಲ್ಯಾಣ ಮಂಡಳಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಶಿಘ್ರವಾಗಿ ಸರಿಪಡಿಸುವಂತೆ ಆಗ್ರಹಿಸಿ ಇಲ್ಲಿಯ ರಾಜ್ಯ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಫೆಡರೇಷನ್ ತಾಲೂಕ ಸಮಿತಿಯಿಂದ   ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸಿಲ್ದಾರ್ ಮೂಲಕ ಕಟ್ಟಡ ಮತ್ತು ಇತರೇ ನಿಮಣ ಕಾರ್ಮಿಕರ  ಮಂಡಳಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು , ಕಟ್ಟಡ ಕಾರ್ಮಿಕರ  ಕಲ್ಯಾಣ ಮಂಡಳಿಯಿಂದ ಸಿಗುವ ಧನಸಹಾಯದ ಸೌಲಬ್ಯಗಳು ಹಾಗೂ ಹೊನ್ನಾವರ ಕಾರ್ಮಿಕ  ನಿರಿಕ್ಷಕ ಕಛೇರಿಯಲ್ಲಿ ಖಾಯಂ ಕಾರ್ಮಿಕ  ನೀರಿಕ್ಷಕರು ಇಲ್ಲದೇ ಕಟ್ಟಡ ಕಾಮರ್ಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 2016ರಿಂದ ಇಲ್ಲಿಯವರೆಗೆ ತಮ್ಮ ಕಾರ್ಮಿಕರು  ನಿರೀಕ್ಷಕರ ಕಛೇರಿ ಹೊನ್ನಾವರದಲ್ಲಿ ಕಟ್ಟಡ  ಕಾರ್ಮಿಕರು  ಮದುವೆ, ಹೆರಿಗೆ, ಮೆಡಿಕಲ್, ಶೈಕ್ಷಣಿಕ ಹಾಗೂ ಹಲವು ವಿವಿಧ ಸೌಲಭ್ಯಕ್ಕಾಗಿ ಅಜರ್ಿಯನ್ನು ಸಲ್ಲಿಸಿದ್ದು  ಸೌಲಬ್ಯಗಳು ಕಟ್ಟಡ ಕಾಮರ್ಿಕರಿಗೆ ಸರಿಯಾದ ಸಮಯಕ್ಕೆ ಸಿಗದೇ ವಿಳಂಬವಾಗಿದೆ.  ಈ ಕುರಿತು ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ್ದರು ಸಹ ಮಂಡಳಿಯಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರುವುದಿಲ್ಲ. ಕಳೆದ ಎರಡುಮೂರು ವರ್ಷಗಳಿಂದ ಮಂಡಳಿಯಿಂದ ಸಿಗಬೇಕದ ಧನ ಸಹಾಯದ ಸೌಲಭ್ಯಗಳು ಸರಿಯದ ಸಮಯಕ್ಕೆ ಸಿಗದೇ ಕಾಮರ್ಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

     ರಾಜ್ಯಾದ್ಯಂತ ಎಕರೂಪ ನೀತಿ ಜಾರಿಯಲ್ಲಿಲ್ಲ. ಇದರಿಂದ ಸಿ.ಐ.ಟಿ.ಯು ಸಂಯೋಜಿತ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ  ಫೆಡರೇಷನ್ ಸಂಘವು ಕಾಮರ್ಿಕರ ಸಮಸ್ಯೆ ಮತ್ತು ಕೆಲವು ನೂನ್ಯತೆಗಳನ್ನು ಅತಿ ಶೀಘ್ರದಲ್ಲಿ ಸರಿಪಡಿಸುವಂತೆ ಮನವಿಯಲ್ಲಿ ಕೋರಿದ್ದಾರೆ. ಸಮಸ್ಯೆ ಬಗೆಹರಿಸಲು ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಕಾಮರ್ಿಕರ ಕಛೇರಿಯ ಎದುರು ಕಮರ್ಿಕರ ಜೊತೆಗೂಡಿ ನ್ಯಾಯಕ್ಕಾಗಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

 ಪಟ್ಟಣದ ಶರಾವತಿ ವೃತ್ತದಲ್ಲಿ ಆರಂಭವಾದ ಪ್ರತಿಬಟನಾ ಮೆರವಣಿಗೆ ರಾಷ್ಟ್ರೀಯ ಹೆದಾರಿಯಲ್ಲಿ ಸಂಚರಿಸಿ ಮಾಸ್ತಿಕಟ್ಟೆ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಿಭಟನೆ ನಡೆಯಿಸಿ ತಹಸಿಲ್ದಾರ್ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು. ತಹಸಿಲ್ದಾರ್ ಅನುಪಸ್ಥಿತಿಯಲ್ಲಿ ಕಂದಾಯ ಇಲಾಖಾ ಅಧಿಕಾರಿಗ ಭಾಸ್ಕರ್ ಭಟ್ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ  ಕಾರ್ಮಿಕರ ಫೆಡರೇಷನ್ ರಾಜ್ಯ ಉಪಾದ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 11 ತಾಲೂಕಿನಿಂದ ಒಟು 57 ಸಾವಿರಕ್ಕು ಅಧಿಕ ಕಟ್ಟಡ ಕಾರ್ಮಿಕರ ನೊಂದಣಿಯಾಗಿದೆ. ಆದರೆ ಖಾಯಂ ಕಾರ್ಮಿಕ ಅಧಿಕಾರಿಗಳು ಇಲ್ಲ. 11 ತಾಲೂಕಿಗೆ ಒರ್ವ ಕಾರ್ಮಿಕ ನೀರಿಕ್ಷರು ಇದ್ದಾರೆ. ಅದು ಕೂಡಾ ಬೆರೆ ಜಿಲ್ಲೆಯಿಂದ ಬಂದು ಕಾರ್ಯನಿರ್ವಹಿಸಬೇಕು. ಅವರಿಗೆ ಅಜರ್ಿಗಳ ಪರಿಶಿಲಿಸಲು ಆಗುತ್ತಿಲ್ಲ. ಕೂಡಲೇ ಸಿಬ್ಬಂದಿಗಳನ್ನು ನೆಮಕ ಮಾಡಬೇಕು. ಕಲ್ಯಾಣ ಮಂಡಳಿಯಲ್ಲಿ ಎಳುಸಾವಿರದ ಐನೂರು ಕೋಟಿ ಹಣ ಇದೆ ಅದು ಪ್ರತಿವರ್ಷ ಜಾಸ್ತಿ ಆಗುತ್ತಾ ಇದೆ. ಆದರೆ ಫಲಾನುಭವಿಗಳಿಗೆ ಸಿಗಬೇಕಾದ ಸೌಲಬ್ಯ ಸಿಗುತ್ತಿಲ್ಲ ಎಂದರು.

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಫೆಡರೇಷನ್  ಜಿಲ್ಲಾ ಕಾರ್ಯದರ್ಶಿ  ಕಾರ್ಯದರ್ಶಿ  ತಿಲಕ ಜಟ್ಟಿ ಗೌಡ ಮಾತನಾಡಿ, ಈ ಹಿಂದೆ ಹಲವು ಬಾರಿ ಕಾಮರ್ಿಕರ ಸಮಸ್ಯೆ ಪರಿಹರಿಸುವಂತೆ ಮಂಡಳಿಗೆ ಮನವಿ ಸಲ್ಲಿಸಿದ್ದೇವು. ಚುನಾವಣೆಯ ನೆಪವೊಡ್ಡಿ ಎರಡು ತಿಂಗಳು ಕಳೆದರು. ಯಾವುದೇ ನೋಂದಣಿ ಕಾರ್ಯವಾಗಲಿ, ಸೌಲಬ್ಯ ವಿತರಣೆಯಾಗಲಿ ನಡೆಯಲಿಲ್ಲ. ಈ ಹಿನ್ನಲೆಯಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ  ಕಾರ್ಮಿಕರ ಫೆಡರೇಷನ್  ತಾಲೂಕ ಸಮಿತಿ ಅಧ್ಯಕ್ಷ ತಿಮ್ಮಪ್ಪ ಶಂಭು ಗೌಡ, ಉಪಾಧ್ಯಕ್ಷ ಮಂಜು ಹನುಮಂತ ಗೌಡ, ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ  ಕಾರ್ಮಿಕ  ಮಜ್ದೂರ್  ಸಂಘದ ಜಿಲ್ಲಾ ಕಾರ್ಯದರ್ಶಿ  ನಾರಾಯಣ ಜಟ್ಟಿ ಗೌಡ, ತಲೂಕಾ ಅಧ್ಯಕ್ಷ ಮಹಾಬಲೆಶ್ವರ ಚಿಕ್ಕ ಮೇಸ್ತ ಸೇರಿದಂತೆ ಸಂಗದ ನೂರಾರು ಸದಸ್ಯರು ಪಾಲ್ಗೊಂಡಿದ್ದರು.

***********